ತೆಂಕಣ ಅಮೆರಿಕ ಮೂಲದ ಅಕ್ಸಾ ಸೆಲ್ಲೋವಿಯಾನಾ ಇಲ್ಲವೇ ಫೀಜೋಅ ಹಣ್ಣು ತಿಂದು ಬಿಸಾಡುವವರೆಗೆ ಹಸಿರು ಬಣ್ಣ ಮಾತ್ರ ಹೊಂದಿರುತ್ತದೆ.

ಉಷ್ಣವಲಯದ ಹಸಿರು ಮೊಟ್ಟೆ ಆಕಾರದ ಈ ಹಣ್ಣು ಕೊಲಂಬಿಯಾ, ಬ್ರೆಜಿಲ್, ಉರುಗ್ವೆ, ಪರಾಗ್ವೆ ಮೂಲದ್ದಾದರೂ ಉಷ್ಣವಲಯದ ಬಹುತೇಕ ದೇಶಗಳಲ್ಲಿ ಬೆಳೆಯುತ್ತಾರೆ; ನ್ಯೂಜಿಲ್ಯಾಂಡ್ ಇದರಲ್ಲಿ ಮುಂದಿದೆ.

ಸಿಪ್ಪೆ ಹುಳಿ, ಎಸೆಯುವುದು ಹೆಚ್ಚು; ಆದರೆ ಅಡುಗೆಯಲ್ಲಿ ಬಳಸುವವರೂ ಇದ್ದಾರೆ. ಒಳಗೆ ಹೆಚ್ಚು ಸಿಹಿ ತುಸು ಹುಳಿ ಬೀಜ ಸಹಿತದ ತಿರುಳು ಇರುತ್ತದೆ. ಅದನ್ನು ನೇರ ತಿನ್ನಬಹುದು. ಅನಾನಾಸು, ಪೇರಳೆ, ಸ್ಟ್ರಾಬೆರಿ ಬೆರೆತ ರುಚಿಯ ಇದನ್ನು ಫೈನಾಪಲ್ ಗವ್ವಾ ಎಂದು ಹೇಳುವುದೂ ಇದೆ.

ಚರ್ಮದಂತಾ ಇದರ ಹೊರಮೈ ಸದಾ ಹಸಿರು ಇರುತ್ತದೆ. ಸಿ ವಿಟಮಿನ್, ಪೊಟಾಸಿಯಂ, ಪೋಲೆಟ್ ಮೊದಲಾದ ಸತ್ವಭರಿತ ಹಣ್ಣು ಇದು. ಮಿಶ್ರ ಹಣ್ಣಿನ ರಸ, ಜಾಮ್, ಕೇಕ್, ಚಟ್ನಿ ಮಾಡುವುದಲ್ಲದೆ ಪೈ, ಮಪಿನ್, ಕೇಕ್ ತಯಾರಿಕೆಯಲ್ಲಿ ಬಳಸುತ್ತಾರೆ.

ಇಪ್ಪತ್ತೆರಡಕ್ಕೂ ಹೆಚ್ಚು ಜಾತಿಯವು ಇವೆ. ಹಣ್ಣು ಬೀಳುತ್ತದೆ; ಕಾಯಿ ಕೊಯ್ದರೆ ಫಲವಿಲ್ಲ. ಅಡ್ಡ ಕೊಯ್ದು ಒಳ ತಿರುಳನ್ನು ಚಮಚದಿಂದ ತೆಗೆದು ಬಳಸುತ್ತಾರೆ.

