HomeFresh Newsಮಂಗಳೂರು: ತಮಾಮ್ ಫರ್ನೀಚರ್ ವರ್ಲ್ಡ್ ನೂತನ ಶೋರೂಂ ಉದ್ಘಾಟನೆ

ಮಂಗಳೂರು: ತಮಾಮ್ ಫರ್ನೀಚರ್ ವರ್ಲ್ಡ್ ನೂತನ ಶೋರೂಂ ಉದ್ಘಾಟನೆ

ಪೀಠೋಪಕರಣ ಉದ್ಯಮದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ ತಮಾಮ್ ಫರ್ನೀಚರ್ ವರ್ಲ್ಡ್ ನೂತನ ಶೋರೂಂ ನಗರದ ಪಂಪ್‌ವೆಲ್‌ನ ಬಳಿ ಸಿಟಿ ಗೇಟ್ ಬಿಲ್ಡಿಂಗ್‌ನಲ್ಲಿ ಉದ್ಘಾಟನೆಗೊಂಡಿತು.

ಹಿಂದುಸ್ತಾನ್ ಬಾವಾ ಬಿಲ್ಡರ್ಸ್‌ನ ಆಡಳಿತ ನಿರ್ದೇಶಕರಾದ ಬಾವಾ ಅಬ್ದುಲ್ ಖಾದರ್ ಅವರು ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರು.

ಮಂಜೇಶ್ವರ ಶಾಸಕರಾದ ಎ.ಕೆ.ಎಂ ಅಶ್ರಫ್ ಅವರು ಮಾತನಾಡಿ, ತಮಾಮ್ ಸಂಸ್ಥೆಯು ಸಾಮಾನ್ಯ ವರ್ಗದಿಂದ ಶ್ರೀಮಂತನವರೆಗೆ ಕೈಗೆಟಕುವ ದರದಲ್ಲಿ ವಸ್ತುಗಳನ್ನು ಖರೀದಿ ಮಾಡಬಹುದಾದಂತಹ ಸಂಸ್ಥೆಯಾಗಿದ್ದು, ಈಗಾಗಲೇ ಪೀಠೋಪಕರಣ ಉದ್ಯಮದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಈ ಸಂಸ್ಥೆಯು ಇನ್ನಷ್ಟು ಯಶಸ್ಸು ಕಾಣಲಿ ಎಂದು ಶುಭ ಹಾರೈಸಿದರು. 

ಮನಪಾ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಮಾತನಾಡಿ, ಮಂಗಳೂರು ಸ್ಮಾರ್ಟ್ ಆಗುತ್ತಿರುವಾಗ ಪೀಠೋಪಕರಣಗಳ ಇಂತಹ ಸ್ಮಾರ್ಟ್ ಮಳಿಗೆಗಳು ನಗರದ ಸೌಂದರ್ಯ ಹೆಚ್ಚಿಸುತ್ತಿವೆ. ಉತ್ತಮ ಗುಣಮಟ್ಟದ, ವಿನ್ಯಾಸದ ಪೀಠೋಪಕರಣಗಳನ್ನು ಮಿತದರದಲ್ಲಿ ನೀಡುವ ಮೂಲಕ ಗ್ರಾಹಕರ ಮನ ಗೆಲ್ಲಲಿ ಎಂದು ಹಾರೈಸಿದರು.

ನಗರದ ಪಂಪ್ ವೆಲ್ ತಖ್ವಾ ಮಸ್ಜಿದ್ ಖತೀಬ್ ಯಾಸಿರ್ ಸಖಾಫಿ ಅಲ್ ಅಝ್ಹರಿ ಮತ್ತು ನಗರದ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ವಂ.ನೆಲ್ಸನ್ ಧೀರಜ್ ಪಾಯಿಸ್ ಶುಭ ಹಾರೈಸಿದರು.

ಈ ಸಂದರ್ಭ ಅತಿಥಿಗಳಾಗಿ ಸ್ಥಳೀಯ ಕಾರ್ಪೊರೇಟರ್ ಸಂದೀಪ್ ಗರೋಡಿ, ಗೋಲ್ಡ್ ಕಿಂಗ್ ಫ್ಯಾಶನ್ ಜ್ಯುವೆಲ್ಲರಿಯ ಆಡಳಿತ ನಿರ್ದೇಶಕ ಮುಹಮ್ಮದ್ ಹನೀಫ್, ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಬಿ.ಎ.ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಮಂಗಳೂರು ಇಸ್ಲಾಮಿಕ್ ಕಲ್ಚರಲ್ ಸೆಂಟರ್ನ ಪ್ರಧಾನ ಕಾರ್ಯದರ್ಶಿ ಬಿ.ಎಂ.ಮುಮ್ತಾಝ್ ಅಲಿ, ಮಂಗಳೂರು ಲೇಡಿಸ್ ಕ್ಲಬ್‌ನ ಕಾರ್ಯದರ್ಶಿ ಜಿನೆಟಾ ಡಿಸೋಜ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಮಂಗಳೂರು ತಮಾಮ್ ಫರ್ನಿಚರ್ ವರ್ಲ್ಡ್‌ನ ಪಾಲುದಾರರಾದ ರಫೀಕ್ ಕೃಷ್ಣಾಪುರ, ಅಬೂ ತಮಾಮ್ ಮತ್ತು ಉಪ್ಪಳ, ಬಂದ್ಯೋಡ್, ಉದ್ಯಾವರ, ಮಳಿಗೆಗಳ ಪಾಲುದಾರರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು. ಮನೋಜ್ ವಾಮಂಜೂರು ಕಾರ್ಯಕ್ರಮ ನಿರೂಪಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments