HomeFresh Newsಹೆಜಮಾಡಿ: ನಾರಾಯಣ ಪೂಜಾರಿ ಅವರಿಗೆ ನುಡಿ ನಮನ

ಹೆಜಮಾಡಿ: ನಾರಾಯಣ ಪೂಜಾರಿ ಅವರಿಗೆ ನುಡಿ ನಮನ

ಹೆಜಮಾಡಿ: ಇತ್ತೀಚೆಗೆ ನಿಧನರಾದ ಹೆಜಮಾಡಿ ಕುದುರೆ ಜಾರಂದಾಯ ದೈವಸ್ಥಾನದ ಗಡಿ ಪ್ರಧಾನ ಅರ್ಚಕ ನಾರಾಯಣ ಪೂಜಾರಿ ಅವರಿಗೆ ನುಡಿ ನಮನ ಕಾರ್ಯಕ್ರಮವು ಅ. 16ರಂದು ಹೆಜಮಾಡಿ ಬಿಲ್ಲವ ಸಂಘದ ರತ್ನ ಶಂಕರ್ ಸಭಾಭವನದಲ್ಲಿ ನಡೆಯಿತು.


ಹೆಜಮಾಡಿ ಕುದುರೆ ಜಾರಂದಾಯ ದೈವಸ್ಥಾನದ ಅಧ್ಯಕ್ಷ ಪ್ರಭೋದ್ ಚಂದ್ರ ಹೆಜಮಾಡಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ದಿವಂಗತ ನಾರಾಯಣ ಪೂಜಾರಿ ಅವರ ಕಾರ್ಯವೈಖರಿ ಹಾಗೂ ದೈವಸ್ಥಾನದ ಸೇವೆಯಲ್ಲಿ ಅವರು ಸಲ್ಲಿಸಿದ ಕೊಡುಗೆಯನ್ನು ಸ್ಮರಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪಡುಬಿದ್ರಿ ಕಲ್ಲಟ್ಟೆ ಶ್ರೀ ಜಾರಂದಾಯ ದೈವಸ್ಥಾನದ ಗುತ್ತಿನಾರ್ ವಿಶುಕುಮಾರ್ ಶೆಟ್ಟಿ, ಕೊಡಮಣಿತ್ತಾಯ ದೈವಸ್ಥಾನದ ಅರ್ಚಕ ಹಾಗೂ ಜ್ಯೋತಿಷಿ ಕೇಶವ ಅಮೀನ್, ಹೆಜಮಾಡಿ ಬಿಲ್ಲವ ಸಂಘದ ಅಧ್ಯಕ್ಷ ಮೋಹನ್ ದಾಸ್ ಹೆಜಮಾಡಿ, ಹೆಜಮಾಡಿ ಕುದುರೆ ಜಾರಂದಾಯ ದೈವಸ್ಥಾನದ ಗೌರವಾಧ್ಯಕ್ಷ ಮಾಧವ ಸನಿಲ್, ಹೆಜಮಾಡಿ ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷರಾದ ವಾಮನ್ ಕೋಟ್ಯಾನ್ ನಡಿಕುದ್ರು, ಸುಧಾಕರ ಕರ್ಕೇರಾ ಹಾಗೂ ಮುಲ್ಕಿಯ ಬಾಲಚಂದ್ರ ಸನಿಲ್ ಅವರು ನುಡಿ ನಮನ ಸಲ್ಲಿಸಿ, ನಾರಾಯಣ ಪೂಜಾರಿ ಅವರ ಸೇವೆ ಹಾಗೂ ವ್ಯಕ್ತಿತ್ವವನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷ ಸುಭಾಸ್ ಜಿ. ಸಾಲ್ಯಾನ್, ಶೀನ ಪೂಜಾರಿ ಪಡುಬಿದ್ರಿ, ಮೂಡುಕರೆ ಬಿಲ್ಲವ ಸಮಿತಿಯ ಅಧ್ಯಕ್ಷ ಶ್ರೀನಿವಾಸ್ ಕೋಟ್ಯಾನ್, ಮೃತರ ಪತ್ನಿ, ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧುಮಿತ್ರರು ಉಪಸ್ಥಿತರಿದ್ದರು.
ಮನೋಹರ್ ಹೆಜಮಾಡಿ ಕಾರ್ಯಕ್ರಮ ನಿರೂಪಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments