ಕರಾವಳಿಯ ಪ್ರಮುಖ ಮಹೇಶ್ ಮೋಟಾರ್ಸ್ ಬಸ್ ಸಂಸ್ಥೆಯ ಮಾಲಕ ಎ.ಕೆ. ಜಯರಾಮ್ ಶೇಖರ್ ಪುತ್ರ ಮಹೇಶ್ ಶೇಖ(46) ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ.
ಸಾರಿಗೆ ಕ್ಷೇತ್ರದಲ್ಲಿ ಅಪಾರ ಸ್ನೇಹಿತರ, ಹಿತೈಷಿಗಳ ವಲಯದಲ್ಲಿ ಇವರ ನಿಧನದಿಂದ ಶೋಕದ ವಾತಾವರಣ ನಿರ್ಮಾಣವಾಗಿದೆ. ಮಹೇಶ್ ಶೇಖ ಹಲವು ವರ್ಷಗಳಿಂದ ಮಹೇಶ್ ಮೋಟಾರ್ಸ್ ಮೂಲಕ ಕರಾವಳಿ ಭಾಗದ ಸಾರ್ವಜನಿಕರಿಗೆ ಸಾರಿಗೆ ಸೇವೆ ಒದಗಿಸುತ್ತಿದ್ದು, ಸಾರಿಗೆ ಕ್ಷೇತ್ರದಲ್ಲಿ ತಮ್ಮದೇ ಆದ ಚಾಪನ್ನು ಮೂಡಿಸಿದ್ದರು. ಇವರ ನಿಧನ ಕುಟುಂಬಕ್ಕೆ ಅಪಾರ ದುಃಖವನ್ನುಂಟುಮಾಡಿದೆ.
ಮೃತರ ವಿಧಿ ವಿಧಾನಗಳು ಗುರುವಾರ ಬೆಳಿಗ್ಗೆ 10ಗಂಟೆಗೆ ಕುಲಶೇಖರದ ಜ್ಯೋತಿ ಪ್ರಕಾಶ ಮನೆಯಲ್ಲಿ ನಡೆಯಲಿದೆ. ಮೃತರು ತಂದೆ ತಾಯಿ ಪತ್ನಿ ಮಗಳು, ಅಣ್ಣ, ಅಕ್ಕ ಹಾಗೂ ತಂಗಿಯನ್ನು ಅಗಲಿದ್ದಾರೆ.

