ಮೂಡುಬಿದಿರೆ: ಪಾಲಡ್ಕ ಗ್ರಾಮದ ವರ್ಣಬೆಟ್ಟು ಪೊಸಲಾಯಿಯಲ್ಲಿ ವಿದ್ಯುತ್ ಅವಘಡದಿಂದ ಮೃತಪಟ್ಟ ಮರ್ಸಿ ಮಸ್ಕರೇನ್ಹಸ್, ಶೋನ್ ಮಸ್ಕರೇನ್ಹಸ್ ಮನೆಗೆ ಶಾಸಕ ಉಮಾನಾಥ ಕೋಟ್ಯಾನ್ ಶುಕ್ರವಾರ ಭೇಟಿ ನೀಡಿ ಬಂಧುಗಳಿಗೆ ಸಾಂತ್ವನ ಹೇಳಿದರು.
ದುರಂತದ ವಿಷಯ ತಿಳಿದ ಕೂಡಲೇ ಮೆಸ್ಕಾಂ ಅಧಿಕಾರಿಗಳಿಗೆ ಪರಿಶೀಲನೆ ನಡೆಸಲು ಸೂಚಿಸಿದ್ದೇನೆ, ಮನೆಯ ವಿದ್ಯುತ್ ಸಂಪರ್ಕ ಮತ್ತು ವಿದ್ಯುತ್ ಪ್ರವಹಿಸಲು ಕಾರಣವನ್ನು ಪತ್ತೆ ಹಚ್ಚಬೇಕು ಮತ್ತು ಮುಂದೆ ಎಲ್ಲಿಯೂ ಇಂತಹ ಅವಘಡಗಳಾಗದಂತೆ ಮುಂಜಾಗ್ರತೆ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಅವರು ಹೇಳಿದರು.

ಈ ಸಂದರ್ಭದಲ್ಲಿ ಪಾಲಡ್ಕ ಪಂಚಾಯತ್ ಮಾಜಿ ಉಪಾಧ್ಯಕ್ಷ ಸುಕೇಶ್ ಶೆಟ್ಟಿ, ಮಾಜಿ ಸದಸ್ಯ ಶೆಡ್ಯ ಸುರೇಶ್ ಪೂಜಾರಿ, ಸ್ಥಳಿಯರಾದ ಜಯ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಇಂದು ಅಂತ್ಯ ಸಂಸ್ಕಾರ: ಮೃತರ ಹತ್ತಿರದ ಸಂಬಂಧಿ ಜೆರಿ ಮಸ್ಕರೇನ್ಹಸ್ ಶುಕ್ರವಾರ ವಿದೇಶದಿಂದ ಮರಳಿದ್ದಾರೆ. ಈ ಹಿನ್ನೆಲೆಯಲ್ಲಿ ಶನಿವಾರ ಅ.೨೪ ರಂದು ಬೆಳಿಗ್ಗೆ ೯ ಗಂಟೆಗೆ ಪಾಲಡ್ಕ ಸೈಂಟ್ ಇಗ್ನೇಶಿಯಸ್ ಚರ್ಚ್‌ನಲ್ಲಿ ಇಬ್ಬರ ಮೃತದೇಹಗಳ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.


