HomeFresh Newsಅ.26ರಂದು ‘ಅಘಮ್ಯಾ’ ಕನ್ನಡ ಟೆಲಿ ಫಿಲ್ಮ್ ಬಿಡುಗಡೆ

ಅ.26ರಂದು ‘ಅಘಮ್ಯಾ’ ಕನ್ನಡ ಟೆಲಿ ಫಿಲ್ಮ್ ಬಿಡುಗಡೆ

ಮಂಗಳೂರು: ಅರ್ಥಾ ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಾಣಗೊಂಡಿರುವ ‘ಅಘಮ್ಯಾ’ ಕನ್ನಡ ಟೆಲಿ ಫಿಲ್ಮ್ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಅಕ್ಟೋಬರ್ 26ರಂದು ಮಂಗಳೂರಿನ ಭಾರತ್ ಸಿನಿಮಾಸ್‌ನಲ್ಲಿ ಈ ಚಿತ್ರ ತೆರೆಕಾಣಲಿದೆ.

‘ಒಂದು ನಿರ್ಧಾರ, ಒಂದು ಜೀವನ…’ ಎಂಬ ಅರ್ಥಪೂರ್ಣ ಟ್ಯಾಗ್‌ಲೈನ್‌ನೊಂದಿಗೆ ಮೂಡಿಬಂದಿರುವ ಈ ಟೆಲಿ ಫಿಲ್ಮ್‌ಗೆ ಪ್ರಿಶನ್ ಶೆಟ್ಟಿ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ವಿಭಿನ್ನ ಕಥಾಹಂದರದ ಮೂಲಕ ಪ್ರೇಕ್ಷಕರ ಗಮನ ಸೆಳೆಯಲು ಚಿತ್ರತಂಡ ಸಜ್ಜಾಗಿದೆ.

ಚಿತ್ರಕ್ಕೆ ಅಕ್ಷಿತ್ ರೈ ನಿರ್ಮಾಪಕರಾಗಿದ್ದು, ನಿಧಿ ರೈ ಫೈನಲ್‌ಕಟ್ ಛಾಯಾಗ್ರಹಣ ಮತ್ತು ಸಂಕಲನದ ಜವಾಬ್ದಾರಿ ನಿರ್ವಹಿಸಿದ್ದಾರೆ. ಉತ್ಸವ್ ವಾಮಂಜೂರು ಚಿತ್ರಕಥೆ ರಚಿಸಿದ್ದು, ವಿಶ್ವಾಸ್ ಅಡ್ಯಾರ್ ಸಹ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ಅವಿನಾಶ್ ಎಸ್. ಆಪ್ತ ಸಂಭಾಷಣೆ ಬರೆದಿದ್ದು, ಆಕಾಶ್ ರೆಡ್ಡಿ ಸಂಗೀತ ಸಂಯೋಜಿಸಿದ್ದಾರೆ.

ವಿಭಿನ್ನ ಕಥಾವಸ್ತು ಹಾಗೂ ಹೊಸ ಪ್ರಯತ್ನದೊಂದಿಗೆ ಮೂಡಿಬರುತ್ತಿರುವ ‘ಅಘಮ್ಯಾ’ ಟೆಲಿ ಫಿಲ್ಮ್ ಕರಾವಳಿ ಭಾಗದ ಸಿನಿಪ್ರಿಯರಲ್ಲಿ ನಿರೀಕ್ಷೆ ಮೂಡಿಸಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments