ಹೆಬ್ರಿ:ಪೆರ್ಡೂರು ಗೋರೇಲಿನಲ್ಲಿ ಶ್ರೀಯುತ ಹರಿನಾರಾಯಣ ಭಂಡಿ ಯವರ ನಿವಾಸದಲ್ಲಿ ನಿನ್ನೆ ರೀತಿ ರಾತ್ರಿ ಹೊತ್ತು ದಾಳಿ ನಡೆಸಿದ ಚಿರತೆ ಮನೆಯಲ್ಲಿ ಕಟ್ಟಿ ಹಾಕಿದ್ದ ನಾಯಿಯನ್ನು ಹೊತ್ತು ಕೊಂಡು ಹೋಗುತ್ತಿರುವ ದೃಶ್ಯವು . ಮನೆಯ ಸಿಸಿಟಿವಿಯಲ್ಲಿ ಕಂಡು ಬಂದಿದೆ. ಪೆರ್ಡೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿರತೆಯ ಹಾವಳಿ ಹೆಚ್ಚಾಗಿದ್ದು, ಚಿರತೆಯ ಓಡಾಟವನ್ನು
ಕಡಬ: ಕೋಳಿ ಹಿಡಿಯಲೆಂದು ಬಂದ ಚಿರತೆಯೊಂದು ಬಾವಿಗೆ ಬಿದ್ದ ಘಟನೆ ಕಡಬ ತಾಲೂಕಿನ ಕೊಂಬಾರು ಗ್ರಾಮದ ಕಮರ್ಕಜೆ ಎಂಬಲ್ಲಿ ಭಾನುವಾರದಂದು ಸಂಭವಿಸಿದೆ.ಚಿರತೆಯು ಕಮರ್ಕಜೆ ನಿವಾಸಿ ರಾಮಯ್ಯ ಗೌಡ ಎಂಬವರ ಮನೆಯ ಸಮೀಪದ ಬಾವಿಗೆ ಬಿದ್ದಿದ್ದು, ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಚಿರತೆಯ ರಕ್ಷಣಾ ಕಾರ್ಯ ಅರಣ್ಯ ಇಲಾಖೆಯಿಂದ ಆರಂಭಗೊಂಡಿದೆ.
ಪೆರುವಾಜೆ ಗ್ರಾಮದ ಕಾನಾವು ಸಮೀಪದ ಪೆರುವಾಜೆ ಬ್ಲಾಕ್ ಅರಣ್ಯ ಪ್ರದೇಶದಲ್ಲಿ ಉರುಳಿಗೆ ಬಿದ್ದ ಚಿರತೆಯನ್ನು ಯಶಸ್ವಿ ಕಾರ್ಯಾಚರಣೆಯ ಮೂಲಕ ಸೆರೆ ಹಿಡಿಯಲಾಗಿದೆ. ತಜ್ಞ ವೈದ್ಯರ ತಂಡ ಅರವಳಿಕೆ ಮದ್ದು ಪ್ರಯೋಗಿಸಿದ ಅನಂತರ ಚಿರತೆಯನ್ನು ಸೆರೆ ಹಿಡಿದು ಬೋನಿನ ಮೂಲಕ ಪಶ್ಚಿಮ ಘಟ್ಟದ ಕಾಡಿಗೆ ಕೊಂಡೊಯ್ಯಲಾಯಿತು. ಕಾರ್ಯಾಚರಣೆ ವೇಳೆ ಸಂದರ್ಭದಲ್ಲಿ ಪುತ್ತೂರು, ಸುಳ್ಯ ಉಪವಿಭಾಗದ ಅರಣ್ಯಧಿಕಾರಿಗಳು ಪಾಲ್ಗೊಂಡಿದ್ದರು.
ಪೆರ್ಣಂಕಿಲದಲ್ಲಿ ಗ್ರಾಮಸ್ಥರನ್ನು ಬಹು ದಿನಗಳಿಂದ ಕಾಡುತ್ತಿದ್ದ ಚಿರತೆ ಕೊನೆಗೂ ಬೋನಿಗೆ ಬಿದ್ದಿದೆ. ಗ್ರಾಮದಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದ ಚಿರತೆ ಕಳೆದ ರಾತ್ರಿ ಪೆರ್ಣಂಕಿಲದ ಗುಂಡುಪಾದೆ ಎಂಬಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಇರಿಸಿದ್ದ ಬೋನಿಗೆ ಬಿದ್ದಿದೆ. ಚಿರತೆಯನ್ನು ಸೆರೆ ಹಿಡಿಯಲು ಗುಂಡುಪಾದೆಯ ಅಶೋಕ್ ನಾಯಕ್ ಎಂಬವರ ತೋಟದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಬೋನು ಇರಿಸಿದ್ದರು. ಕಳೆದ ರಾತ್ರಿ ಚಿರತೆ ಇದರೊಳಗೆ ಸೆರೆಯಾಗಿದೆ. ಇಂದು ಬೆಳಗ್ಗೆ
ಮೂಡುಬಿದಿರೆ ತಾಲೂಕಿನಲ್ಲಿ ಪಡುಕೊಣಾಜೆಯಲ್ಲಿ ಚಿರತೆಯೊಂದು ಮನೆಯಂಗಳಕ್ಕೆ ಆಗಮಿಸಿ ನಾಯಿಯೊಂದನ್ನು ಹಿಡಿದುಕೊಂಡು ಹೋದ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಪಡುಕೊಣಾಜೆಯ ಸತೀಶ್ ಎಂಬವರ ಮನೆಯ ಬಳಿ ರಾತ್ರಿ ಅಡ್ಡಾಡುತ್ತಿದ್ದ ಚಿರತೆ ಮನೆಯಂಗಳದಲ್ಲಿ ಮಲಗಿದ್ದ ನಾಯಿಯನ್ನು ಎತ್ತಿಕೊಂಡು ಹೋಗಿದೆ. ಸ್ಥಳಕ್ಕೆ ಉಪವಲಯಾರಣ್ಯಾಧಿಕಾರಿ ಮಂಜುನಾಥ ಗಾಣಿಗ ಮತ್ತು ಸಿಬ್ಬಂದಿಗಳು ಭೇಟಿ ನೀಡಿದ್ದಾರೆ. ಶಿರ್ತಾಡಿ ಗ್ರಾ. ಪಂಚಾಯತ್ ಅಧ್ಯಕ್ಷ ಸಂತೋಷ್ ಕೋಟ್ಯಾನ್ ಜತೆ ಮಾತುಕತೆ