Home Posts tagged #cricket

ನೆಲ್ಯಾಡಿ:ಸೌತಡ್ಕ ಮಹಾಗಣಪತಿ ಕ್ಷೇತ್ರಕ್ಕೆ ಕ್ರಿಕೆಟಿಗ ಕೆ.ಎಲ್.ರಾಹುಲ್ ಭೇಟಿ

ನೆಲ್ಯಾಡಿ: ಬಯಲು ಆಲಯ ಎಂದೇ ಪ್ರಖ್ಯಾತಿ ಪಡೆದಿರುವ ಕೊಕ್ಕಡ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತಕ್ಕೆ ಭಾರತ ಕ್ರಿಕೆಟ್ ತಂಡದ ಆಟಗಾರ ಕೆ.ಎಲ್.ರಾಹುಲ್ ಭೇಟಿ ನೀಡಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ರಾಹುಲ್ ಅವರನ್ನು ಕ್ಷೇತ್ರದ ವತಿಯಿಂದ ಗೌರವಿಸಲಾಯಿತು. ದೇವಸ್ಥಾನದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀನಿವಾಸ ಹಾಗೂ ಅರ್ಚಕರು ಉಪಸ್ಥಿತರಿದ್ದರು.

ಪಡುಬಿದ್ರಿ: ಡಿ.30-31ರಂದು ಸಮಾಜ ಸೇವೆಗಾಗಿ ಕಾಪುವಿನಲ್ಲಿ ಕ್ರಿಕೆಟ್ ಪಂದ್ಯಾಕೂಟ

ಪಡುಬಿದ್ರಿ: ಕಾಪು ಬಿರುವೆರ್ ಸೇವಾ ಸಮಿತಿ ಆಶ್ರಯದಲ್ಲಿ ಅವಳಿ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾಕೂಟ ಸಮಾಜ ಸೇವಾ ಹಿತದೃಷ್ಟಿಯಿಂದ ಡಿ.30 ಮತ್ತು 31ಕ್ಕೆ ಕಾಪು ದಂಡತೀರ್ಥ ಮೈದಾನದಲ್ಲಿ ನಡೆಯಲಿದೆ ಎಂಬುದಾಗಿ ಸಮಿತಿಯ ಅಧ್ಯಕ್ಷ  ಬಾಲಕೃಷ್ಣ ಕೋಟ್ಯಾನ್ ಹೇಳಿದ್ದಾರೆ. ಅವರು ಕಾಪು ಪ್ರೆಸ್ ಕ್ಲಬ್ ನಲ್ಲಿ ನಡೆಸಿದ ಸುದ್ದಿಗೋಷ್ಠಿಯ ತಿಳಿಸಿದ್ದಾರೆ. ಪಂದ್ಯಾಕೂಟ ಬಿಲ್ಲವ ಸಮಾಜದ ಯುವಕರಿಗಾಗಿ ನಡೆಯಲಿದ್ದು, ಹತ್ತು ತಂಡಗಳು ಭಾಗವಹಿಸಲಿದೆ. ಸಮಾಜದ 160 ಸದಸ್ಯರು

ಬಂಟ್ವಾಳ : ಇಂಡೋನೇಷ್ಯಾ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದ ಬಂಟ್ವಾಳದ ಯುವಕ

ಬಂಟ್ವಾಳ: ಮೂಲತಃ ತಾಲೂಕಿನ ಕುಕ್ಕಿಪ್ಪಾಡಿ ಗ್ರಾಮದ ಯುವಕನೋರ್ವ ಇಂಡೋನೇಷಿಯಾದ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾನೆ. ತಾಲೂಕಿನ ಕುಕ್ಕಿಪ್ಪಾಡಿ ಹುಣಸೆ ಬೆಟ್ಟು ನಿವಾಸಿ ಮಹಾಬಲ ಶೆಟ್ಟಿ ಎಂಬವರ ಪುತ್ರ ಧನೇಶ್ ಶೆಟ್ಟಿ ಇಂಡೋನೇಷಿಯಾ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದವರು. ವಿವಾಹಿತರಾಗಿರುವ ಧನೇಶ್ ಅವರು ತನ್ನ ಪತ್ನಿಯೊಂದಿಗೆ ಇಂಡೋನೇಷಿಯದ್ದಲ್ಲಿದ್ದು ಆರೋಗ್ಯ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಉತ್ತಮ ಕ್ರೀಡಾಪಟು ಆಗಿರುವ ಅವರಿಗೆ

ಬಹರೈನ್: ದ್ವೀಪದ ಕ್ರಿಕೆಟ್ ಪ್ರೇಮಿಗಳ ಮನಸೂರೆಗೊಂಡ “ವೈ.ಎಂ.ಸಿ ಟ್ರೋಫಿ-2023”

ಬಹರೈನ್ ದ್ವೀಪದ ವೈ.ಎಂ.ಸಿ ಸಂಘಟನೆಯು ‘ನಿಸರ್ಗ ಬಹರೈನ್”ನ ಆಶ್ರಯದಲ್ಲಿ ಜುಫೇರ್ ಪರಿಸರದಲ್ಲಿರುವ ಅಲ್ ನಜ್ಮಾ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾಟವೊಂದನ್ನು ಆಯೋಜಿಸಿದ್ದು, ಆಟಗಾರರೂ ವೀಕ್ಷಕರೂ ಸೇರಿದಂತೆ ದ್ವೀಪದ ನೂರಾರು ಕ್ರಿಕೆಟ್ ಪ್ರೇಮಿಗಳು ಈ ಪಂದ್ಯಾಟವನ್ನು ವೀಕ್ಷಿಸಿ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ದ್ವೀಪದ ಪ್ರಸಿದ್ಧ ಸಂಸ್ಥೆಯಾದ ಆರ್ & ಆರ್ ಸಂಸ್ಥೆಯು ಈ ಪಂದ್ಯಾಟದ ಮುಖ್ಯ ಪ್ರಾಯೋಜಕರಾಗಿ ಸಹಕರಿಸಿದ್ದರು.30 ಗಜಗಳ

ಜೂನ್ 17 ಮತ್ತು 18 – ತಾಂಡವ ಪ್ರೀಮಿಯರ್ ಲೀಗ್

ಟೀಮ್ ತಾಂಡವ ಪ್ರಸೆಂಟ್ಸ್ ತಾಂಡವ ಪ್ರೀಮಿಯರ್ ಲೀಗ್ ಉರ್ವ ಮೈದಾನದಲ್ಲಿ ಜೂನ್ 17 ಮತ್ತು 18ರಂದು ನಡೆಯಲಿದೆ.ಟೀಮ್ ತಾಂಡವ ವತಿಯಿಂದ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸುತ್ತಿದ್ದಾರೆ. ಜೂನ್ 18ರಂದು ನಡೆಯಲಿರುವ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟವು ವಿ4 ನ್ಯೂಸ್‍ನ ಯೂಟ್ಯೂಬ್ ಚಾನಲ್ ನಲ್ಲಿ ನೇರಪ್ರಸಾರಗೊಳ್ಳಲಿದೆ

ಬ್ರ್ಯಾಂಡ್ ಮಂಗಳೂರು ಸೌಹಾರ್ದ ಕ್ರಿಕೆಟ್ ಪಂದ್ಯಾವಳಿ: ಮಂಗಳೂರು ವಿವಿ ಕುಲಪತಿ ತಂಡ ಚಾಂಪಿಯನ್

ಮಂಗಳೂರು: ಮಂಗಳೂರು ವಿವಿ ಕುಲಪತಿ ತಂಡ ಬ್ರ್ಯಾಂಡ್ ಮಂಗಳೂರು ಸೌಹಾರ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿ ಪ್ರಶಸ್ತಿಯನ್ನು ಬಾಚಿಕೊಂಡಿದೆ. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ದ.ಕ.ಜಿಲ್ಲಾಡಳಿತ, ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಮ್ಯಾನೇಜ್ಮೆಂಟ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಗಾಂಧಿ ಜಯಂತಿ ಅಂಗವಾಗಿ ಅಡ್ಯಾರ್‌ನ ಸಹ್ಯಾದ್ರಿ ಕಾಲೇಜು ಕ್ರೀಡಾಂಗಣದಲ್ಲಿ ನಡೆದ ಟೂರ್ನಿಯ ಫೈನಲ್ ನಲ್ಲಿ ಮೀಡಿಯಾ ಗ್ರಾಮೀಣ ತಂಡವನ್ನು ಮಣಿಸಿ