ಉಡುಪಿ ಜಿಲ್ಲಾ ಪೊಲೀಸ್ ಮತ್ತು ಕೆಎಂಸಿ ಮಣಿಪಾಲ : ಸಂಚಾರಿ ಪೋಲೀಸ್ ಮತ್ತು ಚಾಲಕರಿಗೆ ತುರ್ತು ಸಮಯದಲ್ಲಿ ಪ್ರಥಮ ಪ್ರತಿಕ್ರಿಯೆಗಾಗಿ ತರಬೇತಿ ಕಾರ್ಯಾಗಾರ

ಮಣಿಪಾಲ : ಉಡುಪಿ ಜಿಲ್ಲಾ ಪೊಲೀಸ್, ಸೆಂಟರ್ ಫಾರ್ ಕ್ಲಿನಿಕಲ್ ಮತ್ತು ಇನ್ನೋವೇಟಿವ್ ಫೋರೆನ್ಸಿಕ್ಸ್ (CCIF) ಮತ್ತು ಕೆಎಂಸಿ ಮಣಿಪಾಲದ ತುರ್ತು ವೈದ್ಯಕೀಯ ವಿಭಾಗದ ಸಹಯೋಗದೊಂದಿಗೆ ಟ್ರಾಫಿಕ್ ಪೊಲೀಸ್ ಮತ್ತು ಚಾಲಕರಿಗೆ ಪ್ರಥಮ ಪ್ರತಿಕ್ರಿಯೆ ನೀಡುವುದರ ಬಗ್ಗೆ ತರಬೇತಿ ಕಾರ್ಯಾಗಾರವನ್ನು ಮಣಿಪಾಲದ ಡಾ. ಟಿಎಂಎ ಪೈ ಹಾಲ್ ಒಂದರಲ್ಲಿ, ಮೇ 30 ರಂದು ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಗೌರವಾನ್ವಿತ ಅತಿಥಿಗಳು ಮತ್ತು ತಜ್ಞರು ಇಂತಹ ಉಪಕ್ರಮಗಳ ಪ್ರಾಮುಖ್ಯತೆಯನ್ನು ಚರ್ಚಿಸಿದರು.

ಕಾರ್ಯಾಗಾರಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಹಾಕೆ ಅಕ್ಷಯ್ ಮಚ್ಚಿಂದ್ರ ಐ.ಪಿ.ಎಸ್ ರವರು, ರಸ್ತೆ ಸುರಕ್ಷತೆಯನ್ನು ಹೆಚ್ಚಿಸುವಲ್ಲಿ ಮತ್ತು ತುರ್ತು ಸಂದರ್ಭಗಳಲ್ಲಿ ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸಲು ಅಗತ್ಯವಾದ ಕೌಶಲ್ಯಗಳೊಂದಿಗೆ ಟ್ರಾಫಿಕ್ ಪೋಲೀಸ್ ಮತ್ತು ಚಾಲಕರನ್ನು ಸಜ್ಜುಗೊಳಿಸುವಲ್ಲಿ ಈ ತರಬೇತಿ ಕಾರ್ಯಕ್ರಮ ಅತ್ಯಂತ ಪ್ರಾಮುಖ್ಯತೆಯನ್ನು ಹೊಂದಿದೆ ಎಂದರು. ರಸ್ತೆಗಳಲ್ಲಿ ಸಾರ್ವಜನಿಕ ಸುರಕ್ಷತೆಯನ್ನು ಖಾತ್ರಿಪಡಿಸುವಲ್ಲಿ ಟ್ರಾಫಿಕ್ ಪೊಲೀಸರು ಮತ್ತು ಚಾಲಕರು ನಿರ್ಣಾಯಕ ಪಾತ್ರವನ್ನು ವಹಿಸುತ್ತಾರೆ ಮತ್ತು ರಸ್ತೆ ನಿರ್ವಹಣೆ ಮತ್ತು ತುರ್ತು ಪ್ರತಿಕ್ರಿಯೆಯ ಸಮಯದಲ್ಲಿ ಅವರು ಎದುರಿಸುವ ಸವಾಲುಗಳನ್ನು ಎದುರಿಸಲು, ನಿರಂತರ ತರಬೇತಿಯ ಅಗತ್ಯವನ್ನು ಒತ್ತಿ ಹೇಳಿ, ಈ ಪ್ರಮುಖ ಕಾರ್ಯಾಗಾರವನ್ನು ಆಯೋಜಿಸಿದ್ದಕ್ಕಾಗಿ ಅವರು ಮಾಹೆ ಮತ್ತು ಕೆಎಂಸಿ ಗೆ ಧನ್ಯವಾದ ಹೇಳಿದರು.

ಗೌರವ ಅತಿಥಿಯಾಗಿ ಆಗಮಿಸಿದ್ದ, ಡಾ. ಶರತ್ ಕೆ ರಾವ್, ಸಹ ಉಪ ಕುಲಪತಿ (ಆರೋಗ್ಯ ವಿಜ್ಞಾನ) ಅವರು ತಮ್ಮ ತಮ್ಮ ಭಾಷಣದಲ್ಲಿ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ನ ಆಳವಾದ ಒಳನೋಟಗಳನ್ನು ಹಾಗೂ ಸಮಾಜಮುಖಿ ಕಾರ್ಯಗಳಲ್ಲಿ ಮುಂಚೂಣಿಯಲ್ಲಿ ಉಳಿಯುವ ಅಚಲ ಬದ್ಧತೆಯನ್ನು ಒತ್ತಿ ಹೇಳಿದರು. ಮುಂಬರುವ ಹಲವು ವರ್ಷಗಳಿಂದ ಪ್ರಭಾವಶಾಲಿ ಚಟುವಟಿಕೆಗಳು ಡಾ. ಶರತ್ ರಾವ್ ಅವರು ಆರೋಗ್ಯ ಶಿಕ್ಷಣ, ಸಂಶೋಧನೆ ಮತ್ತು ಸಮುದಾಯದ ಒಳಿತಿಗಾಗಿ ಮಾಡುವ ಕಾರ್ಯಗಳಲ್ಲಿ ಮಾಹೆಯ ದೃಷ್ಟಿಕೋನವನ್ನು ತಿಳಿಸಿದರು. ಈ ಮಹತ್ವದ ಚಟುವಟಿಕೆಯು ನಡೆಯಲು ಸಹಕರಿಸಿದ ಉಡುಪಿ ಪೊಲೀಸ್, ಸೆಂಟರ್ ಫಾರ್ ಕ್ಲಿನಿಕಲ್ ಮತ್ತು ಇನ್ನೋವೇಟಿವ್ ಫೋರೆನ್ಸಿಕ್ಸ್ (ಸಿಸಿಐಎಫ್) ಮತ್ತು ಎಮರ್ಜೆನ್ಸಿ ಮೆಡಿಸಿನ್ ವಿಭಾಗಕ್ಕೆ ಅವರು ಕೃತಜ್ಞತೆ ಸಲ್ಲಿಸಿದರು.

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಅವರು ತಮ್ಮ ಮುಖ್ಯ ಭಾಷಣದಲ್ಲಿ, ಉಡುಪಿ ಜಿಲ್ಲಾ ಪೊಲೀಸರು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ, ಸಾರ್ವಜನಿಕ ಸುರಕ್ಷತೆಯನ್ನು ಖಾತ್ರಿಪಡಿಸುವಲ್ಲಿ ಮತ್ತು ಸಮುದಾಯದ ಯೋಗಕ್ಷೇಮವನ್ನು ಬಲಪಡಿಸುವ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿರುವುದನ್ನು ಶ್ಲಾಘಿಸಿದರು.
ಕಾರ್ಯಾಗಾರದಲ್ಲಿ ಭಾಗವಹಿಸಿದವರು ಪ್ರಥಮ ಚಿಕಿತ್ಸಾ ತಂತ್ರಗಳು, CPR (ಹೃದಯ ಶ್ವಾಸಕೋಶದ ಪುನರುಜ್ಜೀವನ), ಅಪಘಾತ ನಿರ್ವಹಣೆ ಮತ್ತು ರಸ್ತೆ ಅಪಘಾತಗಳು ಮತ್ತು ತುರ್ತು ಸಂದರ್ಭಗಳಲ್ಲಿ ತಕ್ಷಣದ ಪ್ರತಿಕ್ರಿಯೆಗಾಗಿ ನಿರ್ಣಾಯಕವಾದ ಇತರ ಅಗತ್ಯ ಕೌಶಲ್ಯಗಳನ್ನು ಒಳಗೊಂಡಂತೆ ವಿವಿಧ ಕ್ಷೇತ್ರಗಳಲ್ಲಿ ಸಮಗ್ರ ತರಬೇತಿಯನ್ನು ಪಡೆದರು. ಕಾರ್ಯಾಗಾರವು ಭಾಗವಹಿಸುವವರಿಗೆ ಅನುಭವಿ ವೃತ್ತಿಪರರಿಂದ ಕಲಿಯಲು, ಉತ್ತಮ ಅಭ್ಯಾಸಗಳನ್ನು ವಿನಿಮಯ ಮಾಡಿಕೊಳ್ಳಲು ಮತ್ತು ಅಪಾಯಗಳನ್ನು ತಗ್ಗಿಸಲು ಮತ್ತು ಅಪಘಾತದ ಸ್ಥಳಗಳಲ್ಲಿ ನಿರ್ಣಾಯಕ ಸಹಾಯವನ್ನು ಒದಗಿಸಲು ಅವರ ಸಾಮರ್ಥ್ಯವನ್ನು ಹೆಚ್ಚಿಸಲು ಸಂವಾದಾತ್ಮಕ ವೇದಿಕೆಯನ್ನು ಒದಗಿಸಿತು.

ಕೆಎಂಸಿ ಮಣಿಪಾಲದ ಡೀನ್ ಡಾ. ಪದ್ಮರಾಜ್ ಹೆಗ್ಡೆ ಅವರು ಗಣ್ಯ ಅತಿಥಿಗಳು, ಕಾರ್ಯಗಾರದಲ್ಲಿ ಭಾಗವಹಿಸಿದವರನ್ನು ಮತ್ತು ಉಪಸ್ಥಿತರನ್ನು ಸ್ವಾಗತಿಸಿದರು. ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಫ್ರೆಸ್ಟನ್ ಮಾರ್ಕ್ ಸಿರೂರ್ ಪ್ರಾಸ್ತಾವಿಕ ವಿವರಣೆ ನೀಡಿದರು. ಕೆಎಂಸಿ ಮಣಿಪಾಲದ ಸಿಸಿಐಎಫ್‌ನ ಸಂಯೋಜಕ ಡಾ. ವಿನೋದ್ ನಾಯಕ್ ಧನ್ಯವಾದ ಸಮರ್ಪಣೆ ನೀಡಿದರು.

Related Posts

Leave a Reply

Your email address will not be published.