HomeFresh Newsಥಾಮಸ್ ಕಪ್ ಬ್ಯಾಡ್ಮಿಂಟನ್ ಫೈನಲ್ಸ್|ಆರಂಭಿಕ ಗೆಲುವು ಕಂಡ ಭಾರತ| ಡೆನ್ಮಾರ್ಕಿನ ಹಾರ್ಸೆಲ್ಸ್ ಪಂದ್ಯಾವಳಿ

ಥಾಮಸ್ ಕಪ್ ಬ್ಯಾಡ್ಮಿಂಟನ್ ಫೈನಲ್ಸ್|ಆರಂಭಿಕ ಗೆಲುವು ಕಂಡ ಭಾರತ| ಡೆನ್ಮಾರ್ಕಿನ ಹಾರ್ಸೆಲ್ಸ್ ಪಂದ್ಯಾವಳಿ

ಡೆನ್ಮಾರ್ಕಿನ ಹಾರ್ಸೆಲ್ಸ್‌ನಲ್ಲಿ ನಡೆಯುತ್ತಿರುವ ಥಾಮಸ್ ಕಪ್ ಬ್ಯಾಡ್ಮಿಂಟನ್ ಫೈನಲ್ಸ್ ಪಂದ್ಯಾವಳಿಯಲ್ಲಿ ಭಾರತವು ಕೆನಡಾದ ಎದುರು 4-1ರ ಗೆಲುವು ಕಂಡು ಯಶಸ್ವಿಯಾಗಿ ಮೊದಲ ತಡಮೆ ದಾಟಿತು.


ಸಿಂಗಲ್ಸ್‌ನಲ್ಲಿ ಆಯುಷ್ ಶೆಟ್ಟಿ, ಡಬಲ್ಸ್‌ನಲ್ಲಿ ಸಾತ್ವಿಕ್ ಸಾಯಿರಾಜ್ ರಣಕಿ ರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಜೋಡಿಯು ಉತ್ತಮ ಗೆಲುವು ದಾಖಲಿಸಿತು. ಜಾಗತಿಕವಾಗಿ ಕೆನಡಾ ಬ್ಯಾಡ್ಮಿಂಟನ್ ಕಲಿ ಅಲ್ಲದಿದ್ದರೂ ಭಾರತವು ಕೆನಡಾ ತಂಡದೆದುರು ತನ್ನ ಗುಂಪಿನ ಮೊದಲ ಪಂದ್ಯವನ್ನು 4-1ರ ಅಂತರದಿಂದ ಅರ್ಹವಾಗಿ ಗೆದ್ದಿತು.

ಎ ಗುಂಪಿನ ಈ ಪಂದ್ಯದಲ್ಲಿ ಲೋಕ ಮಟ್ಟದಲ್ಲಿ ಹದಿಮೂರನೆಯ ರ್‍ಯಾಂಕ್ ಹೊಂದಿರುವ ಕೆನಡಾದ ವಿಕ್ಟರ್ ಲೈ ಅವರು ಭಾರತದ ಲಕ್ಷ್ಯ ಸೇನ್ ಅವರನ್ನು ಸೋಲಿಸಿ ಭಾರತವು ಪೂರ್ಣ ಮೇಲುಗೈ ಪಡೆಯುವುದನ್ನು ತಡೆದರು.


ಡಬಲ್ಸ್‌ನಲ್ಲಿ ಸಾತ್ವಿಕ್ ಚಿರಾಗ್ ಜೋಡಿಯು ಜೋನಾಥನ್ ಟಿಸಾನ್ ಹಾಗೂ ಕೆವಿನ್ ಲೀ ವಿರುದ್ಧ ಗೆದ್ದರು. ಸಿಂಗಲ್ಸ್‌ನಲ್ಲಿ ಆಯುಷ್ ಶೆಟ್ಟಿ ಕೆನಾಡದ ಬ್ರಿಯಾನ್ ಲಾಂಗ್‌ರನ್ನು ನೇರ ಸೆಟ್‌ಗಳಲ್ಲಿ ಕೆಡವಿದರು.

ಇನ್ನೊಂದು ಡಬಲ್ಸ್‌ನಲ್ಲಿ ಅರ್ಜುನ್ ಹಾಗೂ ಹರಿಹರನ್ ಜೋಡಿಯು ಅಲೆಗ್ಸಾಂಡರ್ ಲಿಂಡ್ಮನ್ ಮತ್ತು ನೈಲ್ ಯಕುರಾ ಜೋಡಿಯನ್ನು ಸೋಲಿಸಿತು. ಮಗದೊಂದು ಸಿಂಗಲ್ಸ್‌ನಲ್ಲಿ ಕೆ. ಶ್ರೀಕಾಂತ್ ಅವರು ಜೋಶುವಾ ಎನ್ಗಿಯಾನ್‌ರಿಗೆ ಗೆಲ್ಲಲು ಅವಕಾಶ ನೀಡಲಿಲ್ಲ.


ಹಾಲಿ ವಿಶ್ವ ಚಾಂಪಿಯನ್ ಚೀನಾ ತಂಡವು ಆಸ್ಟ್ರೇಲಿಯಾದ ಎದುರು 5-0ಯಿಂದ ಗೆದ್ದು, ಈಗಲೂ ಬಲವಾದ ತಂಡ ನಾನೇ ಎಂದು ಹೇಳಿತು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments