Homeಕರಾವಳಿಮೂಡುಬಿದಿರೆಯಲ್ಲಿ ಪಿ.ಡೀಕಯ್ಯರಿಗೆ "ನುಡಿ ನಮನ"

ಮೂಡುಬಿದಿರೆಯಲ್ಲಿ ಪಿ.ಡೀಕಯ್ಯರಿಗೆ “ನುಡಿ ನಮನ”

ಮೂಡುಬಿದಿರೆ : ಇತ್ತೀಚೆಗೆ ನಿಧನ ಹೊಂದಿರುವ ದಲಿತ ಚಳುವಳಿಯ ನೇತಾರ, ಸಮಾಜ ಪರಿವರ್ತನಾ ನಾಯಕ ವಿ.ಡೀಕಯ್ಯ ಅವರಿಗೆ ತುಲುನಾಡ್ ಮನ್ಸ ಸಮಾಜ ಸೇವಾ ಸಂಘ (ರಿ)ದ ವತಿಯಿಂದ ಜು.31ರಂದು ಬೆಳಗ್ಗೆ ಸಮಾಜ ಮಂದಿರ ವಠಾರದ ಸ್ವರ್ಣ ಮಂದಿರದಲ್ಲಿ ನಡೆಯಲಿದೆ ಎಂದು ತುಲುನಾಡ್ ಮನ್ಸ ಸಮಾಜ ಸೇವಾ ಸಂಘ (ರಿ)ದ ಗೌರವ ಸಲಹೆಗಾರ ಅಚ್ಯುತ ಸಂಪಿಗೆ ತಿಳಿಸಿದ್ದಾರೆ.

ಅವರು ಮೂಡುಬಿದಿರೆ ಪ್ರೆಸ್‍ಕ್ಲಬ್‍ನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ತುಲುನಾಡ್ ಮನ್ನ ಸಮಾಜ ಸೇವಾ ಸಂಘ (ರಿ)ದ ಅಧ್ಯಕ್ಷ ವೆಂಕಣ್ಣ ಕೊಟ್ಟೂರು ಅಧ್ಯಕ್ಷತೆ ವಹಿಸಲಿದ್ದು, ಆ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ “ನುಡಿ ನಮನ ಸಲ್ಲಿಸಲಿದ್ದಾರೆ. ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್, ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲ್‍ಸರ್, ಕೆ. ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಇನಾಯತ್ ಆಟ, ಜಿ.ಎಸ್.ಪಿ.ಯ ಜಿಲ್ಲಾಧ್ಯಕ್ಷ ದಾಸಪ್ಪ ಎಡಪದವು, ಬ್ಯಾರಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಟಿ.ಎ.ಯಂ. ಹನೀಫ್, ರೀಟಾ ನೊರೊನ್ಹಾ, ಸಿಪಿಐಎಂನ ರಾಜ್ಯ ಸಮಿತಿ ಸದಸ್ಯ ಯಾದವ ಶೆಟ್ಟಿ, ರಂಗಕರ್ಮಿ ಕೃಷ್ಣಪ್ಪ ಬಂಜಲ, ಸೋಮೇಶ್ವರ ಪುರಸಭೆಯ ಮುಖ್ಯಾದಿ ಕಾರಿ ಮತ್ತಾಡಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆಂದು ತಿಳಿಸಿದರು. ತುಲುನಾಡ್ ಮನ್ನ ಸಮಾಜ ಸೇವಾ ಸಂಘ(ರಿ)ದ ಅಧ್ಯಕ್ಷ ವೆಂಕಣ್ಣ ಕೊಳ್ಳೂರು, ಸತೀಶ್ ಕಕ್ಕೆಪದವು, ಮುಖಂಡರಾದ ರಮೇಶ್ ಬೋಧಿ ಪತ್ರಿಕಾಗೋಷ್ಠಿಯಲ್ಲಿ
ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments