ಹಾಡು ಕುಣಿತವೇ ಮುಖ್ಯವಾಗಿರುವ ಮೈಕೆಲ್ ಜಾಕ್ಸನ್ ಚಲನಚಿತ್ರ ಲೋಕದೆಲ್ಲೆಡೆ ಬಿಡುಗಡೆಯಾಗಿದ್ದು, ಗುದ್ದು ವಿಮರ್ಶೆಯ ನಡುವೆಯೂ ಚಲನಚಿತ್ರ ಗೆದ್ದು ಹಣ ಬಾಚುತ್ತಿದೆ ಎನ್ನಲಾಗಿದೆ.

ದಂತ ಕತೆಯೇ ಆಗಿರುವ ಮೈಕೆಲ್ ಜಾಕ್ಸನ್‌ರ ಜೀವನ ಚರಿತ್ರೆ ಆಧರಿಸಿದ ಸಿನಿಮಾ ಮೈಕೆಲ್ ಜಾಕ್ಸನ್. ಮೈಕೆಲ್ ಜಾಕ್ಸನ್‌ರ ಸೋದರಳಿಯ ಜಾಫರ್ ಜಾಕ್ಸನ್ ಮೈಕೆಲ್ ಜಾಕ್ಸನ್‌ರ ಪಾತ್ರದಲ್ಲಿ ಇದ್ದಾರೆ.

ಶುಕ್ರವಾರ ಚಿತ್ರ ಬಿಡುಗಡೆಯಾಗಿದ್ದು, ವಿಮರ್ಶೆಗಳು ವಿರುದ್ಧವಾಗಿ ಬರೆದಿದ್ದರೂ ಪ್ರಪಂಚದ ಎಲ್ಲ ಕಡೆ ಮೈಕೆಲ್ ಜಾಕ್ಸನ್ ಮೊದಲ ದಿನವೇ ದಾಖಲೆ ಬರೆದಿರುವುದಾಗಿ.

ಭಾರತದಲ್ಲಿ ಮೈಕೆಲ್ ಜಾಕ್ಸನ್ ಪ್ರಿಪೇಡ್ ಶುಕ್ರವಾರದ ಶೋ ಮೂಲಕ 6.60 ಕೋಟಿ ರೂಪಾಯಿ ಗಳಿಸಿದ್ದು, ಇದು ಧುರಂದರ್ -2 ಮೊದಲಾದ ಭಾರತೀಯ ಚಿತ್ರಗಳ ಮೊದಲ ದಿನದ ಪ್ರಿವ್ಯೂ ಶೋಗಿಂತ ಹೆಚ್ಚು ಎಂಬುದು ವಿಶೇಷ.

ಉಳಿದಂತೆ ಭಾರತದ ಚಿತ್ರಮಂದಿರಗಳಲ್ಲಿ ಉತ್ತರ ಭಾರತದ ಕೆಲವೆಡೆ ಮಾತ್ರ ಮೈಕೆಲ್ ಜಾಕ್ಸನ್ ಬಿಡುಗಡೆ ಆಗಬೇಕು. ಮೊದಲ ದಿನ ಮೈಕೆಲ್ ಜಾಕ್ಸನ್ ಉತ್ತರ ಅಮೆರಿಕ ಖಂಡದಲ್ಲಿ ಮೂರು ಕೋಟಿ ಡಾಲರ್ ಗಲ್ಲಾ ಪೆಟ್ಟಿಗೆ ಗಳಿಸಿದೆ.

ಹಾಡು, ಕುಣಿತದ ಸಿನಿಮಾವಾದ್ದರಿಂದ ಜಾಗತಿಕವಾಗಿ ಬಿಡುಗಡೆಯಾದರೂ ಸೀಮಿತ ದೇಶ ಮತ್ತು ಸೀಮಿತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಉತ್ತರ ಭಾರತದ ಚಿತ್ರಂದಿರಗಳಲ್ಲಿ ಮೈಕೆಲ್ ಜಾಕ್ಸನ್ ಏಳು ಕೋಟಿ ಡಾಲರ್ ಗಳಿಸಿದೆ.

ಅಂತೋಣಿ ಫುಖಾ ನಿರ್ದೇಶನದ ಈ ಚಿತ್ರಕ್ಕೆ ಜಾನ್ ಲೋಗಾನ್ ಕತೆ ಬರೆದಿದ್ದಾರೆ. ನಿಯಾ ಲಾಂಗ್, ಲಾವ್ರಾ ಹ್ಯಾರಿಯರ್, ಮೈಲ್ಸ್ ಟೆಲ್ಲರ್, ಕಾಲ್ಮನ್ ಡೊಮಿಂಗೋ ಮೊದಲಾದವರು ಪಾತ್ರ ವರ್ಗದಲ್ಲಿದ್ದಾರೆ.

