HomeFresh Newsಸರಣಿ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ಅರೋಪಿಯ ದಸ್ತಗಿರಿ. ದ.ಕ ಜಿಲ್ಲೆಯ 05 ಪ್ರಕರಣಗಳು ಸೇರಿದಂತೆ...

ಸರಣಿ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ಅರೋಪಿಯ ದಸ್ತಗಿರಿ. ದ.ಕ ಜಿಲ್ಲೆಯ 05 ಪ್ರಕರಣಗಳು ಸೇರಿದಂತೆ ಒಟ್ಟು 11 ಪ್ರಕರಣಗಳು ಪತ್ತೆ

ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಬೆಳ್ತಂಗಡಿ ಹಾಗೂ ಉಪ್ಪಿನಂಗಡಿ ಪ್ರದೇಶಗಳಲ್ಲಿ ಕಳೆದ ಮೇ ತಿಂಗಳಿನಲ್ಲಿ ನಡೆದ ಸರಣಿ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ, ಈಗಾಗಲೇ ಬೆಳ್ತಂಗಡಿ ಠಾಣೆಯಲ್ಲಿ ಅ.ಕ್ರ 58/2026, ಅ.ಕ್ರ 59/2026 ಹಾಗೂ ಅ.ಕ್ರ 64/2026, ಹಾಗೂ ಉಪ್ಪಿನಂಗಡಿ ಠಾಣೆಯಲ್ಲಿ ಅಕ್ರ:78/2026 ಹಾಗೂ ಅಕ್ರ:79/2026 ರಂತೆ ಪ್ರಕರಣಗಳು ದಾಖಲಾಗಿರುತ್ತದೆ.

ಸದ್ರಿ ಪ್ರಕರಣಗಳ ಆರೋಪಿ ಪತ್ತೆಗಾಗಿ ತನಿಖೆ ನಡೆಸಲಾಗಿ ಪ್ರಕರಣ ಆರೋಪಿಯಾದ ತಮಿಳುನಾಡು ಕೊಯಂಬತ್ತೂರು ನಿವಾಸಿ ಜಯಕುಮಾರ್ ವಿ (55), ಎಂಬಾತನನ್ನು ದಿನಾಂಕ: 08.07.2026 ರಂದು ದಸ್ತಗಿರಿ ಮಾಡಿ ಆರೋಪಿಯ ಬಳಿಯಿದ್ದ ಕಬ್ಬಿಣದ ಸಲಾಕೆ, ಸ್ಕ್ರೂ ಡ್ರೈವರ್, ಬ್ಯಾಗ್ ಹಾಗೂ 02 ಮೊಬೈಲ್ ಫೋನ್ ನ್ನು ಸ್ವಾಧೀನಪಡಿಸಲಾಗಿರುತ್ತದೆ. ಆರೋಪಿಯ ವಿಚಾರಣೆಯ ವೇಳೆ ಆತನು ದ.ಕ ಜಿಲ್ಲಾ ಪೊಲೀಸ್ ವ್ಯಾಪ್ತಿಯ 05 ಪ್ರಕರಣಗಳನ್ನು ಹೊರತುಪಡಿಸಿ, ಮಂಗಳೂರು ಸುರತ್ಕಲ್ ಠಾಣಾ ವ್ಯಾಪ್ತಿಯ 01 ಪ್ರಕರಣ, ಕೇರಳ ರಾಜ್ಯದ 04 ಪೊಲೀಸ್ ಠಾಣೆಗಳಲ್ಲಿ ತಲಾ 1 ಪ್ರಕರಣಗಳು ಹಾಗೂ ಬೆಂಗಳೂರಿನಲ್ಲಿ 01 ಪ್ರಕರಣಗಳು ದಾಖಲಾಗಿರುವುದು ವಿಚಾರಣೆಯ ವೇಳೆ ತಿಳಿದುಬಂದಿರುತ್ತದೆ.

ಆರೋಪಿ ಪತ್ತೆ ಕಾರ್ಯದಲ್ಲಿ ಶ್ರೀರವಿ ಬಿ.ಎಸ್‌, ಪೊಲೀಸ್ ನಿರೀಕ್ಷಕರು(ಪ್ರಭಾರ) ಬೆಳ್ತಂಗಡಿ ಪೊಲೀಸ್‌ ಠಾಣೆ ಮತ್ತು ನಾಗರಾಜ್‌, ಪಿಐ, ಉಪ್ಪಿನಂಗಡಿ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ, ಆನಂದ ಎಂ, ಠಾಣಾ ಪಿಎಸ್ಐ-1,(ಕಾ ಮತ್ತು ಸು) ಹಾಗೂ ಸಿಖಂದರ್‌ ಪಾಷಾ, ಠಾಣಾ ಪಿಎಸ್ಐ-2 (ತನಿಖೆ), ಬೆಳ್ತಂಗಡಿ ಪೊಲೀಸ್ ಠಾಣೆ , ಸುತೇಶ್‌ ಕೆ.ಪಿ, ಪಿಎಸ್‌ಐ ಉಪ್ಪಿನಂಗಡಿ ಪೊಲೀಸ್ ಠಾಣೆ, ಬೆಳ್ತಂಗಡಿ ಪೊಲೀಸ್‌ ಠಾಣಾ ಅಪರಾಧ ದಳದ ಸಿಬ್ಬಂದಿಯವರಾದ ಹೆಚ್‌ಸಿ 335 ಪಂಪಾಪತಿ, ಪಿಸಿ 2372 ಗಿರೀಶ್, ಸಿಪಿಸಿ 2487 ಹೇಮರಾಜ್‌ ಹೆಚ್‌ ಪಿ, ಉಪ್ಪಿನಂಗಡಿ ಪೊಲೀಸ್ ಠಾಣೆ, ಪಿಸಿ 2506 ಹರ್ಷಿತ್‌, ಕಡಬ ಪೊಲೀಸ್ ಠಾಣೆ, ಹೆಚ್‌ಸಿ 864 ಪ್ರಕಾಶ್‌, ಸಿಡಿಆರ್‌ ವಿಭಾಗದ ಸಂಪತ್‌, ದಿವಾಕರ್ ರವರುಗಳನ್ನು ಒಳಗೊಂಡ ತನಿಖಾ ತಂಡ ಕಾರ್ಯನಿರ್ವಹಿಸಿರುತ್ತದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments