ವೆನೆಜುವೆಲಾ ನೆಲನಡುಕದಲ್ಲಿ ಮೂರು ಸಾವಿರದಷ್ಟು ಜನರ ಮರಣ, ಹತ್ತು ಸಾವಿರಕ್ಕೂ ಹೆಚ್ಚು ಜನ ನಾಪತ್ತೆ. ಯೂರೋಪಿನಲ್ಲಿ ಬಿಸಿ ಗಾಳಿಯ ದಾಳಿ.
ಫ್ರಾನ್ಸ್ ಹಾಗೂ ಸ್ಪೆಯಿನ್ನಿನಲ್ಲಿ ತಲಾ ಸಾವಿರ ಮೀರಿ ಜನರು ಬಿಸಿ ಗಾಳಿಗೆ ಬಲಿಯಾಗಿದ್ದಾರೆ. ಯೂರೋಪು ಒಕ್ಕೂಟದಲ್ಲೆಲ್ಲ ಬಿಸಿ ಹೊಡೆತದ ಸಾವು ಸುದ್ದಿ ಬರುತ್ತಲಿದೆ. ಕುಡಲದಲ್ಲಿ ಬಿಹಾರದ ವಲಸೆ ಕೆಲಸದ ತಾಯಿ, ಇಬ್ಬರು ಮಕ್ಕಳ ಸಾವು; ಉತ್ತರಾಖಂಡ, ಅರುಣಾಚಲದವರೆಗೆ ಮಳೆ ಅವಾಂತರದ ಮರಣಗಳು.

ಇದರ ನಡುವೆ ಎಲ್ ನಿನೋ ಮಳೆಯ ಪ್ರಮಾಣಕ್ಕೆ ಕತ್ತರಿ ಹಾಕಿದೆ. ಎಲ್ ನಿನೋ ಕೂಡ ಬಿಸಿ ನೀರಿನ ಕೊಡುಗೆಯಾಗಿದೆ. ನಿಸರ್ಗ ಮಾರಕ ಮಾನವನ ಚಟುವಟಿಕೆಗಳು ನಮಗಿರುವ ಒಂದೇ ಒಂದು ಭೂಮಿಯನ್ನು ಮುಂದಿನ ತಲೆಮಾರಿಗೆ ಉಳಿಸೀತೇ ಎನ್ನುವುದು ಈಗ ಎದ್ದಿರುವ ಪ್ರಶ್ನೆಯಾಗಿದೆ.

