ದೇಶದ ರಾಜಧಾನಿ ದಿಲ್ಲಿಯಲ್ಲಿ ಆಲಿಕಲ್ಲು ಸಹಿತ ಮಳೆ ಬೋರೆಂದು ಬಂದುದರಿಂದ ಎಲ್ಲ ಕಡೆ ರಸ್ತೆ ಕಾಲುವೆ, ಜನಬದುಕು ಕಲಕು ಅಲ್ಲದೆ 500 ವಿಮಾನಗಳು ತಡವಾಗಿ ಹಾರಿದವು. ಒಂದೇ ಸಮನೆ ಸುರಿದ ಮಳೆ, ಪಟಪಟನೆ ಬಿದ್ದ ಆಲಿಕಲ್ಲುಗಳು ಹಾಗೂ ಭರ್ರನೆ ಬೀಸಿದ ಗಾಳಿಯಿಂದಾಗಿ ದಿಲ್ಲಿ ಜನರ ಬದುಕು ತಡಬಡಾಯಿಸಿತು.

ಅದೆಷ್ಟೋ ರಸ್ತೆಗಳು ಕಾಲುವೆಗಳಾಗಿ ಬದಲಾದುದರಿಂದ ವಾಹನಗಳು ಈಜಿ ಹೋಗಬೇಕಾಯಿತು. ಜನರ ದಿನನಿತ್ಯದ ಕೆಲಸಗಳೆಲ್ಲ ಅಲಂಗೋಲವಾದವು. ಕೆಲವೆಡೆ ಟ್ರಾಫಿಕ್ ಜಾಮ್ ಹಾಗೂ ಮತ್ತೂ ಕೆಲವೆಡೆ ನೀರಿನಲ್ಲಿ ಈಜಲಾಗದೆ ವಾಹನಗಳು ಒದ್ದಾಡಿದವು.

ರಕ್ಷಣಾ ಕಾರ್ಯಾಚರಣೆ ಬಿರುಸಾಗಿ ನಡೆದರೂ ತೊಂದರೆಗೆ ಸಿಲುಕಿದ ಎಲ್ಲರನ್ನೂ ಅದು ತಲುಪಲಿಲ್ಲ ಎಂದು ದೂರಲಾಗಿದೆ. ಗಾಳಿಯು ನೂರು ಕಿಲೋಮೀಟರ್ ವೇಗದಲ್ಲಿ ಬೀಸಿ, ಆಲಿಕಲ್ಲುಗಳನ್ನು ಯಾರ್ಯಾರ ಮೇಲೋ ಬೀಸಾಡಿ ತೊಂದರೆ ಕೊಟ್ಟವು ಎಂದು ತಿಳಿದು ಬಂದಿದೆ.

ರಸ್ತೆ ಸಂಚಾರವಷ್ಟೇ ಅಲ್ಲ ವಾಯು ಮಾರ್ಗದಲ್ಲೂ ಅಡಚಣೆ ಉಂಟಾಯಿತು. 500 ವಿಮಾನಗಳು ತಡವಾಗಿ ಬಾನಿಗೇರಿದವು, ಹದಿನೈದು ವಿಮಾನಗಳ ಗಾಳಿ ದಾರಿ ಬದಲಿಸಲಾಯಿತು, ಒಂದೆರಡು ವಿಮಾನಗಳ ಹಾರಾಟವೇ ರದ್ದಾಯಿತು.ಬುಧವಾರ ಮಧ್ಯಾಹ್ನದಿಂದಲೇ ಮಳೆ ಮತ್ತು ಗಾಳಿಯು ದಿಲ್ಲಿಯ ಮೇಲೆ ದಾಳಿ ನಡೆಸಿತ್ತು.

ಸಂಜೆ 44 ಡಿಗ್ರಿ ಸೆಲ್ಸಿಯಸ್ ಇದ್ದ ಬಿಸಿಮಟ್ಟವು ರಾತ್ರಿ ಎಂಟು ಗಂಟೆಯ ಹೊತ್ತಿಗೆ 12 ಡಿಗ್ರಿ ಸೆಲ್ಸಿಯಸ್ಗೆ ಇಳಿಯಿತು. ಹಾಗಾಗಿ ಬಟ್ಟೆ ಬಿಟ್ಟವರೆಲ್ಲ ರಾತ್ರಿ ಮತ್ತೆ ಬಟ್ಟೆ ತೊಟ್ಟುಕೊಂಡರು ಎಂದು ಗೊತ್ತಾಗಿದೆ. ಇರುಳೆಲ್ಲ ಮಳೆಯು ಪರಪರ ಚಿರಿಚಿರಿ ಸುರಿಯುತ್ತಲೇ ಇತ್ತು.

