Home Archive by category ಕರಾವಳಿ (Page 61)

ನಾಲಿಗೆ ಹೇಳುವ ವೈದ್ಯ ಲೋಕದ ಸತ್ಯಗಳು

ರೋಗ ಪತ್ತೆಗೆ ರಹದಾರಿ ನೀಡುವ ನಾಲಗೆನಾಲಗೆ ನಮ್ಮ ದೇಹದ ಬಹಳ ಮುಖ್ಯವಾದ ಅಂಗ. ಜೀರ್ಣಾಂಗ ವ್ಯವಸ್ಥೆಯು ಪ್ರಾಥಮಿಕ ಹಂತದಲ್ಲಿ ಅಂದರೆ ಹೆಬ್ಬಾಗಿಲಿನಲ್ಲಿ ಇರುವ ನಾಲಗೆ, ಜೀರ್ಣ ಪ್ರಕ್ರಿಯೆಗೆ ಅತೀ ಅಗತ್ಯ. ನಾವು ತಿನ್ನುವ ಆಹಾರದ ರುಚಿ ಸವಿಯಲು, ಆಹಾರ ಪದಾರ್ಥಗಳನ್ನು ಸೂಕ್ತವಾಗಿ ಜಗಿಯಲು, ಸ್ಪಷ್ಟವಾಗಿ ಮಾತನಾಡಲು ನಾಲಗೆಯ ಸಹಕಾರ ಅತೀ ಅಗತ್ಯ. ಈ ಕಾರಣದಿಂದಲೇ ನಮ್ಮ

ಮಂಗಳೂರು: ಜ.11ರಂದು “ಶಿವದೂತೆ ಗುಳಿಗೆ” 555ನೇ ಪ್ರದರ್ಶನದ ಸಂಭ್ರಮ!

ಮಂಗಳೂರು: “ಜನವರಿ 11ರಂದು ಸಂಜೆ 5 ಗಂಟೆಗೆ ಅಡ್ಯಾರ್ ಗಾರ್ಡನ್ ನಲ್ಲಿ ಜನಮೆಚ್ಚುಗೆ ಪಡೆದಿರುವ “ಶಿವದೂತೆ ಗುಳಿಗೆ” ನಾಟಕದ 555ನೇ ಪ್ರದರ್ಶನದ ಸಂಭ್ರಮ ಕಾರ್ಯಕ್ರಮ ಏರ್ಪಡಿಸಲಾಗಿದ್ದು ಕೊಪ್ಪ ಗೌರಿಗದ್ದೆಯ ಅವಧೂತ ವಿನಯ್ ಗುರೂಜಿ ಅವರು ದೀಪ ಪ್ರಜ್ವಲನೆಗೈಯಲಿದ್ದಾರೆ” ಎಂದು ಹಿರಿಯ ರಂಗಕರ್ಮಿ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಮಾಹಿತಿ ನೀಡಿದರು. “ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಪರಮಾನಂದ ಸಾಲಿಯಾನ್ ಅವರಿಗೆ ದಿ. ವನಿತಾ

ಗುಜರಾತ್: ಅತ್ಯಾಚಾರಿಗಳಿಗೆ ಜೈಲು ಮುಕ್ತಿ ಇಲ್ಲ- ಸುಪ್ರೀಂ ಕೋರ್ಟ್

ಬಿಲ್ಕಿಸ್ ಬಾನು ಅತ್ಯಾಚಾರಕ್ಕೆ ಶಿಕ್ಷೆಗೆ ಒಳಗಾದವರನ್ನು ಬಿಜೆಪಿಯು ತಾನೇ ಬಿಡಿಸಿ ಸ್ವಾಗತ ಕಾರ್ಯಕ್ರಮ ಕೂಡ ನಡೆಸಿತ್ತು. ಸುಪ್ರೀಂ ಕೋರ್ಟು ಅವರನ್ನು ಮತ್ತೆ ಜೈಲಿಗೆ ಹೋಗಿ ಎಂದು ಬಿಜೆಪಿ ಮುಖಕ್ಕೆ ಮಂಗಳಾರತಿ ಮಾಡಿದೆ. ನ್ಯಾಯಾಂಗದ ಮೇಲಿನ ನಂಬಿಕೆ ಉಳಿಯುವಂತೆ ಮಾಡಿದೆ. ಬಿಲ್ಕಿಸ್ ಒಂದು ಪ್ರದೇಶ; ಗುಂಪು ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಯನ್ನು ಆ ಹೆಸರಿನಿಂದಲೆ ಗುರುತಿಸಲಾಗಿದೆ. ಆಕೆಯ ಅತ್ಯಾಚಾರಕ್ಕೆ ಶಿಕ್ಷೆಗೊಳಗಾದ 11 ಜನರ ಬಿಡುಗಡೆ ಆಗಿತ್ತು. ಅದಕ್ಕೆ

ವಸ್ತು ವಿಜ್ಞಾನ ಕ್ಷೇತ್ರದಲ್ಲಿ ಪ್ರೊ. ಅಂಜನಾದೇವಿ ಸಾಧನೆ: ಜರ್ಮನಿಯ ಐಎಫ್ ಡಬ್ಲ್ಯೂ ಸಂಸ್ಥೆಯ ನಿರ್ದೇಶಕರಾಗಿ ಆಯ್ಕೆ

ಜರ್ಮನಿಯ ಡ್ರಸ್ಡೆನ್ನಿನ ಇನ್ಸ್ಟಿಟ್ಯೂಟ್ ಆಫ್ ಮೆಟೀರಿಯಲ್ಸ್ ಕೆಮಿಸ್ಟ್ರಿ ಯ ನಿರ್ದೇಶಕರಾಗಿ ಮಂಗಳೂರು ಮೂಲದ ಪ್ರೊ. ಅಂಜನಾದೇವಿಯವರು ಆಯ್ಕೆಯಾಗಿದ್ದಾರೆ. ಈ ಕುರಿತು ಜರ್ಮನಿಯ ಲೈಬ್ನಿಚ್ ಘನ ಸ್ಥಿತಿ ಮತ್ತು ವಸ್ತುಗಳ ಸಂಶೋಧನಾ ಸಂಸ್ಥೆಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯು ತನ್ನ ಹಿರಿಯ ಡಾಕ್ಟರಲ್ ವಿದ್ಯಾರ್ಥಿಗಳಲ್ಲಿ ಜರ್ಮನಿಯಲ್ಲಿ ಇಂತಹ ಉನ್ನತ ಹುದ್ದೆಯನ್ನು ಅಲಂಕರಿಸಿರುವವರಲ್ಲಿ ಪ್ರೊ. ದೇವಿಯವರು

ಜ.10ಕ್ಕೆ ಪುರಭವನದಲ್ಲಿ “ಗರುಡ ಪಂಚಮಿ” 50ರ ಸಂಭ್ರಮ, ಪತ್ರಕರ್ತ ಜಗನ್ನಾಥ ಶೆಟ್ಟಿ ಬಾಳರಿಗೆ “ರಂಗ ಕಲಾಬಂಧು” ಬಿರುದು ಪ್ರದಾನ

ಮಂಗಳೂರು: “ಜನವರಿ 10ರಂದು ನಗರದ ಪುರಭವನದಲ್ಲಿ ಶ್ರೀ ಲಲಿತೆ ಕಲಾವಿದರು ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ತ್ರಿರಂಗ ಸಂಗಮ ಮುಂಬೈ ಸಂಚಾಲಕತ್ವದಲ್ಲಿ ಗರುಡ ಪಂಚಮಿ 50ರ ಪ್ರದರ್ಶನದ ಸಂಭ್ರಮ ಹಾಗೂ ಪತ್ರಕರ್ತ ಜಗನ್ನಾಥ ಶೆಟ್ಟಿ ಬಾಳರಿಗೆ ರಂಗ ಕಲಾಬಂಧು ಬಿರುದು ಪ್ರದಾನ ನಡೆಯಲಿದೆ” ಎಂದು ತಂಡದ ಸಂಚಾಲಕ ಲಯನ್ ಡಿ. ಕಿಶೋರ್ ಶೆಟ್ಟಿ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಕಟೀಲು ಕ್ಷೇತ್ರದ

ಮಾಜೀ ಮಂತ್ರಿಗೆ ಮಾಜೀ ಮಂತ್ರಿಯ ನುಡಿ ಛಡಿಯೇಟು

ನನ್ನನ್ನು ಗಡಿಪಾರು ಮಾಡುವುದಕ್ಕೆ ಮೊದಲು ನೀನು ಗಡಿಪಾರು ಆಗುವುದರಿಂದ ರಕ್ಷಿಸಿಕೋ ಎಂದು ಮಾಜೀ ಸಚಿವ ಬಿ. ಕೆ. ಹರಿಪ್ರಸಾದ್ ಅವರು ಮತ್ತೊಬ್ಬ ಮಾಜೀ ಮಂತ್ರಿ ಶ್ರೀರಾಮುಲುಗೆ ಎಚ್ಚರಿಕೆ ನೀಡಿದ್ದಾರೆ. ರಾಮುಲು ಅವರೆ ನೀವು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ವರದಿಯಲ್ಲಿ ಹಲವು ಗಂಭೀರ ಪ್ರಕರಣಗಳನ್ನು ಎದುರಿಸುತ್ತಿರುವುದಾಗಿ ಬರೆದು ಹೇಳಿದ್ದೀರಿ. ಕಳ್ಳ ಗಣಿಗಾರಿಕೆ ಮಾಡಿ, ತೆರಿಗೆ ವಂಚಿಸಿ ದೇಶದ್ರೋಹ ಮಾಡಿದ್ದೀರಿ. ನಿಮ್ಮ ಗೃಹ ಮಂತ್ರಿ ಅಮಿತ್ ಶಾರನ್ನು ಕೋರ್ಟು

ಪುತ್ತೂರು : ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ

ಪುತ್ತೂರು : ಕಾಲೇಜು ವಿದ್ಯಾರ್ಥಿನಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಈಶ್ವರಮಂಗಲ ಸಮೀಪದ ಸುಳ್ಯಪದವು ಕನ್ನಡ್ಕದಲ್ಲಿ ನಡೆದಿದೆ. ಕನ್ನಡ್ಕ ನಿವಾಸಿ, ಫಿಲೋಮಿನಾ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ದೀಕ್ಷಾ (16ವ) ಮೃತ ಯುವತಿ.ದೀಕ್ಷಾ ಮನೆಯ ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ದೀಕ್ಷಾ ವಾಣಿಜ್ಯ ವಿಭಾಗದಲ್ಲಿ ಕಲಿಯುತ್ತಿದ್ದು, ನಾಳೆ ಅವರಿಗೆ ಲ್ಯಾಬ್ ಪರೀಕ್ಷೆಯಿತ್ತು ಎಂದು

ಕುಂದಾಪುರ: ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ 29ನೇ ವಾರ್ಷಿಕ ಮಹಾಸಭೆ

ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ 29ನೇ ವಾರ್ಷಿಕ ಅಧಿವೇಶನ, ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ, ವಿಪ್ರ ಸನ್ಮಾನ, ವಿಚಾರಗೋಷ್ಠಿ ಕಾರ್ಯಕ್ರಮಗಳು ನಾಗೂರು ಒಡೆಯರ ಮಠ ಶ್ರೀ ಕೃಷ್ಣ ಲಲಿತ ಕಲಾಮಂದಿರದಲ್ಲಿ ನಡೆಯಿತು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಾರಣಕಟ್ಟೆ ಶ್ರೀ ಕೃಷ್ಣಮೂರ್ತಿ ಮಂಜ ಅವರು ಕಾರ್ಯಕ್ರಮವನ್ನು ಉದ್ಘಾಟಸಿ ಮಾತನಾಡಿ, ಬ್ರಾಹ್ಮಣರಲ್ಲಿ ಇರುವ ಸದ್ಗುಣಗಳು ಮತ್ತು ಪ್ರತಿಭೆ ಆಧಾರದ ಮೇಲೆಯೇ ಜೀವನವನ್ನು ತಾತ್ವಿಕತೆಯೊಂದಿಗೆ ನಡೆಸಬೇಕು.

ಬಂಟ್ವಾಳ: ಸಾರ್ವಜನಿಕ ಕುಂದು ಕೊರತೆಗಳಿಗೆ ಸ್ಪಂದಿಸುವಲ್ಲಿ ಜಿಲ್ಲಾಡಳಿತ ವಿಫಲ: ಪ್ರಭಾಕರ ಪ್ರಭು ಆರೋಪ

ಬಂಟ್ವಾಳ: ಸಾರ್ವಜನಿಕರಿಗೆ ಅತ್ಯಾವಶ್ಯಕವಾಗುವ ಕಂದಾಯ ಇಲಾಖೆಯ ಕೆಲಸ ಕಾರ್ಯಗಳು ತುಂಬಾ ವಿಳಂಬವಾಗುತ್ತಿದ್ದು, ಜನಸಾಮಾನ್ಯರು ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತದ ಮೇಲೆ ವಿಶ್ವಾಸವನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದು, ನೊಂದವರು ಜಿಲ್ಲಾಡಳಿತ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ತಾ.ಪಂ. ಮಾಜಿ ಸದಸ್ಯ ಪ್ರಭಾರಕ ಪ್ರಭು ಆರೋಪಿಸಿದರು.ಅವರು ಬಿ.ಸಿ.ರೋಡಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಸಾರ್ವಜನಿಕರ ಕುಂದು ಕೊರತೆ ನಿವಾರಿಸುವಲ್ಲಿ ಕಂದಾಯ

ಪುತ್ತೂರು: ಪಂಜಳ ಅಂಗನವಾಡಿ ಕೇಂದ್ರದಲ್ಲಿ ಬಾಲಮೇಳ

ಪುತ್ತೂರು: ಮಕ್ಕಳ ಕಲಿಕೆಯ ಮೊದಲ ಹೆಜ್ಜೆಯೇ ಅಂಗನವಾಡಿ ಕೇಂದ್ರಗಳು, ಈ ಕೇಂದ್ರಗಳಲ್ಲಿ ಮಕ್ಕಳಿಗೆ ಕಲಿಕೆಯ ಜೊತೆಗೆ ಮನೆಯ ಎಲ್ಲಾ ವಾತಾವರಣಗಳು ಅಂಗನವಾಡಿ ಕೇಂದ್ರಗಳಲ್ಲಿ ಕಾಣಲು ಸಾಧ್ಯವಾಗುತ್ತದೆ ಎಂದು ಶಾಸಕರಾದ ಅಶೋಕ್ ರೈ ಹೇಳಿದರು. ಅವರು ಮುಂಡೂರು ಗ್ರಾಮದ ಪಂಜಳ ಅಂಗನವಾಡಿ ಕೇಂದ್ರದಲ್ಲಿ ನಡೆದ ಬಾಲ ಮೇಳದಲ್ಲಿ ಮಾತನಾಡಿದರು.ಪುಟ್ಟ ಮಕ್ಕಳಿಗೆ ಪೌಷ್ಠಿಕ ಆಹಾರವನ್ನು ಇಲ್ಲಿ ನೀಡಲಾಗುತ್ತಿದ್ದು ಮಕ್ಕಳನ್ನು ಅಂಗನವಾಡಿಗೆ ದಾಖಲಿಸುವಂತೆ ಶಾಸಕರು ಮನವಿ ಮಾಡಿದರು.