HomeFresh Newsಬ್ಯಾಕಾರಿಯಾ ಆಂಗುಲಾಟ್ ಹಣ್ಣು | ಬೆಲಿಂಬಿಂಗ್ ಕೆಂಪನೆಯ ಸಿಹಿ ಹುಳಿ ಹಣ್ಣು | ಈಗ ಕೇರಳದಲ್ಲೂ...

ಬ್ಯಾಕಾರಿಯಾ ಆಂಗುಲಾಟ್ ಹಣ್ಣು | ಬೆಲಿಂಬಿಂಗ್ ಕೆಂಪನೆಯ ಸಿಹಿ ಹುಳಿ ಹಣ್ಣು | ಈಗ ಕೇರಳದಲ್ಲೂ ಸಿಗುವುದಂತೆ ಬೆಲಿಂಬಿಂಗ್

ಬಿಂಬುಳಿ, ಬಿಂಬು ಹುಳಿ ಹೆಸರು ಮಲಯಾ ಮೂಲದ ಬೆಲಿಂಬಿಂಗ್ ಹಣ್ಣಿನಿಂದ ಬಂದಿದೆ. ಇದರಲ್ಲಿ ಹಲವು ಜಾತಿಗಳು ಇವೆ.

ಕೆಂಪನೆಯ ಒಂದು ಬೆಲಿಂಬಿಂಗ್ ಮಲಯಾ, ಇಂಡೋನೇಶಿಯಾ ಮೂಲದ್ದು. ಕೊಂಗಣ ಇಲ್ಲವೇ ಆಗ್ನೇಯ ಏಶಿಯಾದ ತುಂಬ ಕಂಡುಬರುತ್ತದೆ. ತುಳುನಾಡಿನಲ್ಲಿ ಸಿಗುವ ಧಾರೆ ಪುಳಿ ಅದೇ ಜಾತಿ, ಅಲ್ಲಿನ ಮೂಲದ್ದು.

ವಿಶೇಷವಾದ ಕೋನಗಳ ಆಕಾರ ಹೊಂದಿರುವ ಕೆಂಪು ಬಣ್ಣದ ಹಣ್ಣು ಬೆಲಿಂಬಿಂಗ್. ಹಾಗಾಗಿ ಅದನ್ನು ಬ್ಯಾಕಾರೊಯಾ ಆ?ಯಂಗುಲಾಟ ಎನ್ನಲಾಗಿದೆ. ಕೆಂಪನೆಯ ಹಣ್ಣಿನ ತಿರುಳು ಸಿಹಿ ಹುಳಿ ರುಚಿ ಹೊಂದಿದೆ. ಒಳಗೆ ಬೀಜ ಇದೆ.

ಕೆಲವು ಸೊಗಸಾದ ರುಚಿ ಹೊಂದಿದ್ದರೆ, ಕೆಲವು ಹುಳಿ ಒಗಚು ರುಚಿಯವಾಗಿವೆ. ಉಷ್ಣವಲಯದ ಮಳೆಕಾಡುಗಳಲ್ಲಿ ಸಂಗ್ರಹಿಸುವುದು ಮುಂದುವರಿದಂತೆ, ನಾಡಲ್ಲಿ ನೆಟ್ಟು ಬೆಳೆಸುವುದು ಸಹ ನಡೆದಿದೆ. ಕೆಂಪು ಬೆಲಿಂಬಿಂಗ್ ಕೇರಳಕ್ಕೂ ಬಂದಿದೆಯಂತೆ.

ಇದು ಶೀತ ನೆಗಡಿಗೆ ಮದ್ದು, ಎಲುಬು ಗಟ್ಟಿ ಮಾಡುತ್ತದಂತೆ ಹಾಗೂ ಅಧಿಕ ನೆತ್ತರೊತ್ತಡ, ಸಕ್ಕರೆ ಕಾಯಿಲೆ ಇಳಿಸುತ್ತದಂತೆ. ಮರದ ಕಾಂಡದಲ್ಲಿ ನೇರವಾಗಿ ಒಂದೇ ಮರದಲ್ಲಿ ಸಾವಿರಗಟ್ಟಲೆ ಹಣ್ಣು ಬಿಡುವುದು ಇದರ ವಿಶೇಷ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments