ಮೂಡುಬಿದಿರೆ: ಇಲ್ಲಿನ ಶ್ರೀ ಮಹಾವೀರ ಕಾಲೇಜು, ಗ್ರಂಥಾಲಯ ಸಹಾಯಕಿಯಾಗಿದ್ದ ಶ್ರೀಮತಿ ಹೇಮಲತಾ (49) ಅಲ್ಪ ಕಾಲದ ಅಸ್ವಾಸ್ಥ್ಯದಿಂದ ಸೆ 2ರಂದು ನಿಧನ ಹೊಂದಿದರು. ಅವರು ಪತಿಯನ್ನು ಅಗಲಿದ್ದಾರೆ. ಕಳೆದ 10 ವರ್ಷಗಳಿಂದ ಅವರು ಕಾಲೇಜಿನ ಗ್ರಂಥಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರ ನಿಧನಕ್ಕೆ ಮಹಾವೀರ ಕಾಲೇಜು ಆಡಳಿತ ಮಂಡಳಿ ಸಂತಾಪ ವ್ಯಕ್ತಪಡಿಸಿದೆ.
ಮಂಗಳೂರು :- ಆವೇ ಮಣ್ಣಿನ ಹೆಸರಾಂತ ಗಣಪತಿ ವಿಗ್ರಹಗಳ ತಯಾರಕರಾದ ಹಾಲಾಡಿ ದಾಮೋದರ ಶೆಣೈ (ಗಣಪತಿ ಮಾಮು) ಇವರು ಇಂದು ಬೆಳಿಗ್ಗೆ ಗುಂಡು ರಾವ್ ಲೇನಿನ ಸ್ವಗ್ರಹದಲ್ಲಿ ನಿಧನರಾದರು ಇವರಿಗೆ 85ವರ್ಷ ಇವರು ಕಳೆದ 70ವರ್ಷಗಳಿಂದ ಆವೇ ಮಣ್ಣಿನಿಂದ ಗಣಪತಿ ವಿಗ್ರಹಗಳನ್ನು ತಯಾರಿಸಿ ಡಾಕ್ಟರ್ ರಾಜ್ ಕುಮಾರ್ ಪ್ರಶಸ್ತಿ, ವೀರೇಂದ್ರ ಹೆಗ್ಡೆ ಅವರಿಂದ ಪ್ರಶಸ್ತಿ, ಪೇಜಾವರ ಸ್ವಾಮೀಜಿ ಇವರಿಂದ ಪ್ರಶಸ್ತಿ ಹಾಗೂ ಸನ್ಮಾನಗಳಿಸಿರುವರು. ಉತ್ತಮ ಕಲಾವಿದರಾದ ಇವರು ಸುಮಾರು 70
ಉಡುಪಿ: ಉಡುಪಿ ತಾಲೂಕು ಕಚೇರಿಯಲ್ಲಿ ಉಪತಹಸೀಲ್ದಾರ್ ಅಶ್ವಥ್ ಪಡುಬಿದ್ರಿ(41) ಅಲ್ಪಕಾಲದ ಅಸೌಖ್ಯದಿಂದ ಇಂದು ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ನಿಧನರಾದರು. ಇವರು ಕುಂದಾಪುರ, ಶೃಂಗೇರಿ, ಉಡುಪಿ ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದರು. ಅವಿವಾಹಿತರಾಗಿರುವ ಇವರು, ಇಬ್ಬರು ಸಹೋದರಿ, ತಾಯಿ, ಅಜ್ಜಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಮೂಡುಬಿದಿರೆ : ಪುತ್ತಿಗೆ ಗ್ರಾಮದ ಹಿರಿಯ ಅರ್ಚಕ, ಶತಾಯುಷಿ ಅಡಿಗಳ್ ಶ್ರೀನಿವಾಸ ಭಟ್ (100) ಅಲ್ಪಕಾಲದ ಅಸೌಖ್ಯದಿಂದ ಬುಧವಾರ ಸ್ವಗೃಹದಲ್ಲಿ ನಿಧನರಾದರು. ಅವರಿಗೆ ಮೂವರು ಪುತ್ರರು, ಮೂವರು ಪುತ್ರಿಯರು ಇದ್ದಾರೆ.ಪುತ್ತಿಗೆ ಮಹತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಸುಮಾರು 65 ವರ್ಷಗಳ ಕಾಲ ಸೋಮನಾಥೇಶ್ವರ ಹಾಗೂ ಸಪರಿವಾರ ದೇವರುಗಳ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸಿ ಜನಾನುರಾಗಿಯಾಗಿದ್ದರು.
ಕಾರ್ಕಳ : ಟಿಪ್ಪರ್ ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಕಾರ್ಕಳ ನಗರ ಠಾಣೆ ವ್ಯಾಪ್ತಿ ಪುಲ್ಕೇರಿ ಎಂಬಲ್ಲಿ ನಡೆದಿದೆ.ಮೃತ ಕಾರ್ಕಳ ತಾಲೂಕು ಸಾಣೂರು ಗ್ರಾಮದ ಹಲಕ್ಕೀಕೆರೆ ನಿವಾಸಿ ಕತ್ತರಿ ಸಾಣೆ ಇಮ್ತಿಯಾಜ್ ರವರ ಪುತ್ರ ನಿಜಾಮ್ (22)ಎಂದು ಗುರುತಿಸಲಾಗಿದೆ.ಕಾರ್ಕಳ ಸಾಣೂರು ನಿಂದ ತನ್ನ ಕೆಲಸಕ್ಕೆಂದು ಬೆಳಗ್ಗೆ 10.30ರ ಸುಮಾರಿಗೆ ಕಾರ್ಕಳ ಕಡೆಗೆ ಹೋಗುತ್ತಿದ್ದಾಗ ಪುಲ್ಕೇರಿಯ ಬಳಿ ಮುಂದಿನಿಂದ ಹೋಗುತ್ತಿದ್ದ ರಿಕ್ಷಾವನ್ನು ಓವರ್ಟೇಕ್
ಸ್ನಾನಗೃಹದಲ್ಲಿ ಗ್ಯಾಸ್ ಗೀಸರ್ ಕೆಮಿಕಲ್ ಸ್ಪ್ರೆಡ್ ಆಗಿ ಸ್ನಾನಗೃಹದಲ್ಲಿ ಯುವಕನೋರ್ವ ಉಸಿರುಗಟ್ಟಿ ಮೃತಪಟ್ಟ ಘಟನೆ ಭಾನುವಾರ ರಾತ್ರಿ ಕೋಟೆಬಾಗಿಲಿನಲ್ಲಿ ಸಂಭವಿಸಿದೆ.ಕೋಟೆಬಾಗಿಲಿನ ಪ್ಲಾಟ್ ಒಂದರಲ್ಲಿ ವಾಸವಾಗಿರುವ ದಿ.ಅನ್ಸಾರ್ ಎಂಬವರ ಪುತ್ರ ಶಾರಿಕ್ ( 18) ಎಂಬವನೇ ಮೃತಪಟ್ಟ ಯುವಕ.ಪ್ಲಾಟ್ ನಲ್ಲಿ ಶಾರಿಕ್ ಮತ್ತು ಆತನ ತಾಯಿ ವಾಸವಾಗಿದ್ದರು.ರಾತ್ರಿ ಶಾರಿಕ್ ಸ್ನಾನಕ್ಕೆಂದು ಹೋಗಿದ್ದ.ಆತ ಸ್ನಾನ ಮುಗಿಸಿಕೊಂಡು ಬರುವಾಗ ಯಾವತ್ತೂ ತಡವಾಗುತ್ತಿತ್ತೆಂದು ಆತನ
ಮೂಡುಬಿದಿರೆಯ ಸಮಾಜ ಮಂದಿರ ಸಭಾದಲ್ಲಿ ವಾಚ್ ಮೆನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸುಕುಮಾರ್ ಹೆಗ್ಡೆ (56 ವ) ಅವರು ಬಿಪಿ ಹೈ ಆಗಿ ಸೋಮವಾರ ಬೆಳಿಗ್ಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಕೊಕ್ರಾಡಿಯ ನಿವಾಸಿ ಸುಕುಮಾರ್ ಹೆಗ್ಡೆ ಅವರು ಕಳೆದ 5 ವರ್ಷಗಳಿಂದ ಸಮಾಜ ಮಂದಿರದಲ್ಲಿ ವಾಚ್ ಮೆನ್ ಆಗಿ ರಾತ್ರಿ ವೇಳೆ ಕರ್ತವ್ಯ ನಿರ್ವಹಿಸುತ್ತಿದ್ದು, ಹಗಲಿನಲ್ಲಿ ಬೇರೆ ಕಡೆಗೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಅವರಿಗೆ ಉಳಿದುಕೊಳ್ಳಲು ಸಮಾಜ ಮಂದಿರದ ವತಿಯಿಂದಲೇ
ಬಂಟ್ವಾಳ : ಯುವಕನೋರ್ವ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಾಣಿ ಸಮೀಪದ ಬುಡೋಳಿ ಮಡಲ ಎಂಬಲ್ಲಿ ನಡೆದಿದೆ. ಬುಡೋಳಿ ಮಡಲ ನಿವಾಸಿ ಸುಶಾಂತ್ (25) ಮೃತ ಯುವಕ. ಸುಶಾಂತ್ ಮಿನಿ ಬಸ್ ಖರೀದಿಸಿ ಸ್ವಂತ ವಾಹನದಲ್ಲಿ ಚಾಲಕನಾಗಿ ದುಡಿಯುತ್ತಿದ್ದ. ಸಾಮಾಜಿಕವಾಗಿ ಸೇವಾಕಾರ್ಯಗಳನ್ನು ಸಂಘಟನೆಯ ಜೊತೆಗೆ ಮಾಡಿಕೊಂಡಿದ್ದು, ಉತ್ತಮ ಯುವಕನಾಗಿ ಗುರುತಿಸಿಕೊಂಡಿದ್ದ. ವಿಟ್ಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆಗೆ
ವೈಯಕ್ತಿಕ ಸಮಸ್ಯೆಯಿಂದ ಮನನೊಂದ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಪೆರ್ಡೂರಿನಲ್ಲಿ ಸಂಭವಿಸಿದೆ. ಮೃತರನ್ನು ಪೆರ್ಡೂರು ಗ್ರಾಮದ ಶೋಭಾ ಎಂಬವರ ಮಗಳು ನಯನ(17) ಎಂದು ಗುರುತಿಸಲಾಗಿದೆ. ಪೆರ್ಡೂರು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ಇವರು, ತನ್ನ ವೈಯುಕ್ತಿಕ ಅಥವಾ ಇನ್ನಾವುದೋ ಕಾರಣದಿಂದ ಮಾನಸಿಕವಾಗಿ ನೊಂದು ಜೀವನದಲ್ಲಿ ಜಿಗುಪ್ಪೆ ಗೊಂಡು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು
ಪುತ್ತೂರು: ಸರ್ವೆ ಗೌರಿ ಹೊಳೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದ್ದ ಕುದ್ಮಾರು ಗ್ರಾಮದ ತೆಕ್ಕಿತ್ತಡಿ ನಿವಾಸಿ ಸನ್ಮಿತ್ (21) ಮೃತದೇಹ ಪತ್ತೆಯಾಗಿದೆ.ಸರ್ವೆಯ ಗೌರಿ ಹೊಳೆಯ ಸೇತುವೆಯ ಬಳಿ ಮೃತದೇಹ ಪತ್ತೆಯಾಗಿದೆ. ಜು.19ರ ರಾತ್ರಿಯಿಂದ ಸನ್ಮಿತ್ ಕಾಣೆಯಾಗಿದ್ದು, ಆತನ ಸ್ಕೂಟರ್ ಮತ್ತಿತರ ವಸ್ತು ಸರ್ವೆ ಗೌರಿ ಹೊಳೆಯ ಸಮೀಪ ಪತ್ತೆಯಾಗಿತ್ತು. ಮೃತ ಸನ್ಮಿತ್ ತಂದೆ ಚಂದ್ರಗೌಡ ನೀಡಿದ ದೂರಿನಂತೆ ನಿನ್ನೆ ಬೆಳಿಗ್ಗಿನಿಂದಲೇ ಪೊಲೀಸರು ಮತ್ತು