HomeFresh Newsವಿದ್ಯುತ್ ತಂತಿಗಳ ಬದಲಾವಣೆಗೆ ಆಗ್ರಹಿಸಿ ಟೆಲ್ಲಿಸ್ ನಗರದ ಗ್ರಾಮಸ್ಥರಿಂದ ಮೆಸ್ಕಾಂ ಮುಂಭಾಗ ಪ್ರತಿಭಟನೆ

ವಿದ್ಯುತ್ ತಂತಿಗಳ ಬದಲಾವಣೆಗೆ ಆಗ್ರಹಿಸಿ ಟೆಲ್ಲಿಸ್ ನಗರದ ಗ್ರಾಮಸ್ಥರಿಂದ ಮೆಸ್ಕಾಂ ಮುಂಭಾಗ ಪ್ರತಿಭಟನೆ

ಮೂಡುಬಿದಿರೆ: ಕಳೆದ 34 ವರ್ಷಗಳಿಂದ ಬಳಕೆಯಲ್ಲಿರುವ ಹಳೆಯ ವಿದ್ಯುತ್ ತಂತಿಗಳನ್ನು ಬದಲಾಯಿಸುವಂತೆ ಆಗ್ರಹಿಸಿ, ಹೊಸಬೆಟ್ಟು ಗ್ರಾಮ ಪಂಚಾಯತ್ ಸದಸ್ಯ ವಿಲ್ಫ್ರೆಡ್ ಮೆಂಡೋನ್ಸಾ ಅವರ ನೇತೃತ್ವದಲ್ಲಿ ಟೆಲ್ಲಿಸ್ ನಗರ ನಿವಾಸಿಗಳು ಸೋಮವಾರ ಮೆಸ್ಕಾಂ ಕಚೇರಿಯ ಮುಂದೆ ಶಾಂತಿಯುತ ಪ್ರತಿಭಟನೆ ನಡೆಸಿದರು.

ಹೊಸಬೆಟ್ಟು ಟೆಲ್ಲಿಸ್ ನಗರ ಟ್ರಾನ್ಸ್‌ಫಾರ್ಮರ್‌ಗೆ ಅಳವಡಿಸಿರುವ ವಿದ್ಯುತ್ ತಂತಿಗಳು ಹಳೆಯದ್ದಾಗಿದ್ದು ತುಂಡಾಗಿ ನೆಲಕ್ಕೆ ಬೀಳುತ್ತಿವೆ. ಈ ಬಗ್ಗೆ ಹಲವುಬಾರಿ ಮೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಇದರಿಂದ ಬೇಸತ್ತ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮೆಸ್ಕಾಂ ಅಧಿಕಾರಿಗಳು ಮುಂದಿನ 15 ದಿನಗಳೊಳಗೆ ಕಾಮಗಾರಿ ಆರಂಭಿಸುವುದಾಗಿ ಭರವಸೆ ನೀಡಿದರು.
ನಿಗದಿತ ಅವಧಿಯೊಳಗೆ ಕಾಮಗಾರಿ ಆರಂಭಿಸದಿದ್ದರೆ ಮತ್ತೊಮ್ಮೆ ಪ್ರತಿಭಟನೆ ನಡೆಸಲಾಗುವುದು ಎಂದು ಟೆಲ್ಲಿಸ್ ನಗರ ನಿವಾಸಿಗಳು ಎಚ್ಚರಿಕೆ ನೀಡಿದರು.
ಹೊಸಬೆಟ್ಟು‌ ಕಥೊಲಿಕ್ ಸಭಾ ಘಟಕಾ ಅಧ್ಯಕ್ಷ ಸೆಲ್ವಿನ್ ಜೂಡ್ ಕುಲಾಸೊ, ಟೆಲ್ಲಿಸ್ ನಗರ ನಿವಾಸಿಗಳು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments