HomeFresh Newsಶ್ರೀನಿವಾಸ್ ವಿಶ್ವವಿದ್ಯಾಲಯ: 5ನೇ ಲಸಿಕಾ ಶಿಬಿರ

ಶ್ರೀನಿವಾಸ್ ವಿಶ್ವವಿದ್ಯಾಲಯ: 5ನೇ ಲಸಿಕಾ ಶಿಬಿರ

ನಗರದ ಶ್ರೀನಿವಾಸ್ ವಿಶ್ವವಿದ್ಯಾಲಯದ, ಸಿಟಿ ಕ್ಯಾಂಪಸ್ ಪಾಂಡೇಶ್ವರದಲ್ಲಿ ದ.ಕ. ಜಿಲ್ಲಾ ಆರೋಗ್ಯ ಕೇಂದ್ರ, ಜೆಪ್ಪು ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದೊಂದಿಗೆ, ಕ್ಯಾಂಪಸ್‌ನ ವಿದ್ಯಾರ್ಥಿಗಳು, ಶಿಕ್ಷಕರು, ಭೋದಕೇತರ ಸಿಬ್ಬಂದಿಗಳು ಹಾಗೂ ಸಾರ್ವಜನಿಕರಿಗೆ ಕೋವಿಡ್ ಲಸಿಕೆ ನೀಡುವ ಶಿಬಿರವು ಅಕ್ಟೋಬರ್21ರಗುರುವಾರದಂದು ಜರಗಿತು.


ಶ್ರೀನಿವಾಸ್ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ. ಎಸ್. ಐತಾಳ್ ಕೋವಿಡ್ ವಾರಿಯರ್ಸ್‌ಗಳನ್ನು ಈ ಸಂದರ್ಭ ಅಭಿನಂದಿಸಿದರು. ಈ ಸಂದರ್ಭ ಜೆಪ್ಪು ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ವಿದ್ಯಾಹಾಗೂ ಸಿಬ್ಬಂದಿ ವರ್ಗ, ಶ್ರೀನಿವಾಸ್ ವಿಶ್ವವಿದ್ಯಾಲಯದಚೀಫ್ ಮೆಡಿಕಲ್ ಆಫೀಸರ್ ಹಾಗೂ ಪ್ರಸ್ತುತ ವೆನ್ಲೋಕ್ ಜಿಲ್ಲಾ ಆಸ್ಪತ್ರೆಯ ಕೋವಿಡ್ ಚೀಫ್ ಮೆಡಿಕಲ್ ನೋಡಲ್, ಸಾರ್ವಜನಿಕ ಸಂಪರ್ಕ ವೈದ್ಯಾಧಿಕಾರಿ ಡಾ ಎಂ ಅಣ್ಣಯ್ಯ ಕುಲಾಲ್ ಉಳ್ತೂರು, ಕಾಲೇಜಿನ ನೋಡಲ್ ಅಧಿಕಾರಿ ಪ್ರೊ. ನೆಲ್ಸನ್ ಪಿರೇರಾ, ವಿವಿಧ ಕಾಲೇಜಿನ ಡೀನ್‌ಗಳು, ಭೋದಕ – ಭೋದಕೇತರ ಸಿಬ್ಬಂಧಿಗಳು, ವಿದ್ಯಾರ್ಥಿ ಪ್ರತಿನಿಧಿಗಳು ಉಪಸ್ಥಿತರಿದ್ದರು.ಈವೇಳೆ 4೦೦ ಲಸಿಕೆಗಳನ್ನು ವಿದ್ಯಾರ್ಥಿಗಳು, ಬೋಧಕ ಹಾಗೂ ಭೋದರಕೇತರ ಸಿಬ್ಬಂದಿಗಳಿಗೆ ಹಾಗೂ ಸಾರ್ವಜನಿಕರಿಗೆನೀಡಲಾಯಿತು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments