HomeFresh Newsಮೂಡುಬಿದಿರೆಯಲ್ಲಿ ಗಾಳಿ -ಮಳೆ : ಮನೆಗಳಿಗೆ ಹಾನಿ

ಮೂಡುಬಿದಿರೆಯಲ್ಲಿ ಗಾಳಿ -ಮಳೆ : ಮನೆಗಳಿಗೆ ಹಾನಿ

ಮೂಡುಬಿದಿರೆ: ತಾಲೂಕಿನಲ್ಲಿ ಸೋಮವಾರ ಸಂಜೆ ಬೀಸಿದ ಗಾಳಿ ಮನೆಗೆ ಮಾರ್ಪಾಡಿ ಗ್ರಾಮದ ಮರಿಯಾಡಿ ಪರಿಸರದಲ್ಲಿ ಹಲವು ಮನೆಗಳ ಮೇಲ್ಚಾವಣಿ ಹಾನಿಗೊಳಗಾಗಿವೆ.

ಸ್ಥಳೀಯ ನಿವಾಸಿಗಳಾದ ಆಜೀಜ್ ಹಾಗೂ ಗಣೇಶ್ ಅವರ ವಾಸ್ತವ್ಯದ ಮನೆಯ ಮೇಲ್ಚಾವಣಿಗಳು ಮಳೆಯ ಆರ್ಭಟಕ್ಕೆ ಸಂಪೂರ್ಣ ಹಾನಿಯಾಗಿವೆ. ದಿನೇಶ್ ಅವರ ಮನೆಯ ಸಿಮೆಂಟ್ ಶೀಟುಗಳು ಗಾಳಿಗೆ ಹಾರಿ ಹೋಗಿದೆ.

ಇದೇ ಪರಿಸರದ ಚಂದ್ರಶೇಖರ ಆಚಾರ್ಯ ಅವರ ಮನೆಯ ಹಂಚುಗಳು ಪುಡಿಯಾಗಿದ್ದು, ಅಮಿತಾ ಶೆಟ್ಟಿ ಅವರ ಮನೆಯ ಹಂಚು ಹಾಗೂ ಸಿಮೆಂಟ್ ಶೀಟುಗಳಿಗೆ ಹಾನಿ ಸಂಭವಿಸಿದೆ. ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments