ಕರಾವಳಿಯ ಸಂಸ್ಕೃತಿ ಮತ್ತು ಕೃಷಿ ಸಂಭ್ರಮದ ಪ್ರತೀಕವಾದ ಕೆಸರು ಗದ್ದೆಯ ಆಟಗಳಿಗೆ ಇದೀಗ ಸಿದ್ಧತೆ ಜೋರಾಗಿದೆ. ಕಬಕದಲ್ಲಿ ಈ ಬಾರಿ ಮತ್ತೊಂದು ಅದ್ಭುತ ಸಂಭ್ರಮಕ್ಕೆ ವೇದಿಕೆ ಸಿದ್ಧವಾಗಿದೆ.

ಹೌದು.. ಶ್ರೀ ಮಹಾದೇವಿ ಯುವಕ ಮಂಡಲ (ರಿ.) ಕಬಕ ಮತ್ತು ಶ್ರೀ ಮಹಾದೇವಿ ಮಹಿಳಾ ಮಂಡಳಿ ಕಬಕದ ವತಿಯಿಂದ, ಮೂರನೇ ವರ್ಷದ ‘ತುಳುನಾಡ ಪೆರ್ಮದ ಕೆಸರ್ಡ್ ಒಂಜಿ ದಿನ’ ಕಾರ್ಯಕ್ರಮವನ್ನು ಪುತ್ತೂರು ತಾಲೂಕಿನ ಕಬಕ ಸೀಗೆತ್ತಡಿಯಲ್ಲಿ ಇದೇ ಬರುವ ಜುಲೈ 26ರಂದು ಆಯೋಜಿಸಲಾಗಿದೆ.

