Homeಕರಾವಳಿಪಡುಕೊಣಾಜೆಯಲ್ಲಿ ಚಿರತೆಯಿಂದ ರಕ್ಷಿಸಿಕೊಂಡ ಶ್ವಾನ

ಪಡುಕೊಣಾಜೆಯಲ್ಲಿ ಚಿರತೆಯಿಂದ ರಕ್ಷಿಸಿಕೊಂಡ ಶ್ವಾನ

ಮೂಡುಬಿದಿರೆ ತಾಲೂಕಿನಲ್ಲಿ ಪಡುಕೊಣಾಜೆಯಲ್ಲಿ ಚಿರತೆಯೊಂದು ಮನೆಯಂಗಳಕ್ಕೆ ಆಗಮಿಸಿ ನಾಯಿಯೊಂದನ್ನು ಹಿಡಿದುಕೊಂಡು ಹೋದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.


ಪಡುಕೊಣಾಜೆಯ ಸತೀಶ್ ಎಂಬವರ ಮನೆಯ ಬಳಿ ರಾತ್ರಿ ಅಡ್ಡಾಡುತ್ತಿದ್ದ ಚಿರತೆ ಮನೆಯಂಗಳದಲ್ಲಿ ಮಲಗಿದ್ದ ನಾಯಿಯನ್ನು ಎತ್ತಿಕೊಂಡು ಹೋಗಿದೆ.
ಸ್ಥಳಕ್ಕೆ ಉಪವಲಯಾರಣ್ಯಾಧಿಕಾರಿ ಮಂಜುನಾಥ ಗಾಣಿಗ ಮತ್ತು ಸಿಬ್ಬಂದಿಗಳು ಭೇಟಿ ನೀಡಿದ್ದಾರೆ. ಶಿರ್ತಾಡಿ ಗ್ರಾ. ಪಂಚಾಯತ್ ಅಧ್ಯಕ್ಷ ಸಂತೋಷ್ ಕೋಟ್ಯಾನ್ ಜತೆ ಮಾತುಕತೆ ನಡೆಸಿದ್ದು ಇಂದು ಚಿರತೆಯನ್ನು ಹಿಡಿಯಲು ಬೋನು ಇಡುವುದೆಂದು ನಿರ್ಧರಿಸಿದ್ದಾರೆ.
ವರದಿ: ಪ್ರೇಮಶ್ರೀ ಮೂಡುಬಿದರೆ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments