ಸ್ಪೆಯಿನ್ನಿನ ಬಾರ್ಸಿಲೋನಾ ವಿಶ್ವವಿದ್ಯಾನಿಲಯ, ಈಜಿಪ್ತಿನ ಕೈರೋ ವಿಶ್ವವಿದ್ಯಾನಿಲಯಗಳು ಜಂಟಿಯಾಗಿ ನಡೆಸಿದ ಉತ್ಖನನ ವಿಶೇಷವೊಂದನ್ನು ತೆರೆದಿಟ್ಟಿವೆ.

ಹೋಮರನ ಇಲಿಯಡ್ ಕಾವ್ಯವು ಗ್ರೀಕ್ ಸಾಹಿತ್ಯದ ಪ್ರಮುಖ ಬರಹಗಳಲ್ಲಿ ಒಂದು. ಅದರ ಒಂದು ಪ್ರತಿಯು ಓಕ್ಸಿರೈಂಕಸ್ ಉತ್ಖನನದ ಮಮ್ಮಿ ಬಳಿ ಪತ್ತೆಯಾಗಿದೆ.

೬೫ನೇ ಗೋರಿಯಲ್ಲಿ ಇದು ಪತ್ತೆಯಾಗಿದೆ. ಈಜಿಪ್ತ್ ಗೋರಿಗಳಲ್ಲಿ ಬರಹ ಮಾಮೂಲು; ಗ್ರೀಕ್ ಕಾವ್ಯ ಇದೇ ಮೊದಲು. ಈಜಿಪ್ತನ್ನು ಗ್ರೀಕರು ಗೆದ್ದಾಗ ಈ ಕಾವ್ಯದ ಪ್ರತಿ ಆಗಿರುವುದು ಸಹಜ.

ಈಜಿಪ್ತನ್ನು ರೋಮನರು ಗೆದ್ದುಕೊಂಡಾಗ ಕೆಲವು ಗೋರಿಗಳನ್ನು ಮರು ಕಟ್ಟಿದ್ದಾರೆ. ಅಂತಾ ಗೋರಿಯಲ್ಲಿ ಈ ಕಾವ್ಯ ಕೃತಿ ಕಂಡುಬಂದಿದೆ.

ಡಾ. ಮೈಕ್ ಮಾಸ್ಕಾರ್ಟ್, ಡಾ. ಎಸ್ತರ್ ಪೊನ್ಸ್ ಮೆಲಾದೊ, ಡಾ. ಹಸನ್ ಅಮೀರ್ ನಾಯಕತ್ವದ ತಂಡವು ಇದನ್ನು ಪತ್ತೆ ಹಚ್ಚಿದೆ; ಅಧ್ಯಯನ ಮುಂದುವರಿದಿದೆ.

