ಮಂಜೇಶ್ವರ: ಕಾರು ಡಿವೈಡರ್‌ಗೆ ಡಿಕ್ಕಿ : ಸಾವಿನ ಸಂಖ್ಯೆ ಎರಡಕ್ಕೆ

ಮಂಜೇಶ್ವರ: ಕಾರು ಡಿವೈಡರ್ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿದ್ದ ಮತ್ತೊಬ್ಬ ಯುವಕ ಸಾವನ್ನಪ್ಪಿದ್ದಾನೆ. ಇದರೊಂದಿಗೆ ಅಪಘಾತದಲ್ಲಿ ಸಾವನ್ನಪ್ಪಿದ ಯುವಕರ ಸಂಖ್ಯೆ ಎರಡಕ್ಕೇರಿದೆ.
ಉಪ್ಪಳ ಹಿದಾಯತ್ ನಗರ ಬುರಾಕ್ ರಸ್ತೆಯ ಸಲೀಂ ಅವರ ಪುತ್ರ ಮಹಮ್ಮದ್ ಬಷರ್ (23) ಸೋಮವಾರ ಮಧ್ಯಾಹ್ನ ಸಾವಿಗೆ ಶರಣಾಗಿದ್ದಾನೆ.
ತಲಪಾಡಿ ಸಮೀಪದ ಕೊಲ್ಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ರಾತ್ರಿ 8 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿತ್ತು. ಅವರು ಪ್ರಯಾಣಿಸುತ್ತಿದ್ದ ಟೊಯೊಟಾ ಯಾರಿಸ್ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಮಂಜೇಶ್ವರ ಹತ್ತನೇ ಮೈಲಿ ನಿವಾಸಿ ಸೈಯದ್ ಎಂಬವರ ಪುತ್ರ ಅಹ್ಮದ್ ರಿಫಾಯಿ (24) ಭಾನುವಾರ ಅಪಘಾತ ನಡೆದ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಇಬ್ಬರೂ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಹ್ಮದ್ ರಿಫಾಯಿ ಅವರ ಜೀವ ಉಳಿಸಲು ಸಾಧ್ಯವಾಗಲಿಲ್ಲ. ತಲೆಗೆ ಗಂಭೀರವಾಗಿ ಗಾಯಗೊಂಡಿದ್ದ ಬಷರ್ ನನ್ನು ಎಜೆ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು.
