HomeFresh Newsಕಲ್ಲಬೆಟ್ಟು ಸಹಕಾರಿ ಸಂಘದ ಚುನಾವಣೆ: ಕೃಷ್ಣರಾಜ ಹೆಗ್ಡೆ ನೇತೃತ್ವದ ತಂಡಕ್ಕೆ ಬಹುಮತ

ಕಲ್ಲಬೆಟ್ಟು ಸಹಕಾರಿ ಸಂಘದ ಚುನಾವಣೆ: ಕೃಷ್ಣರಾಜ ಹೆಗ್ಡೆ ನೇತೃತ್ವದ ತಂಡಕ್ಕೆ ಬಹುಮತ

ಮೂಡುಬಿದಿರೆ: ಕಲ್ಲಬೆಟ್ಟು ಸೊಸೈಟಿಯ ಆಡಳಿತ ಮಂಡಳಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಕೆ.ಕೃಷ್ಣರಾಜ ಹೆಗ್ಡೆ ನೇತೃತ್ವದ ನಿರ್ದೇಶಕರ ತಂಡಕ್ಕೆ ಸ್ಪಷ್ಟ ಬಹುಮತ ದೊರೆತಿದೆ.

2025ರ ಜುಲೈ 10ರಂದು ನಡೆದಿದ್ದ ಸೊಸೈಟಿ ಚುನಾವಣೆಯು ನ್ಯಾಯಾಲಯದ ಆದೇಶದಂತೆ ಅಧಿಕೃತ ಫಲಿತಾಂಶವನ್ನು ಕಲ್ಲಬೆಟ್ಟು ಸೊಸೈಟಿಯ ಮುಖ್ಯ ಕಚೇರಿಯಲ್ಲಿ ಅಧಿಕೃತವಾಗಿ ಪ್ರಕಟಿಸಲಾಯಿತು.

ಚುನಾವಣೆಯಲ್ಲಿ ಕೃಷ್ಣರಾಜ ಹೆಗ್ಡೆ ನೇತೃತ್ವದ 7ಜನರ ತಂಡವು ಸೊಸೈಟಿಯ ಮೇಲಿನ ತನ್ನ ಹಿಡಿತವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಗೆಲುವು ಸಾಧಿಸಿದ ತಂಡದ ಪ್ರಮುಖ ನಾಯಕ ಕೃಷ್ಣರಾಜ ಹೆಗ್ಡೆ ಅವರನ್ನು ಕಲ್ಲಬೆಟ್ಟು ಸೊಸೈಟಿಯ ಆಡಳಿತ ಚುಕ್ಕಾಣಿ ಹಿಡಿಯಲು ಸದಸ್ಯರು ಮತ್ತೊಮ್ಮೆ ಬೆಂಬಲಿಸಿದ್ದಾರೆ.

ಈ ಬಾರಿಯ ಚುನಾವಣೆಯಲ್ಲಿ ಕೃಷ್ಣರಾಜ ಹೆಗ್ಡೆ ಅವರೊಂದಿಗೆ ಸಿಪ್ರಿಯನ್ ಪಿಂಟೋ, ನಳಿನಿ ಆರ್ ಹೆಗ್ಡೆ, ರಮೇಶ್ಚಂದ್ರ ಪಿ, ಸತೀಶ್ ಶೆಟ್ಟಿ, ಯಾದವ ಹಾಗೂ ಜಯಂತಿ ಆಚಾರ್ ಭರ್ಜರಿ ಗೆಲುವು ಸಾಧಿಸಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಇವರಲ್ಲದೆ ಸ್ಪರ್ಧೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರಾದ ಪದ್ಮಯ ಬಿ. ಸುವರ್ಣ, ಸುರೇಶ್ ಕೋಟ್ಯಾನ್, ಸತೀಶ್ ಕೋಟ್ಯಾನ್ ಮತ್ತು ಆಲ್ವಿನ್ ಮಿನೇಜಸ್ ಅವರು ಕೂಡ ಪ್ರಚಂಡ ಬಹುಮತದೊಂದಿಗೆ ಗೆಲುವಿನ ನಗೆ ಬೀರಿದ್ದಾರೆ. ಚುನಾವಣೆ ಪ್ರಕ್ರಿಯೆ ಮುಗಿದ ಬಳಿಕ ಇಂದು ಸೊಸೈಟಿಯಲ್ಲಿ ಚುನಾವಣಾ ಅಧಿಕಾರಿಗಳು ಅಧಿಕೃತವಾಗಿ ವಿಜೇತ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು. ಹೊಸ ಆಡಳಿತ ಮಂಡಳಿಯ ಆಯ್ಕೆಗೆ ಸೊಸೈಟಿಯ ಸದಸ್ಯರು ಸಂತಸ ವ್ಯಕ್ತಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments