ಮಂಗಳೂರು: ಬ್ರಹ್ಮಸಮಾಜ ಕಾಂಪ್ಲೆಕ್ಸ್‌ನಲ್ಲಿ ಹೈಯರ್ ಎಕ್ಸ್‌ಕ್ಲೂಸಿವ್ ಸ್ಟೋರ್ ಶುಭಾರಂಭ

ಮಂಗಳೂರಿನ ನವಭಾರತ್ ವೃತ್ತದಲ್ಲಿರುವ ಬ್ರಹ್ಮ ಸಮಾಜ ಕಾಂಪ್ಲೆಕ್ಸ್‌ನಲ್ಲಿ ಡಿಜಿಟಲ್ ಪ್ಲಾನೆಟ್‌ನವರ ಹೈಯರ್ ಎಕ್ಸ್ ಕ್ಲೂಸಿವ್ ಸ್ಟೋರ್‌ನ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ವಿಶ್ವದ ನಂಬರ್ ವನ್ ಹೋಮ್ ಅಪ್ಲೈಯನ್ಸಸ್ ಹಾಗೂ ಭಾರತದ ಮೂರನೇ ಅತೀ ದೊಡ್ಡ ಬ್ರ್ಯಾಂಡ್ ಆಗಿರುವ ಹೈಯರ್‌ನ ಎಕ್ಸ್‌ಕ್ಲೂಸಿವ್ ಸ್ಟೋರ್ ಮಂಗಳೂರಿನಲ್ಲಿ ಶುಭಾರಂಭಗೊಂಡಿತು. ನೂತನ ಹೈಯರ್‌ನ ಎಕ್ಸ್‌ಕ್ಲೂಸಿವ್ ಸ್ಟೋರ್‌ನ್ನು ಮೂಡುಬಿದಿರೆಯ ಆಳ್ವಾಸ್ ಸಂಸ್ಥೆಯ ಚೇರ್ಮನ್ ಡಾ. ಎಂ. ಮೋಹನ್ ಆಳ್ವಾ ಅವರು ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರು.

ಹೈಯರ್ ಕಂಪೆನಿಯ ಪ್ರೋಡಕ್ಟ್‌ಗಳನ್ನು ಶಾಸಕ ವೇದವ್ಯಾಸ ಕಾಮತ್ ಮತ್ತು ಮಂಗಳೂರು ಪಾಲಿಕೆಯ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಮತ್ತು ಎಕ್ಸ್‌ಪರ್ಟ್ ಸಮೂಹ ಸಂಸ್ಥೆಗಳ ಸ್ಥಾಪಕರು ಮತ್ತು ಚೇರ್ಮನ್ ಪ್ರೊ. ನರೇಂದ್ರ ಎಲ್ ನಾಯಕ್ ಉದ್ಘಾಟಿಸಿದರು.

ನಂತರ ನಡೆದ ಸಭಾ ಕಾರ್ಯಕ್ರಮವನ್ನು ಗಣ್ಯರು ದೀಪ ಬೆಳಗಿಸಿ ಉದ್ಘಾಟಿಸಿದರು. ಡಿಜಿಟಲ್ ಪ್ಲಾನೆಟ್‌ನ ಪಾಲುದಾರ ಸ್ವೀಕೃತ್ ಬೋಳೂರು ಪ್ರವೀಣ್ ಅವರು ಅತಿಥಿಗಳನ್ನು ಸ್ವಾಗತಿಸಿದರು.

ಮೂಡುಬಿದಿರೆಯ ಆಳ್ವಾಸ್ ಸಂಸ್ಥೆಯ ಚೇರ್ಮನ್ ಡಾ. ಎಂ. ಮೋಹನ್ ಆಳ್ವಾ ಅವರು ಮಾತನಾಡಿ, ತನ್ನ ಹುಟ್ಟೂರಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಛಲಹೊತ್ತು, ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದ ಹೈಯರ್ ಕಂಪನಿಯ ಪ್ರೋಡಕ್ಟ್‌ಗಳನ್ನು ಮಂಗಳೂರಿನಲ್ಲಿ ಮಾರಾಟ ಮಾಡುತ್ತಿರುವುದು ಹೆಮ್ಮೆಯ ವಿಚಾರ. ಸ್ವೀಕೃತ್ ಅವರು ನಡೆಸುವ ಈ ಉದ್ಯಮ ಯಶಸ್ಸನ್ನು ಕಾಣಲಿ ಎಂದು ಹಾರೈಸಿದರು.

ಮಂಗಳೂರು ಪಾಲಿಕೆಯ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅವರು ಮಾತನಾಡಿ, ಹೈಯರ್ ಕಂಪನಿ ಜಗತ್ಪಸಿದ್ಧಿಯಾಗಿದ್ದು, ಹೊಸ ಹೊಸ ವಿನ್ಯಾಸದ ಉತ್ಪನ್ನಗಳ ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೂಲಕ ಕ್ರಾಂತಿಯನ್ನೇ ಸೃಷ್ಟಿಸಿದ್ದಾರೆ. ಅಂತಹ ಹೈಯರ್ ಕಂಪನಿಯ ವಸ್ತುಗಳು ಮಂಗಳೂರಿನಲ್ಲಿ ಇದೀಗ ಒಂದೇ ಸೂರಿನಡಿ ಲಭ್ಯವಿದೆ. ಮಂಗಳೂರಿನ ಜನತೆ ಇದರ ಸದುಪಯೋಗವನ್ನು ಪಡೆದುಕೊಳ್ಳಿ ಎಂದು ಹೇಳಿದರು.

ಎಕ್ಸ್‌ಪರ್ಟ್ ಸಮೂಹ ಸಂಸ್ಥೆಗಳ ಸ್ಥಾಪಕರು ಮತ್ತು ಚೇರ್ಮನ್ ಪ್ರೊ. ನರೇಂದ್ರ ಎಲ್ ನಾಯಕ್ ಅವರು ಒಬ್ಬ ವ್ಯಕ್ತಿ ಉದ್ಯೋಗ ಮಾಡಬೇಕು ಅಂದರೆ ಅದಕ್ಕೆ ಟ್ಯಾಲೆಂಟ್ ಮತ್ತು ವಿನಯತೆ ಮುಖ್ಯ. ಅಂತಹ ಟ್ಯಾಲೆಂಟ್ ಮತ್ತು ವಿನಯತೆ ಸ್ವೀಕೃತ ಅವರಲ್ಲಿದೆ ಎಂದ ಅವರು, ಈ ಉದ್ಯಮ ಯಶಸ್ವಿಯಾಗಲಿ ಎಂದು ಹಾರೈಸಿದರು.

ಹೈಯರ್ ಭಾರತ್ ಪ್ರೈವೇಟ್ ಲಿಮಿಟೆಡ್‌ನ ವಲಯ ಮುಖ್ಯಸ್ಥರಾದ ಬಸವರಾಜ್ ಪಾಟೀಲ್ ಅವರು ಮಾತನಾಡಿ, ಹೊಸ ವರ್ಷದ ದಿನವೇ ಮಂಗಳೂರಿನಲ್ಲಿ ಹೈಯರ್ ಎಕ್ಸ್‌ಕ್ಲೂಸಿವ್ ಸ್ಟೋರ್ ಶುಭಾರಂಭಗೊಂಡಿದೆ. ಕರ್ನಾಟಕದಲ್ಲಿ ಮೂರನೇ ಸ್ಟೋರ್ ಇದಾಗಿದೆ. ವಿಶ್ವದ ನಂಬರ್ 1 ಕಂಪೆನಿ ಹೈಯರ್ ಆಗಿದ್ದು, ಇದೀಗ ಮಂಗಳೂರಿನಲ್ಲಿ ಸ್ಟೋರ್ ಆರಂಭಗೊಂಡಿರುವುದು ಖುಷಿಯ ವಿಚಾರ ಎಂದು ಹೇಳಿದರು.

ಈ ಸಂದರ್ಭದಲ್ಲಿ ಡಿಜಿಟಲ್ ಪ್ಲಾನೆಟ್‌ನ ಸ್ವೀಕೃತ್ ಅವರ ಮಾತೃಶ್ರೀಯವರಾದ ವಸಂತಿ ಬಿ.ಎಮ್, ಬ್ರ್ಯಾಂಚ್ ಮ್ಯಾನೇಜರ್ ಪಿ. ಪ್ರವೀಣ್, ಏರಿಯಾ ಮ್ಯಾನೇಜರ್ ರಾಜೇಶ್, ಮಾರ್ಕೆಟಿಂಗ್ ಇನ್‌ಚಾರ್ಜ್ ಬಸವನ್‌ಗೌಡ ಮತ್ತಿತರರು ಉಪಸ್ಥಿತರಿದ್ದರು.

ಇಲ್ಲಿ ಹೈಯರ್ ಕಂಪನಿಯ ಪ್ರೋಡಕ್ಟ್‌ಗಳಾದ ಟಿವಿ, ರೆಫ್ರಿಜರೇಟರ್, ವಾಷಿಂಗ್ ಮಿಷನ್, ಏರ್ ಕಂಡಿಷನರ್‍ಸ್, ಹೋಮ್ ಅಪ್ಲೈಯನ್ಸ್‌ಸಸ್ ಒಂದೇ ಸೂರಿನಡಿ ಲಭ್ಯವಿದೆ. ನೂತನ ಸ್ಟೋರ್‌ನ ಉದ್ಘಾಟನಾ ಪ್ರಯುಕ್ತ ಜನವರಿ ೧ರಿಂದ ಜ.೧೦ರ ವರೆಗೆ ಪ್ರೋಡೆಕ್ಟ್‌ಗಳ ಖರೀದಿಯ ಮೇಲೆ ವಿಶೇಷ ಬಹುಮಾನಗಳು ಸಿಗಲಿದೆ.

Related Posts

Leave a Reply

Your email address will not be published.