Home Posts tagged V4News

ನಿಡ್ಲೆ ವಿಕಲಚೇತನರ ವಿಶೇಷ ಗ್ರಾಮ ಸಭೆ

ನಿಡ್ಲೆ ಗ್ರಾಮದ ವಿಕಲಚೇತನರ ವಿಶೇಷ ಗ್ರಾಮ ಸಭೆ ನಿಡ್ಲೆ ಗ್ರಾಮ ಪಂಚಾಯತ್ ಸಭಾಂಗಣ ದಲ್ಲಿ ಫೆ.27 ರಂದು ಗ್ರಾಮ ಪಂಚಾಯಿತಿನ ಅಧ್ಯಕ್ಷರಾದ ಶ್ರೀಮತಿ ಶ್ಯಾಮಲ ಇವರ ಅಧ್ಯಕ್ಷತೆ ಯಲ್ಲಿ ನಡೆಸಲಾಯಿತು.ಮುಖ್ಯ ಅತಿಥಿಗಳಾಗಿ ಪಂಚಾಯಿತಿನ ಅಭಿವೃದ್ಧಿ ಅಧಿಕಾರಿ ದೀಪಕ್ ರಾಜ್.ಎಂ, ಗ್ರಾಮ ಪಂಚಾಯಿತಿನ ಸದಸ್ಯರಾದ ಶ್ರೀಮತಿ ಹೇಮಾವತಿ.ಕೆ, ಮೋಹನ್ ಪೂಜಾರಿ, ಜಗದೀಶ್ ಶೆಟ್ಟಿ

ನಿವೃತ್ತ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಅಬೂಬಕರ್ ವಳಾಲು ಅವರಿಗೆ ಬೀಳ್ಕೊಡುಗೆ

ಕಳೆದ 31 ವರ್ಷಗಳಿಂದ ಕರ್ನಾಟಕ ರಾಜ್ಯ ಸಾರಿಗೆ ಇಲಾಖೆ(ಕೆಎಸ್‌ಆರ್‌ಟಿಸಿ)ಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಉಪ್ಪಿನಂಗಡಿ ಸಮೀಪದ ವಳಾಲು ನಿವಾಸಿ ಎಚ್.ಅಬೂಬಕರ್ ಅವರನ್ನು ಕೆಎಸ್‌ಆರ್‌ಟಿಸಿ ಮಂಗಳೂರು ಕಚೇರಿಯಲ್ಲಿ ಇತ್ತೀಚೆಗೆ ಬೀಳ್ಕೊಡಲಾಯಿತು.ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಚ್.ಅಬೂಬಕರ್ ಅವರನ್ನು ಶಾಲು ಹೊದಿಸಿ ಸನ್ಮಾನಿಸಿ ಆತ್ಮೀಯವಾಗಿ ಬೀಳ್ಕೊಡಲಾಯಿತು. ಈ ಸಂದರ್ಭ ಇಲಾಖೆಯ

ಪುತ್ತೂರು: ಅಕ್ಷಯ ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ

ಅಕ್ಷಯ ಕಾಲೇಜು ಪುತ್ತೂರು ಇಲ್ಲಿನ ಇನ್ವಿಕ್ತ ಕಾಮರ್ಸ್ ಅಸೋಸಿಯೇಷನ್ ಇದರ ವತಿಯಿಂದ ದ್ವಿತೀಯ ಮತ್ತು ತ್ರಿತೀಯ ಪದವಿ ವಿದ್ಯಾರ್ಥಿಗಳಿಗೆ “ಬ್ಯಾಂಕಿಂಗ್ ಹಾಗು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ” ವಿಷಯದ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಸ್ಮಾರ್ಟ್ ಕ್ಲಾಸ್ಸಸ್ ಅಕಾಡೆಮಿ ಇದರ ತರಬೇತುದಾರರಾದ ಡಾ.ಸರಸ್ವತಿಯವರು ವಿದ್ಯಾರ್ಥಿಗಳಿಗೆ ಬ್ಯಾಂಕಿಂಗ್ ಹಾಗು ವಿವಿಧ ಸ್ಪರ್ಧಾತ್ಮಕ

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಎಂ. ಬಿ. ಎ ಪದವಿ ಪರೀಕ್ಷೆಯಲ್ಲಿ ಪ್ರಥಮ Rank ಪಡೆದ ಉಷಾ ನಾಯಕ್

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು ಕಳೆದ 2023 ರ ಸಾಲಿನಲ್ಲಿ ನಡೆಸಿದ ಅಂತಿಮ ಎಂ. ಬಿ. ಎ ಪರೀಕ್ಷೆಯಲ್ಲಿ ಉಷಾ ನಾಯಕ್ ಇವರು ಪ್ರಥಮ Rank ಹಾಗೂ ನಗದು ಪುರಸ್ಕಾರವನ್ನು ಪಡೆದಿದ್ದಾರೆ.ಬಾಲ್ಯದಿಂದಲೂ ತಂದೆಯ ಆಸೆಯನ್ನು ನೆರವೇರಿಸ ಬೇಕೆಂಬ ಛಲ, ಸತತ ಪ್ರಯತ್ನ, ಆತ್ಮ ವಿಶ್ವಾಸ ಹೊಂದಿರುವ ಈಕೆ ನಗರದ ಕೆನರಾ ಕಾಲೇಜು ಹಾಗೂ ಸಂಧ್ಯಾ ಕಾಲೇಜಿನಲ್ಲಿ ವಾಣಿಜ್ಯ ಹಾಗೂ ನಿರ್ವಹಣಾ ಶಾಸ್ತ್ರದ ಉಪನ್ಯಾಸಕಿಯಾಗಿ ಕಳೆದ 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.ಇವರು

ಮಕ್ಕಳ ಚೆಸ್ ಕಾರ್ನಿವಾಲ್ 2024 : ಗೊನ್ಝಾಗ ಶಾಲೆಗೆ ದ್ವಿತೀಯ ಸ್ಥಾನ

ಮಂಗಳೂರಿನ ಡೆರೆಕ್ ಚೆಸ್ ಸ್ಕೂಲ್ ಇವರು ಮೌಂಟ್ ಕಾರ್ಮೆಲ್ ಸೆಂಟ್ರಲ್ ಸ್ಕೂಲ್ ಮಂಗಳೂರು ಇಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಮಕ್ಕಳ ಚೆಸ್ ಕಾರ್ನಿವಾಲ್ 2024 ಚೆಸ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದೆ. ಗೊನ್ಝಾಗ ಶಾಲೆಯ 5ನೇ ತರಗತಿಯ ವಿಹಾನ್ ಆದರ್ಶ ಲೋಬೊ, 6ನೇ ತರಗತಿಯ ಝರಾ ಖಾಜಿ, 2ನೇ ತರಗತಿಯ ಮಾರ್ಕ್ ಬ್ಲೇಸಿಯಸ್ ಡಿ’ಸೋಜಾ ಮತ್ತು 2ನೇ ತರಗತಿಯ ಮಾನ್ವಿ ಸಾಯಿ ಕುಡ್ವ ಉತ್ತಮ ಸಾಧನೆಗೈದಿದ್ದಾರೆ. ಸಂಸ್ಥೆ ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗ

14 ಮಂದಿ ಜನಪದಿಯರಿಗೆ ಕರ್ನಾಟಕ ಜನಪದ ಪರಿಷತ್ ಪ್ರಶಸ್ತಿ

ಮಾರ್ಚ್ 1ರಿಂದ 3 ರವರೆಗೆ ನಡೆಯುವ ಜಾನಪದ ಕಡಲೊತ್ಸವ -2024 ಕಾರ್ಯಕ್ರಮದಲ್ಲಿ ದಕ್ಷಿಣಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳಿಂದ 14 ಮಂದಿ ವಿವಿಧ ಕ್ಷೇತ್ರದ ಜನಪದ ಕಲಾವಿದರು, ದೈವನರ್ತಕರು, ಜನಪದ ಸಂಘಟಕರು ಹಾಗೂ ನಾಟಿ ವೈದ್ಯರುಗಳನ್ನು ಗುರುತಿಸಿ ಕರ್ನಾಟಕ ಜಾನಪದ ಪರಿಷತ್ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಮಾರ್ಚ್ 2 ಮತ್ತು 3 ರಂದು ಸಂಜೆ ನಡೆಯುವ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿ ಈ ಕೆಳಗಿನಂತಿದೆ.

ಅಗ್ನಿಪಥದಲ್ಲಿ ನಿರುದ್ಯೋಗ ನಿವಾರಣೆ ಸಾಧ್ಯವಿಲ್ಲ

ನಿರುದ್ಯೋಗ ನಿವಾರಿಸದ, ಸೈನಿಕರನ್ನು ತಯಾರಿಸದ ಅಗ್ನಿಪಥ ಯೋಜನೆಯನ್ನು ಇಂಡಿಯಾ ಮೈತ್ರಿಕೂಟ ಗೆದ್ದು ರದ್ದು ಮಾಡಲಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಹೇಳಿದ್ದಾರೆ. ಅಷ್ಟಕ್ಕೆ ಸುಮ್ಮನಾಗದೆ ಅವರು ಸೇನಾಧ್ಯಕ್ಷರೂ ಆಗಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೂ ಪತ್ರ ಬರೆದಿದ್ದಾರೆ. ಅಗ್ನಿಪಥ ಯೋಜನೆಯ ನಿಸ್ಸಾರವನ್ನು, ಅನನುಕೂಲವನ್ನು ಅವರು ಅದರಲ್ಲಿ ವಿವರಿಸಿದ್ದಾರೆ. ಇದೇ ವೇಳೆ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಅವರು 2024ರ ಲೋಕಸಭಾ

ಬಂಟ್ವಾಳ: ರಾಷ್ಟ್ರಪತಿಯನ್ನು ಭೇಟಿಯಾಗಲಿರುವ 4 ಆದಿವಾಸಿ ಮಹಿಳೆಯರು

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ನಾಲ್ಕು ಆದಿವಾಸಿ ಮಹಿಳೆಯರಿಗೆ ಇದೀಗ ದೆಹಲಿಯ ವಿಮಾನವೇರುವ ಭಾಗ್ಯ ಒದಗಿಬಂದಿದೆ. ಕೌಶಲ್ಯಾಭಿವೃದ್ಧಿ, ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆಯ ಯೋಜನೆಯಾಗಿದ್ದು, ಸಂಜೀವಿನೀ -ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆಯ ಮಾರ್ಗದರ್ಶನದಲ್ಲಿ ಅನುಷ್ಠಾನಗೊಳ್ಳಲಿದೆ. ಮಾರ್ಚ್ 1 ರಂದು ರಾಷ್ಟ್ರಪತಿಗಳ ಭೇಟಿ ಹಾಗೂ ಅಮೃತ್ ಉದ್ಯಾನವನಕ್ಕೆ ಭೇಟಿ ನೀಡಲು ಇವರಿಗೆ ಅವಕಾಶದೊರೆಯಲಿದೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಸುಳ್ಯ

ಪ್ರಕಾಶ್ ಕೆ ತೂಮಿನಾಡು ಅವರಿಗೆ ಮಾತೃ ವಿಯೋಗ

ಮಂಜೇಶ್ವರ: ಕನ್ನಡ ಮತ್ತು ತುಳು ಚಿತ್ರರಂಗದ ಪ್ರಖ್ಯಾತ ಪೋಷಕ ಮತ್ತು ಹಾಸ್ಯ ನಟರಾದ ಪ್ರಕಾಶ್ ಕೆ. ತೂಮಿನಾಡು ಅವರ ಮಾತೃಶ್ರೀಯವರಾದ ಗಿರಿಜಾ ಅವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ. ಮೃತರ ಅಂತಿಮ ವಿಧಿ ವಿಧಾನಗಳು ಮಂಗಳವಾರ ಬೆಳಿಗ್ಗೆ ೧೦ ಗಂಟೆಗೆ ತೂಮಿನಾಡು ಸ್ವಗೃಹದಲ್ಲಿ ನಡೆಯಲಿದೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

ಅಮೃತ ಸದೃಶ ಎಳನೀರು

ನೈಸರ್ಗಿಕವಾಗಿ ದೊರಕುವ, ದೇಹದ ಕಾವನ್ನು ತಣಿಸಿ ಬಾಯಾರಿಕೆಯನ್ನು ಇಂಗಿಸಿ, ಮನಸ್ಸಿಗೆ ಉಲ್ಲಾಸ ನೀಡುವಅತೀ ಉತ್ತಮ ಪೇಯವೆಂದರೆ ಅದು ಎಳನೀರು ಎಂದರೆ ಅತಿಶಯೋಕ್ತಿಯಾಗಲಾರದು. ಬಹಳ ಸುಲಭವಾಗಿ ಹಳ್ಳಿ, ನಗರ, ಪೇಟೆ, ಊರು, ಕೇರಿ ಹೀಗೆ ಎಲ್ಲೆಡೆ ಅತೀ ಕಡಿಮೆ ದರಕ್ಕೆ ದೊರಕುವ ಈ ನೈಸರ್ಗಿಕ ಪೇಯವನ್ನು ಅಮೃತ ಸದೃಶ ಪೇಯ ಎಂದೂ ಕರೆಯಲಾಗುತ್ತದೆ. ಇದರಲ್ಲಿ ದೊರಕುವ ವಿಟಮಿನ್, ಖನಿಜಾಂಶ, ಪೋಷಕಾಂಶ ಮತ್ತು ಇತರ ಸಮೃದ್ಧವಾದ ಸೋಡಿಯಂ, ಪೊಟಾಷಿಯಂ ಮುಂತಾದ ಲವಣಗಳಿಂದಾಗಿ,