HomeFresh Newsಪ್ಯಾರಿಸ್ ಓಪನ್‌ನಲ್ಲಿ ಬರುವ ಹೊಸ ಅರಸಿ | ಮೆರಾ ಆಂಡ್ರೀವಾ, ಮಾಚಾ ಶ್ವಾಲಿನ್ಸ್‌ಕಾ | ಇಬ್ಬರೂ...

ಪ್ಯಾರಿಸ್ ಓಪನ್‌ನಲ್ಲಿ ಬರುವ ಹೊಸ ಅರಸಿ | ಮೆರಾ ಆಂಡ್ರೀವಾ, ಮಾಚಾ ಶ್ವಾಲಿನ್ಸ್‌ಕಾ | ಇಬ್ಬರೂ ಫೈನಲಿಗೆ ಮೊದಲ ಬಾರಿ ಪ್ರವೇಶ

ಪ್ಯಾರಿಸಿನಲ್ಲಿ ನಡೆಯುತ್ತಿರುವ ಪ್ಯಾರಿಸ್ ಓಪನ್ ಟೆನ್ನಿಸ್ ಮಹಿಳಾ ಸಿಂಗಲ್ಸ್ ಫೈನಲಿಗೆ ಇಬ್ಬರೂ ಹೊಸಬರೇ ಬಂದಿರುವುದರಿಂದ ಯಾರು ಗೆದ್ದರೂ ಹೊಸ ಅರಸಿ ಎನಿಸಿಕೊಳ್ಳುವರು.ರಶಿಯಾದ ಮೆರಾ ಆಂಡ್ರೀವಾ ಮತ್ತು ಪೋಲೆಂಡಿನ ಮಾಚಾ ಶ್ವಾಲಿನ್ಸ್‌ಕಾ ಅವರು ಆವೆ ಮಣ್ಣಿನ ಅಂಗಣದ ಪ್ಯಾರಿಸ್ ಓಪನ್ ಟೆನ್ನಿಸ್ ಮಹಿಳಾ ವಿಭಾಗದ ಫೈನಲಿನಲ್ಲಿ ಸೆಣಸುವರು.

ಇಬ್ಬರೂ ಗ್ರಾನ್‌ಸ್ಲಾಂ ಒಂದರಲ್ಲಿ ಹಾಗೂ ಈ ಗ್ರಾನ್‌ಸ್ಲಾಮಿನಲ್ಲಿ ಫೈನಲಿಗೇರಿರುವುದು ಇದೇ ಮೊದಲು. ಹಾಗಾಗಿ ಪ್ಯಾರಿಸ್ ಓಪನ್ ಟೆನ್ನಿಸ್ ಮಹಿಳಾ ವಿಭಾಗದ ಚಾಂಪಿಯನ್ ಮತ್ತು ರನ್ನರ್‍ಸ್ ಅಪ್ ಇಬ್ಬರೂ ಹೊಸ ರಾಣಿ, ಯುವರಾಣಿ ಆಗಿರುತ್ತಾರೆ.

ಮಾಚಾ ಶ್ವಾಲಿನ್ಸ್‌ಕಾ ಅವರು ಸೆಮಿಫೈನಲಿನಲ್ಲಿ ರಶಿಯಾದ ಡಯಾನಾ ಶ್ನೈಡರ್‌ರನ್ನು ಸೋಲಿಸಿ ಚರಿತ್ರೆ ಬರೆದರು.

ಮಾಚಾ ಅವರು ಮಹಿಳಾ ವಿಶ್ವ ಟೆನ್ನಿಸ್ ರ್‍ಯಾಂಕಿಂಗಿನಲ್ಲಿ 114ನೆಯ ಸ್ಥಾನದಲ್ಲಿ ಇದ್ದಾರೆ. ಅರ್ಹತಾ ಸುತ್ತಿನಿಂದ ಬಂದು ಇಲ್ಲಿ ಫೈನಲಿಗೇರಿದ ಮೊದಲ ಆಟಗಾತಿ ಎಂಬ ಹಿರಿಮೆಯೂ ಅವರದಾಯಿತು. ಅವರೀಗ ಒಮ್ಮೆಗೇ 21ನೇ ರ್‍ಯಾಂಕಿಂಗ್ ಪಡೆಯುವರು.


2021ರ ಯುಎಸ್ ಓಪನ್‌ನಲ್ಲಿ ಎಮ್ಮಾ ರಾಡುಕಾನು ಅವರು ಅರ್ಹತಾ ಸುತ್ತಿನಿಂದ ಬಂದು ಪ್ರಶಸ್ತಿ ಗೆದ್ದಿದ್ದರು. ಆ ಸಾಧನೆ ಸರಿಗಟ್ಟಲು ಮಾಚಾರಿಗೆ ಅವಕಾಶವಿದೆ. ಮೆರಾ ಆಂಡ್ರೀವಾ ಗೆದ್ದಲ್ಲಿ ಪ್ಯಾರಿಸ್ ಓಪನ್ ಸಿಂಗಲ್ಸ್ ಚಾಂಪಿಯನ್ ಆದ ಅತಿ ಕಿರಿಯಳು ಎನಿಸುವರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments