ಪುತ್ತೂರು: ಪುತ್ತೂರು ತಾಲೂಕಿನ ಪಡುವನ್ನೂರು ಗ್ರಾಮದ ಕುದ್ಕಾಡಿ ಎಂಬಲ್ಲಿ ಮನೆ ಮಂದಿಯನ್ನು ಕಟ್ಟಿಹಾಕಿ ದರೋಡೆ ನಡೆಸಿದ ಪ್ರಕರಣವನ್ನು ಪತ್ತೆ ಹಚ್ಚಿದ ಪೊಲೀಸರು ಕೇರಳ ಮೂಲದ ಐವರು ಸೇರಿದಂತೆ ಒಟ್ಟು ಆರು ಮಂದಿಯನ್ನು ಬಂಧಿಸಿ, ದರೋಡೆ ನಡೆಸಿದ ಸೊತ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ತಿಳಿಸಿದ್ದಾರೆ.
ನಗರದ ಬೋಂದೆಲ್‌ನಲ್ಲಿರುವ ಬಾಲಕರ ಬಾಲ ಮಂದಿರದಿಂದ ನ.26 ರ ರವಿವಾರ ಮುಂಜಾನೆ ಶ್ಯಾಮವೆಲ್ ಟೊಪ್ಪು (16) ಮತ್ತು ವಡಲಮನಿ ಚಿರಂಜೀವ (16) ಎಂಬವರು ನಾಪತ್ತೆಯಾಗಿರುವ ಬಗ್ಗೆ ಕಾವೂರು ಠಾಣೆಯಲ್ಲಿ ದೂರು ದಾಖಲಾಗಿದೆ. ಸ್ಯಾಮುವೆಲ್ 150 ಸೆಂ.ಮೀ ಎತ್ತರವಿದ್ದು, ಬಿಳಿ ಮೈಬಣ್ಣ, ಕೋಲುಮುಖ, ಸಾಧಾರಣ ಮೈಕಟ್ಟು ಹೊಂದಿದ್ದಾನೆ. ಎದುರಿನಲ್ಲಿ ಹಳದಿ ಬಣ್ಣದ ಪಟ್ಟಿ ಇರುವ ತಿಳಿನೀಲಿ ಬಣ್ಣದ ಟೀಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದಾನೆ. ವಡಲಮನಿ ಚಿರಂಜೀವಿ 150 ಸೆಂ.ಮೀ
ಕುಂದಾಪುರ: ಇಲ್ಲಿನ ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯ ಅಂಪಾರಿನಲ್ಲಿ ಮಂಗಳವಾರದಂದು ಬೆಳಕಿಗೆ ಬಂದಿದ್ದ ವಿವಾಹಿತನೋರ್ವನ ಆತ್ಮಹತ್ಯೆ ಪ್ರಕರಣ ಇದೀಗ ತಿರುವು ಪಡೆದುಕೊಂಡಿದ್ದು ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಅಂಪಾರು ಗ್ರಾಮದ ಮೂಡುಬಗೆಯ ವಿವೇಕ ನಗರದ ನಿವಾಸಿ ನಾಗರಾಜ (36) ಕೊಲೆಯಾದ ದುರ್ದೈವಿ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗರಾಜ್ ಅವರ ಪತ್ನಿ ಸೇರಿದಂತೆ ಐವರನ್ನು ಶಂಕರನಾರಾಯಣ ಪೊಲೀಸರು ಬಂಧಿಸುವಲ್ಲಿ
ಕುಂದಾಪುರ: ಬಾರ್ ಮ್ಯಾನೇಜರೋರ್ವರಿಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಜರಿಗಾಗಿ ಸ್ಥಳಕ್ಕೆ ತೆರಳಿದ್ದ ವೇಳೆ ಆರೋಪಿಗಳ ತಂಡ ಏಕಾಏಕಿಯಾಗಿ ತಲವಾರು ದಾಳಿ ನಡೆಸಿದ ಪರಿಣಾಮ ಇಬ್ಬರು ಯುವಕರು ಗಾಯಗೊಂಡು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾದ ಘಟನೆ ಶುಕ್ರವಾರ ನಡೆದಿದೆ.ತಲವಾರು ದಾಳಿಗೊಳಗೊಳಗಾದ ಕಾಲ್ತೋಡು ನಿವಾಸಿ ರವಿ ಶೆಟ್ಟಿ ಹಾಗೂ ಪ್ರಶಾಂತ್ ಶೆಟ್ಟಿ ಇದೀಗ ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬುಧವಾರ ಶಿರೂರು ಗ್ರಾಮದ
ಉಳ್ಳಾಲ: ವಾರೆಂಟ್ ಆರೋಪಿಯನ್ನು ಹಿಡಿಯಲು ಹೋದ ಉಳ್ಳಾಲ ಠಾಣೆಯ ನಾಲ್ವರು ಪೊಲೀಸ್ ಸಿಬ್ಬಂದಿಗೆ ರೌಡಿಶೀಟರ್ ತಲವಾರು ತೋರಿಸಿ ಪರಾರಿಯಾದ ಘಟನೆ ಉಳ್ಳಾಲದ ಧರ್ಮನಗರದಲ್ಲಿ ನಡೆದಿದೆ. ಧರ್ಮನಗರ ನಿವಾಸಿ ಮುಕ್ತಾರ್ ಮುಕ್ತಾರ್ ಅಹ್ಮದ್ ಎಂಬಾತನ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದರು. ಈತನ ಮೇಲೆ ಹತ್ತಕ್ಕೂ ಹೆಚ್ಚು ಕೇಸುಗಳಿದ್ದು, ಕೋರ್ಟಿಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಹೀಗಾಗಿ ಉಳ್ಳಾಲ ಪೊಲೀಸರು ಕೋರ್ಟಿನಿಂದ ವಾರಂಟ್ ಪಡೆದು ಇಂದು ಬೆಳಗ್ಗೆ ಬಂಧಿಸಲು
ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ವ್ಯಕ್ತಿಯೊಬ್ಬರಿಗೆ ಉಳ್ಳಾಲದಲ್ಲಿ ಚೂರಿಯಿಂದ ಇರಿದು ಗಾಯಗೊಳಿಸಿದ ಘಟನೆ ನಡೆದಿದೆ. ಉಳ್ಳಾಲದಲ್ಲಿ ಗ್ಯಾಸ್ ಸ್ಟವ್‌ಗೆ ಸಂಬಂಧಿಸಿದ ಸಾಮಗ್ರಿಗಳನ್ನು ಹೊಂದಿರುವ ಅಂಗಡಿ ಮಾಲಕ ಹರೀಶ್ ಗಾಣಿಗ ಚೂರಿ ಇರಿತಕ್ಕೊಳಗಾಗಿರುವವರು. ಆರೋಪಿಯು ಈ ಹಿಂದೆ ಹರೀಶ್ ಜೊತೆ ಕ್ಷುಲ್ಲಕ ವಿಷಯಕ್ಕೆ ಸಂಬಂಧಿಸಿ ಗಲಾಟೆ ಮಾಡಿದ್ದನೆನ್ನಲಾಗಿದೆ. ಈ ಬಗ್ಗೆ ಹರೀಶ್ ಗಾಣಿಗ ಉಳ್ಳಾಲ ಠಾಣೆಗೆ ದೂರು ನೀಡಿದ್ದರು. ಇದರಿಂದ ಕೋಪಗೊಂಡ ಆರೋಪಿ ಮಂಗಳವಾರ ಹರೀಶ್
ಉಳ್ಳಾಲ: ಬಿಜೆಪಿ ಕಾರ್ಯಕರ್ತನ ಕೊಲೆಗೆ ಯತ್ನಿಸಿರುವ ಘಟನೆ ಕೊಣಾಜೆ ಸಮೀಪ ನಿನ್ನೆ ತಡರಾತ್ರಿ ನಡೆದಿದೆ. ಬಿಜೆಪಿ ಕಾರ್ಯಕರ್ತ, ಕೊಣಾಜೆ ಗ್ರಾ.ಪಂ ಮಾಜಿ ಸದಸ್ಯ ಪ್ರಕಾಶ್ ಶೆಟ್ಟಿ (38) ಎಂಬವರ ಕೊಲೆಗೆ ಯತ್ನಿಸಲಾಗಿದೆ. ಬೈಕಲ್ಲಿ ಬಂದ ಮೂವರು ಕೃತ್ಯ ಎಸಗಿರುವುದಾಗಿ ತಿಳಿದುಬಂದಿದೆ. ಸ್ನೇಹಿತ ಮಂಜುನಾಥ್ ಜೊತಗೆ ಬೈಕಿನಲ್ಲಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಹಿಂಬದಿಯಿಂದ ಬಂದ ದುಷ್ಕರ್ಮಿಗಳು ತಲವಾರು ಬೀಸಿದ್ದಾರೆ. ಪವಾಡಸದೃಶವಾಗಿ ತಲವಾರು ದಾಳಿ ಕೈಗೆ ಮಾತ್ರ