ಎಂಐಎಫ್‍ಎಸ್‍ಇಗೆ ಟೈಮ್ಸ್ ಗ್ರೂಪ್ ಅವಾರ್ಡ್ 2023

ಫೈರ್ & ಸೇಫ್ಟಿ ಮತ್ತು ಎಚ್‍ಎಸ್‍ಇ ಕ್ಷೇತ್ರದಲ್ಲಿ ಕಳೆದ 16 ವರ್ಷಗಳಲ್ಲಿ ನಿರಂತರ ಸಾಧನೆಗಳನ್ನು ಸೃಷ್ಟಿಸಿ 17 ಸಾವಿರಕ್ಕಿಂತಲೂ ಅಧಿಕ ವಿದ್ಯಾರ್ಥಿಗಳಿಗೆ ದೇಶ ವಿದೇಶಗಳಲ್ಲಿ ಉದ್ಯೋಗ ಒದಗಿಸಿದ ವಿದ್ಯಾಸಂಸ್ಥೆ ಮಂಗಳೂರು ಇನ್ಸಿಟ್ಯೂಟ್ ಆಫ್ ಫೈರ್ & ಸೇಫ್ಟಿ ಇಂಜಿನಿಯರಿಂಗ್ (ಎಂಐಎಫ್‍ಎಸ್‍ಇ)ಗೆ 2023 ಸಾಲಿನ ಇಕಾನಮಿಕ್ಸ್ ಬಿಸಿನೆಸ್ ಟೈಮ್ಸ್ ಅವಾರ್ಡ್ 2023 ಲಭಿಸಿದೆ. ಬಾಲಿವುಡ್ ನಟಿ ರಿಷಿ ಖನ್ನಾ ಅವಾರ್ಡನ್ನು ಎಂಐಎಫ್‍ಎಸ್‍ಇ ಅಧ್ಯಕ್ಷ ವಿನೋದ್ ಜಾನ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಮನೋಜ್ ಪಿ.ವಿ. ಅವರಿಗೆ ಹಸ್ತಾಂತರಿಸಿದರು.

ಎಂಐಎಫ್‍ಎಸ್‍ಇಯ ಕಳೆದ 15 ವರ್ಷಗಳ ಉದ್ಯೋಗ ಕ್ಷೇತ್ರದಲ್ಲಿನ ಸಾಧÀನೆ, ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಪ್ರತೀ ವರ್ಷ ಕಲಿಯುತ್ತಿರುವ ಸಂದರ್ಭದಲ್ಲೇ ದೇಶ ವಿದೇಶಗಳಲ್ಲಿ ಉದ್ಯೋಗ ಲಭಿಸುವಿಕೆ, ಉತ್ತಮ ಗುಣಮಟ್ಟದ ಶೈಕ್ಷಣ ಕ ವಿಧಾನಗಳು, ರಾಜ್ಯಾದಾದ್ಯಂತ 9 ಶಾಖೆಗಳ ವಿಸ್ತರಣೆ, ಪ್ರಸಿದ್ಧ 3 ವಿಶ್ವವಿದ್ಯಾನಿಲಯಗಳ ಮಾನ್ಯತೆ ಮತ್ತು ಸ್ಕಿಲ್ ಇಂಡಿಯಾ:ಎನ್‍ಎಸ್‍ಡಿಸಿ ಮಾನ್ಯತೆ ಮುಂತಾದ ಹಲವಾರು ವಿಷೇಶತೆಗಳನ್ನು ಗುರುತಿಸಿ ಸಂಸ್ಥೆಗೆ ಈ ಅವಾರ್ಡನ್ನು ನೀಡಲಾಯಿತು. ಈಗಾಗಲೇ 2014ರಲ್ಲಿ ಇಂಡಿಯಾ ಎಜುಕೇಶನಲ್ ಎಕ್ಸಲೆನ್ಸ್ ಅವಾರ್ಡ್ ಮತ್ತು 2016ರಲ್ಲಿ ನವದೆಹಲಿಯ ವಲ್ರ್ಡ್‍ವೈಡ್ ಅಚೀವರ್ಸ್ ವತಿಯಿಂದ ಏಷಿಯಾ ಎಜುಕೇಶನಲ್ ಸಮಿಟ್ ಅವಾರ್ಡ್ ಲಭಿಸಿದೆ.

2023-24ನೇ ಶೈಕ್ಷಣ ಕ ಸಾಲಿನ ಆರಂಭದಲ್ಲಿ ತಮ್ಮ ಸಂಸ್ಥೆಯ ಸಾಧನೆಗೆ ಲಭಿಸಿರುವ ಈ ವಿಶೇಷ ಪ್ರಶಸ್ತಿಯು ಮುಂಬರುವ ಶೈಕ್ಷಣ ಕ ಸಾಲಿನಲ್ಲಿ ಇನ್ನಷ್ಟು ಸಾಧನೆಗಳನ್ನು ಮಾಡಲು ಪ್ರೇರಣೆಯಾಗಲಿದೆ. ಈ ವಿಶೇಷ ಪ್ರಶಸ್ತಿಯು ಎಂಐಎಫ್‍ಎಸ್‍ಇಯಲ್ಲಿ ಕಲಿತು ದೇಶ-ವಿದೇಶಗಳಲ್ಲಿ ಈಗಾಗಲೇ ಉದ್ಯೋಗ ಪಡೆದಿರುವ ನಮ್ಮ ವಿದ್ಯಾರ್ಥಿಗಳು ಮತ್ತು ನುರಿತ ಜವಾಬ್ದಾರಿಯುತ ಅಧ್ಯಾಪಕರುಗಳ ಕಠಿಣ ಪರಿಶ್ರಮದ ಫಲ ಎನ್ನುತ್ತಾರೆ ಸಂಸ್ಥೆಯ ಅಧ್ಯಕ್ಷ ವಿನೋದ್ ಜಾನ್. ಫೈರ್ & ಸೇಫ್ಟಿ ಕ್ಷೇತ್ರದ ವಿವಿಧ ಡಿಪ್ಲೋಮಾ, ಪಿಜಿ ಡಿಪ್ಲೋಮಾ, ಮತ್ತು ಅಡ್ವಾನ್ಸ್ಡ್ ಡಿಪ್ಲೋಮಾ ಕೋರ್ಸ್‍ಗಳಿಗೆ ಅಡ್ಮಿಶನ್ ಪ್ರಕ್ರಿಯೆಗಳು ಈಗಾಗಲೇ ಆರಂಭಗೊಂಡಿವೆ. ಆಸಕ್ತ ವಿದ್ಯಾರ್ಥಿಗಳು ಭೇಟಿ ನೀಡಬಹುದು.

Related Posts

Leave a Reply

Your email address will not be published.