HomeFresh Newsನಾರ್ವೆ ಚೆಸ್ ಟೂರ್ನಿ ಗೆದ್ದ ಮೊದಲ ಭಾರತೀಯ | ನಾರ್ವೆ ಚೆಸ್ ಟೂರ್ನಿಯಲ್ಲಿ ಪ್ರಜ್ಞಾನಂದ ಜಯ...

ನಾರ್ವೆ ಚೆಸ್ ಟೂರ್ನಿ ಗೆದ್ದ ಮೊದಲ ಭಾರತೀಯ | ನಾರ್ವೆ ಚೆಸ್ ಟೂರ್ನಿಯಲ್ಲಿ ಪ್ರಜ್ಞಾನಂದ ಜಯ | ಜರ್ಮನಿಯ ವಿನ್ಸೆಂಟ್ ಕೀಮರ್ ವಿರುದ್ಧ ವಿಜಯ

ನಾರ್ವೆಯ ಓಸ್ಲೋದಲ್ಲಿ ನಡೆದ ನಾರ್ವೆ ಚೆಸ್ ಟೂರ್ನಿಯಲ್ಲಿ ಗೆಲುವ ಕಾಣುವ ಮೂಲಕ ಈ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಎನಿಸಿದರು ಆರ್. ಪ್ರಜ್ಞಾನಂದ.


ಗ್ರ್ಯಾಂಡ್‌ಮಾಸ್ಟರ್ ಭಾರತದ ಆರ್. ಪ್ರಜ್ಞಾನಂದ ಅವರು ಓಸ್ಲೋದಲ್ಲಿ ನಡೆದ ನಾರ್ವೆ ಚೆಸ್ ಟೋರ್ನಿಯ ಅಂತಿಮ ಸುತ್ತಿನಲ್ಲಿ ಜರ್ಮನಿಯ ವಿನ್ಸೆಂಟ್ ಕೀಮರ್ ಅವರನ್ನು ರೋಚಕ ಪಂದ್ಯದಲ್ಲಿ ಸೋಲಿಸಿದರು.

ಈ ಗೆಲುವಿನಿಂದ ಅವರು ನಾರ್ವೆ ಚೆಸ್ ಟೂರ್ನಿ ಪ್ರಶಸ್ತಿ ಮುಡಿಗೇರಿಸಿಕೊಂಡ ಮೊದಲ ಭಾರತದ ಚೆಸ್ ಮಾಸ್ಟರ್ ಎನಿಸಿದರು. ಇಲ್ಲಿ ಮೂವರಿಗೆ ಅಂತಿಮ ಸುತ್ತಿನ ಜಯದೊಂದಿಗೆ ಗೆಲ್ಲಲು ಅವಕಾಶವಿತ್ತು.

ಜರ್ಮನಿಯ ವಿನ್ಸೆಂಟ್ ಕೀಮರ್ ವಿರುದ್ಧ ಅದ್ಭುತ ಜಯ ಸಾಧಿಸಿದ್ದರಿಂದ ಪ್ರಜ್ಞಾನಂದ ಅವರು ಮೂರು ಅಂಕ ಪಡೆದು ಒಟ್ಟು ಹದಿನೆಂಟು ಅಂಕಗಳೊಡನೆ ಎಲ್ಲರನ್ನೂ ಹಿಂದಿಕ್ಕಿ ಚಾಂಪಿಯನ್ ಆದರು.

ಏಳು ಬಾರಿಯ ನಾರ್ವೆ ಚೆಸ್ ಚಾಂಪಿಯನ್ ಮತ್ತು ಜಗತ್ತಿನ ನಂಬರ್ ಒನ್ ರ್‍ಯಾಂಕಿನ ಮ್ಯಾಗ್ನಸ್ ಕಾರ್ಲ್‌ಸನ್ ಅವರನ್ನು ಪ್ರಜ್ಞಾನಂದ ಎರಡು ಬಾರಿ ಸೋಲಿಸಿದರೆಂಬುದು ಇಲ್ಲಿನ ವಿಶೇಷವಾಗಿದೆ.


15.5 ಅಂಕಗಳೊಡನೆ ಪ್ರಜ್ಞಾನಂದರಿಗಿಂತ ಮುಂದಿದ್ದ ಯುಎಸ್‌ಎಯ ವೆಸ್ಸಿಸೋ ಅವರು ಕೊನೆಯ ಪಂದ್ಯವನ್ನು ಫ್ರಾನ್ಸಿನ ಆಲಿರೆಜಾ ಫಿರೋಜಾ ಎದುರು ಡ್ರಾ ಸಾಧಿಸಿದ್ದರಿಂದ ಪ್ರಜ್ಞಾನಂದರ ಗೆಲುವನ್ನು ಯಾರೂ ಅಲುಗಾಡಿಸದಾದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments