ಶ್ರೀ ಮಹಾವೀರ ಕಾಲೇಜಿನ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪಿ. ನೇಮಿರಾಜ ಹೆಗ್ಡೆ (84) ಮಂಗಳವಾರ ಸ್ವಗೃಹದಲ್ಲಿ ನಿಧನ ಹೊಂದಿದರು. ಮೂಲತಃ ಪಡಂಗಡಿ ಯವರಾದ ನೇಮಿರಾಜ ಹೆಗ್ಡೆ ಅವರು ಮಂಗಳೂರು ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಪಿಯು, ಕಾರ್ಕಳ ಭುವನೇಂದ್ರ ಕಾಲೇಜಿನಲ್ಲಿ ಬಿಎಸ್ ಸಿ ಪದವಿ, ಮೈಸೂರಿನಲ್ಲಿ ಬಿ. ಪಿ.ಎಡ್. ಪದವಿ ಗಳಿಸಿದರು. ‘ಮೂಡುಬಿದಿರೆ
ಮೂಡುಬಿದಿರೆ ತಾಲೂಕಿನ ಪುರಸಭಾ ವ್ಯಾಪ್ತಿಯಲ್ಲಿ ಭಾನುವಾರ ಸಂಜೆ ಬೀಸಿದ ಭಾರೀ ಗಾಳಿ ಮಳೆಗೆ ಮರಗಳು ಮತ್ತು ವಿದ್ಯುತ್ ತಂತಿಗಳು ಧರೆಗುರುಳಿದ್ದಲ್ಲದೆ ಹಲವಾರು ಮನೆಗಳಿಗೆ ಹಾನಿಯುಂಟ್ಟಾಗಿ ಲಕ್ಷಾಂತರ ರೂ ನಷ್ಟ ಸಂಭವಿಸಿದ ಘಟನೆ ನಡೆದಿದೆ. ಒಂಟಿಕಟ್ಟೆ, ಸ್ವರಾಜ್ಯಮೈದಾನ ಪರಿಸರ, ಮಾಸ್ತಿಕಟ್ಟೆ ಪ್ರದೇಶಗಳಲ್ಲಿ ಸಂಜೆ ಮಳೆಯೊಂದಿಗೆ ಭಾರೀ ಗಾಳಿ ಬೀಸಿದ್ದು ೧೫ಕ್ಕೂ ಅಧಿಕ ವಿದ್ಯುತ್ ಕಂಬಗಳು ಧರೆಗುರಿಳಿವೆ ಹಾಗೂ ಸ್ವರಾಜ್ಯ ಮೈದಾನದ ಬಳಿಯಿರುವ ಪತ್ರಕರ್ತ ಧನಂಜಯ
ಮೂಡುಬಿದಿರೆ : ಧರ್ಮಸ್ಥಳ ಮೇಳದ ನಿವೃತ್ತ ಕಲಾವಿದ ನಿಡ್ಲೆ ಗೋವಿಂದ ಭಟ್ ಅವರಿಗೆ ಹಾಗೂ ಸುರತ್ಕಲ್ ಮೇಳದ ನಿವೃತ್ತ ಕಲಾವಿದ ಪುತ್ತಿಗೆ ಕುಮಾರ ಗೌಡರವರಿಗೆ ಯಕ್ಷದೇಗುಲ ಪ್ರಶಸ್ತಿಯನ್ನು ನೀಡಲು ಶ್ರೀ ಯಕ್ಷದೇಗುಲ ಕಾಂತಾವರ ಆಯ್ಕೆ ಸಮಿತಿಯು ತೀರ್ಮಾನಿಸಿದೆ. ಯಕ್ಷದೇಗುಲ ಕಾಂತಾವರದ ವಾರ್ಷಿಕ ಆಟ ಕೂಟ ಬಯಲಾಟ ಸಹಿತ 22 ನೇ ಯಕ್ಷೋಲ್ಲಾಸ ಕಾರ್ಯಕ್ರಮವು ಜುಲೈ ೨೧ರಂದು ಕಾಂತಾವರದಲ್ಲಿ ನಡೆಯಲಿದ್ದು ಈ ಸಂದರ್ಭದಲ್ಲಿ ಯಕ್ಷ ರಂಗದ ಸಿಡಿಲ ಮರಿ ಖ್ಯಾತಿ ವೆತ್ತ ಪುತ್ತೂರು
ಮೂಡುಬಿದಿರೆ: ವಿಧಾನಪರಿಷತ್ ಸದಸ್ಯರಾಗಿ ಎರಡನೇ ಅವಧಿಗೆ ಆಯ್ಕೆಯಾದ ಐವನ್ ಡಿಸೋಜ ಅವರಿಗೆ ಕೆಥೋಲಿಕ್ ಸಭಾ ಮೂಡುಬಿದಿರೆ ಘಟಕದ ವತಿಯಿಂದ ಮೂಡುಬಿದಿರೆ ಕೊರ್ಪುಸ್ ಕ್ರಿಸ್ತಿ ಚರ್ಚ್ ಸಭಾಂಗಣದಲ್ಲಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಐವನ್ ಡಿಸೋಜ ಮಾತನಾಡಿ, ನಾನು ಕಾಂಗ್ರೆಸ್ ಪಕ್ಷನಿಷ್ಠೆ ಯ ಬದ್ಧತೆಯಿಂದ ಕೆಲಸ ಮಾಡಿದ್ದು ತನ್ನ ಸೇವೆಯನ್ನು ಪರಿಗಣಿಸಿ ಎರಡನೇ ಅವಧಿಗೆ ಈ ಸನ್ಮಾನ ಲಭಿಸಿದೆ. ಸಿಕ್ಕಿದ ಅವಕಾಶವನ್ನು ಬಳಸಿ ನೋಂದವರ ಸಹಾಯ ಹಸ್ತ ಒದಗಿಸುವ ಆದ್ಯತೆ
ಮೂಡುಬಿದಿರೆ : ಜೆಇಇ ಮೈನ್ಸ್ ಫೆಸ್-1 ಫಲಿತಾಂಶ ಪ್ರಕಟಗೊಂಡಿದ್ದು, ಆಳ್ವಾಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಈ ಬಾರಿಯೂ ಉತ್ತಮ ಸಾಧನೆ ಮಾಡಿದ್ದಾರೆ. 53 ವಿದ್ಯಾರ್ಥಿಗಳು 95 ಪರ್ಸಂಟೈಲ್‌ಗಿಂತ ಅಧಿಕ ಅಂಕ ಪಡೆದಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಹೇಳಿದರು.ವಿದ್ಯಾರ್ಥಿ ಎಚ್.ಆರ್. ರಜತ್ 99.271023 ಪರ್ಸಂಟೈಲ್ (ಭೌತಶಾಸ್ತ್ರ- 97.2200028, ರಸಾಯನಶಾಸ್ತ್ರ – 97.1516355 ಹಾಗೂ ಗಣಿತ- 99.537079)
ಮೂಡುಬಿದಿರೆ: ಯಕ್ಷಗಾನವನ್ನು ಒಂದು ಪರಿಪೂರ್ಣ ಕಲೆಯನ್ನಾಗಿ ಮಾಡುವ ಮಹತ್ಕಾರ್ಯವನ್ನು ಕಲಾವಿದರು, ಭಾಗವತರು, ವೇಷಧಾರಿಗಳು ಮಾಡುತ್ತಿದ್ದಾರೆ. ಇವರ ಕೊಡುಗೆಯಿಂದ ಯಕ್ಷಗಾನ ಅತ್ಯುನ್ನತ ಸ್ಥಾನಕ್ಕೇರಿದೆ. ಸಂಗೀತ, ಭಾಗವತಿಗೆ, ಹಿಮ್ಮೇಳ, ವೇಷಭೂಷಣ, ನೃತ್ಯಗಳನ್ನು ಒಳಗೊಂಡ ಸರ್ವ ಗುಣ ಸಂಪನ್ನವಾದAತ ಕಲೆ ಯಕ್ಷಗಾನ. ಪಟ್ಲ ಸತೀಶ್ ಶೆಟ್ಟಿ ಕೇವಲ ಕಲಾವಿದ ಮಾತ್ರವಲ್ಲ. ಪಟ್ಲ ಫೌಂಡೇಶನ್ ಸ್ಥಾಪಿಸಿ ಅನೇಕ ಕಲಾವಿದರಿಗೆ ಬದುಕು ಕೊಡುತ್ತಿದ್ದಾರೆ ಎಂದು ಯಕ್ಷಧ್ರುವ ಪಟ್ಲ
ಮೂಡುಬಿದಿರೆ: ಸಂವಿಧಾನ ಪೀಠಿಕೆ, ಜವಾಬ್ದಾರಿ ಮತ್ತು ಅದರ ಮಹತ್ವ ಸಾರುವ ಅಂಬೇಡ್ಕರ್ ಪ್ರತಿಮೆಯ ಸ್ತಬ್ಧ ಚಿತ್ರವನ್ನೊಳಗೊಂಡ ಸಂವಿಧಾನ ಜಾಗೃತಿ ಜಾಥಾ ರಥವು ಮೂಡುಬಿದಿರೆ ಪುರಸಭಾ ವ್ಯಾಪ್ತಿಗೆ ಆಗಮಿಸಿದ್ದು ತಾಲೂಕು ತಹಸೀಲ್ದಾರ್ ಪ್ರದೀಪ್ ಕುರ್ಡೇಕರ್ ಮತ್ತು ಪುರಸಭಾ ಮುಖ್ಯಾಧಿಕಾರಿ ಇಂದು ಎಂ.ಅವರು ತಾಲೂಕು ಆಡಳಿತ ಸೌಧದ ಮುಂಭಾಗ ಬರಮಾಡಿಕೊಂಡರು. ನಂತರ ತಹಶೀಲ್ದಾರ್ ಅವರು ಅಂಬೇಡ್ಕರ್ ಅವರ ಸ್ತಬ್ಧ ಚಿತ್ರಕ್ಕೆ ಹಾರಾರ್ಪಣೆಗೈದರು.ಪುರಸಭಾ ಸದಸ್ಯರಾದ
ಮೂಡುಬಿದಿರೆ: ಆಳ್ವಾಸ್ ಸೆಂಟ್ರಲ್ ಸ್ಕೂಲ್‌ನ 9ನೇ ತರಗತಿಯ ವಿದ್ಯಾರ್ಥಿ ಅಮೋಘ್ ಎ.ಹೆಬ್ಬಾರ್ ಮಾರ್ಚ್ ತಿಂಗಳಲ್ಲಿ ಉತ್ತರ ಆಫ್ರಿಕಾದ ಟ್ಯುನೀಶಿಯಾದಲ್ಲಿ ನಡೆಯುವ ಅಂತರರಾಷ್ಟ್ರೀಯ ವಾರ್ಷಿಕ ಮೆಗಾ ಸೈನ್ಸ್ ಫೆಸ್ಟಿವಲ್, `ಕೀಟ ಮತ್ತು ಕಳೆಗಳನ್ನು ನಿಯಂತ್ರಿಸಲು ನೈಸರ್ಗಿಕ ವಿಧಾನ’ ಶೀರ್ಷಿಕೆಯ ಸಂಶೋಧನಾ ಯೋಜನೆಯನ್ನು ಪ್ರಸ್ತುತಪಡಿಸಲು ಅರ್ಹತೆ ಪಡೆದಿದ್ದಾರೆ.ಗುಜರಾತ್‌ನ ರಾಜಕೋಟ್‌ನಲ್ಲಿ ನಡೆದ ರಾಷ್ಟೀಯ ಮಟ್ಟದ ಭಾರತೀಯ ವಿಜ್ಞಾನ ಮತ್ತು ಇಂಜಿನಿಯರಿಂಗ್
ಮೂಡುಬಿದಿರೆಯ ಪುರಸಭೆಯಲ್ಲಿ ಶಾಸಕ ಉಮಾನಾಥ ಎ.ಕೋಟ್ಯಾನ್ ಧ್ವಜವನ್ನು ಅರಳಿಸಿ 75ನೇ ವರ್ಷದ ಗಣರಾಜ್ಯದ ಸಂದೇಶವನ್ನು ನೀಡಿದರು . ಈ ಸಂದರ್ಭದಲ್ಲಿ ಪುರಸಭಾ ಮಾಜಿ ಅಧ್ಯಕ್ಷ ಪ್ರಸಾದ್ ಕುಮಾರ್, ಸದಸ್ಯ ಕೊರಗಪ್ಪ, ಮುಖ್ಯಾಧಿಕಾರಿ ಇಂದು ಎಂ, ಸಿಬಂದಿಗಳಾದ ಸುಧೀಶ್ ಹೆಗ್ಡೆ, ಮೂಡುಬಿದಿರೆ ಲೇಬರ್ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಮೂಡುಬಿದಿರೆ: ಶಿವತತ್ವ ಶ್ರೇಷ್ಠವಾದುದು. ಶಿವ ಅದಿ-ಅಂತ್ಯ ರಹಿತವಾದ ದೇವರು. ಆತ ನಮ್ಮ ಹೃದಯದೊಳಗೆ ಇದ್ದಾಗ ಬೇರೆ ಬೇರೆ ಹೆಸರಿನಿಂದ ಕರೆಯಲ್ಪಡುತ್ತಾನೆ. ಹೊರಗಡೆ ಬಂದಾಗ ಆತ ಒಬ್ಬನೇ ಆದ್ದರಿಂದ ಆತ ನಮ್ಮೊಳಗಡೆ ಇರುವಾಗಲೇ ಜಾಗೃತಿಯನ್ನು ಹೊಂದಬೇಕು ಎಂದು ಒಡಿಯೂರು ಗುರುದತ್ತ ಸಂಸ್ಥಾನದ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು. ಅವರು ಶಿರ್ತಾಡಿ ಶ್ರೀ ಕ್ಷೇತ್ರ ಅರ್ಜುನಾಪುರ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ