Home Posts tagged #managaluru (Page 2)

ವಿನಾಯಕ ಬಾಳಿಗಾ ಕೊಲೆ ಪ್ರಕರಣ ಸದನದಲ್ಲಿ ಪ್ರತಿಧ್ವನಿಸಲಿದೆ: ಡಿಕೆಶಿ ಭರವಸೆ

ಆರ್‌ಟಿಐ ಕಾರ್ಯಕರ್ತ ವಿನಾಯ ಬಾಳಿಗರವರ ಅಮಾನುಷ ಹತ್ಯೆ ನಡೆದು ಇಂದಿಗೆ 5 ವರುಷಗಳೇ ಸಂದರೂ ನೈಜ ಕೊಲೆ ಆರೋಪಿಗಳಿಗೆ ಇನ್ನೂ ಕೂಡ ಶಿಕ್ಷೆಯಾಗದಿರುವ ಹಿನ್ನೆಲೆಯಲ್ಲಿ ದುಃಖ ತೃಪ್ತ ಬಾಳಿಗಾ ಕುಟುಂಬ ಸದಸ್ಯರು ಮತ್ತು ಜಸ್ಟೀಸ್ ಫಾರ್ ವಿನಾಯಕ ಬಾಳಿಗ ಫೋರಂ, ಕಾನೂನು ಹೋರಾಟಗಾರರು ಸೇರಿಕೊಂಡು ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್ ಅವರಲ್ಲಿ ತಮ್ಮ ಸಂಕಟವನ್ನು

ಮಂಗಳೂರಿನಲ್ಲಿ ಕಾಂಗ್ರೆಸ್‌ನಿಂದ ಬೆಲೆ ಏರಿಕೆ ವಿರುದ್ಧ ಸೈಕಲ್ ರ್‍ಯಾಲಿ ಮತ್ತು ಪಾದಯಾತ್ರೆ

ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಬೆಲೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರುದ್ಧ ಸೈಕಲ್ ರ್‍ಯಾಲಿ ಮತ್ತು ಪಾದಯಾತ್ರೆಯನ್ನು ಹಮ್ಮಿಕೊಂಡರು. ಮಲ್ಲಿಕಟ್ಟೆಯ ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಪಿವಿಎಸ್ ಸರ್ಕಲ್ ಮುಖಾಂತರ ಮಂಗಳೂರು ಪಾಲಿಕೆ ಕಚೇರಿ ವರೆಗೆ ಸೈಕಲ್ ರ್‍ಯಾಲಿ ಮತ್ತು ಪಾದಯಾತ್ರೆ ನಡೆಯಿತು. ರ್‍ಯಾಲಿಯಲ್ಲಿ ಕಾಂಗ್ರೆಸ್ ಮುಖಂಡರಾದ ಮಿಥುನ್ ರೈ, ವಿಶ್ವಾಸ್‌ದಾಸ್ ಕುಮಾರ್, ಎಸಿ ವಿನಯರಾಜ್, ಟಿ.ಕೆ ಸುಧೀರ್ ಸೇರಿದಂತೆ ಮತ್ತಿತ್ತರ

ಮಂಗಳೂರಿನಲ್ಲಿ ಬೆಲೆ ಏರಿಕೆ ವಿರುದ್ಧ ಸಿಪಿಐಎಂ ಪ್ರತಿಭಟನೆ

ಅಚ್ಚೇದಿನ್ ಹೆಸರಿನಲ್ಲಿ ದೇಶವನ್ನೇ ಸರ್ವನಾಶಗೊಳಿಸಿದ ನರೇಂದ್ರ ಮೋದಿ ಸರಕಾರ. ಅಚ್ಚೇದಿನ್ ತರುವುದಾಗಿ, ಬೆಲೆಯೇರಿಕೆಯನ್ನು ನಿಯಂತ್ರಿಸುವುದಾಗಿ, ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವುದಾಗಿ ಬೊಗಳೆ ಬಿಟ್ಟು, ದೇಶದ ಜನತೆಗೆ ಮಂಕುಬೂದಿ ಎರಚಿ, ಕಳೆದ 7 ವರ್ಷಗಳ ಅವಧಿಯಲ್ಲಿ ದೇಶದ ಆರ್ಥಿಕತೆಯನ್ನು ದಿವಾಳಿನಂಚಿಗೆ ಕೊಂಡೊಯ್ದು, ಜನರ ಬದುಕನ್ನೇ ಸರ್ವನಾಶ ಮಾಡಿದ ನರೇಂದ್ರ ಮೋದಿ ನೇತ್ರತ್ವದ ಕೇಂದ್ರ ಸರಕಾರದ ವಿರುದ್ಧ ಪ್ರಬಲ ಜನಚಳುವಳಿ ಬೆಳೆದು ಬರುವ ಮೂಲಕ

ಮಂಗಳೂರಿನಲ್ಲಿ ಅನ್‌ಲಾಕ್ ಬಳಿಕ ಟ್ರಾಫಿಕ್ ಜಾಮ್

ಮಂಗಳೂರು ನಗರದಲ್ಲಿ ಲಾಕ್‌ಡೌನ್ ಸಂದರ್ಭ ರಸ್ತೆಯ ದುರಸ್ತಿ ಕಾರ್ಯ ಮಾಡಲು ಸಾಕಷ್ಟು ಸಮಯಾವಕಾಶ ಇದ್ದರೂ, ಇದೀಗ ಅನ್‌ಲಾಕ್ ಆದ ಬಳಿಕ ಹೆದ್ದಾರಿ ಇಲಾಖೆ  ಕೂಳೂರು ಬಳಿ ಇಂಟರ್ ಲಾಕ್ ಕಾಮಗಾರಿಯನ್ನು ನಡೆಸುತ್ತಿದ್ದು, ಟ್ರಾಫಿಕ್ ಜಾಮ್‌ಗೆ ಪ್ರತ್ಯಕ್ಷ ಕಾರಣವಾಯಿತು. ಮಳೆ ನೀರು ನಿಂತು ಸೇತುವೆ ದಕ್ಷಿಣ ಭಾಗದಲ್ಲಿ ರಸ್ತೆ ಸಂಪೂರ್ಣ ಹಾಳಾಗಿದ್ದು, ಇಂದಯ ಇಂಟರ್‌ಲಾಕ್ ಕಾಮಗಾರಿ ನಡೆಸುವ ಉದ್ದೇಶದಿಂದ ಸೇತುವೆ ಬಂದ್ ಮಾಡಲಾಯಿತು. ಇದರಿಂದ ಹೊಸ ಸೇತುವೆಯಲ್ಲಿಯೇ

ಪಡುಕೊಣಾಜೆಯಲ್ಲಿ ಚಿರತೆಯಿಂದ ರಕ್ಷಿಸಿಕೊಂಡ ಶ್ವಾನ

ಮೂಡುಬಿದಿರೆ ತಾಲೂಕಿನಲ್ಲಿ ಪಡುಕೊಣಾಜೆಯಲ್ಲಿ ಚಿರತೆಯೊಂದು ಮನೆಯಂಗಳಕ್ಕೆ ಆಗಮಿಸಿ ನಾಯಿಯೊಂದನ್ನು ಹಿಡಿದುಕೊಂಡು ಹೋದ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಪಡುಕೊಣಾಜೆಯ ಸತೀಶ್ ಎಂಬವರ ಮನೆಯ ಬಳಿ ರಾತ್ರಿ ಅಡ್ಡಾಡುತ್ತಿದ್ದ ಚಿರತೆ ಮನೆಯಂಗಳದಲ್ಲಿ ಮಲಗಿದ್ದ ನಾಯಿಯನ್ನು ಎತ್ತಿಕೊಂಡು ಹೋಗಿದೆ. ಸ್ಥಳಕ್ಕೆ ಉಪವಲಯಾರಣ್ಯಾಧಿಕಾರಿ ಮಂಜುನಾಥ ಗಾಣಿಗ ಮತ್ತು ಸಿಬ್ಬಂದಿಗಳು ಭೇಟಿ ನೀಡಿದ್ದಾರೆ. ಶಿರ್ತಾಡಿ ಗ್ರಾ. ಪಂಚಾಯತ್ ಅಧ್ಯಕ್ಷ ಸಂತೋಷ್ ಕೋಟ್ಯಾನ್ ಜತೆ ಮಾತುಕತೆ

ಬೆಲೆ ಏರಿಕೆಯ ಬಗ್ಗೆ ನೈಜ ಕಾರಣ ಜನತೆಗೆ ತಿಳಿಸಲಿ: ಮಾಜಿ ಸಚಿವ ಯು.ಟಿ. ಖಾದರ್ 

ಪೆಟ್ರೋಲ್ ,ಡೀಸೆಲ್ ಬೆಲೆ ಏರಿಕೆಯ ಬಗ್ಗೆ ನೈಜ ಕಾರಣವನ್ನು ಜನತೆಗೆ ತಿಳಿಸಲು ಬಿಜೆಪಿ ನೇತ್ರತ್ವದ ಕೇಂದ್ರ ಸರಕಾರ ಶ್ವೇತ ಪತ್ರ ಹೊರಡಿಸಲಿ.ಬೆಲೆ ನಿಯಂತ್ರಣಕ್ಕೆ ತಕ್ಷಣ ಸರ್ಕಾರ ಸೂಕ್ತ ಕ್ರಮಕ್ಕೆ ಮುಂದಾಗಲಿ ಎಂದು ಮಂಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕ ಮತ್ತು ಮಾಜಿ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.ಅವರು ಮಂಗಳೂರಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ ಇಂಧನದ ಬೆಲೆ ಏರಿಕೆಯ ಹಿಂದಿನ ಯುಪಿಎ ಸರಕಾರ ಪೆಟ್ರೋಲ್ ಕಂಪೆನಿಗಳಿಗೆ

ಮಂಗಳೂರು: ಗುದನಾಳದಲ್ಲಿ ಅಕ್ರಮ ಚಿನ್ನ ಸಾಗಾಟ: ಕಾಸರಗೋಡಿನ ವ್ಯಕ್ತಿ ವಶಕ್ಕೆ

ಮಂಗಳೂರಿನ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದುಬೈನಿಂದ ಆಗಮಿಸಿದ ಪ್ರಯಾಣಿಕನಿಂದ ಅಕ್ರಮವಾಗಿ ಸಾಗಿಸುತ್ತಿದ್ದ 20.89 ಲಕ್ಷ ಮೌಲ್ಯದ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ.ದುಬೈನಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ಕಾಸರಗೋಡು ಮೂಲದ ಪ್ರಯಾಣಿಕನಿಂದ ಈ ಚಿನ್ನವನ್ನು ಪತ್ತೆ ಹಚ್ಚಲಾಗಿದೆ. ತಪಾಸಣೆ ವೇಳೆ ಆರೋಪಿಯು 430ಗ್ರಾಂ ತೂಕದ ಚಿನ್ನವನ್ನು ಪೌಡರ್ ಮಾಡಿ ಗಮ್‌ನೊಂದಿಗೆ ಮಿಕ್ಸ್ ಮಾಡಿ

ಜನದಟ್ಟಣೆ ನಿಯಂತ್ರಿಸಲು ಗಿಲ್ಬರ್ಟ್ ಡಿಸೋಜಾರವರ ಸರಳ ಸೂತ್ರ….!

ಜನದಟ್ಟಣೆ ನಿಯಂತ್ರಣ ಹಾಗೂ ಕೊರೋನಾ ಹರಡುವಿಕೆಯನ್ನು ತಡೆಯುವಲ್ಲಿ ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು ಅತೀ ಮುಖ್ಯವಾಗಿದ್ದು, ಅದನ್ನು ಸರಳ ಸೂತ್ರ ಅನುಸರಿಸುವ ಮೂಲಕ ಪಾಲಿಸಬಹುದು ಎಂಬ ಸರಳ ಸೂತ್ರವೊಂದನ್ನು ಸಾಮಾಜಿಕ ಕಾರ್ಯಕರ್ತ ಗಿಲ್ಬರ್ಟ್ ಡಿಸೋಜಾ ನೇತೃತ್ವದ ತಂಡ ಪ್ರಸ್ತಾಪಿಸಿದೆ. ಕಳೆದ ವರ್ಷ ಹಂಪನಕಟ್ಟೆ, ಕಂಕನಾಡಿ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿನ ಗುಂಡಿಗಳನ್ನು ತಮ್ಮ ಸ್ವಂತ ಖರ್ಚಿನಲ್ಲಿ ಮುಚ್ಚುವ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದ್ದ

ಪತ್ರಿಕಾ ದಿನಾಚರಣೆ : ಮ್ಯೋಗ್ಲಿಂಗ್ ಸ್ಮರಣೆ

ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಹಾಗೂ ಕರ್ನಾಟಕ ತಿಯೋಲಾಜಿಕಲ್ ಕಾಲೇಜಿನ ವತಿಯಿಂದ ಪತ್ರಿಕಾ ದಿನಾಚರಣೆ ಆಚರಿಸಲಾಯಿತು. ಕನ್ನಡ ಪತ್ರಿಕೋದ್ಯಮದ ಮೂಲಪುರುಷ “ಮಂಗಳೂರ ಸಮಾಚಾರ “ಪತ್ರಿಕೆಯ ಸಂಸ್ಥಾಪಕ ಸಂಪಾದಕ ಹೆರ್ಮನ್ ಫ್ರೆಡ್ರಿಕ್ ಮ್ಯೋಗ್ಲಿಂಗ್‌ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಪತ್ರಿಕಾ ದಿನಾಚರಣೆ ಹಾಗೂ ಮ್ಯೋಗ್ಲಿಂಗ್ ಅವರಿಗೆ ಗೌರವ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್

ದ.ಕ. ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷರುಗಳ ಪದಗ್ರಹಣ

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗದ ನೂತನವಾಗಿ ಆಯ್ಕೆಯಾದ ಬ್ಲಾಕ್ ಅಧ್ಯಕ್ಷರುಗಳಾಗಿ ನೇಮಕರಾದ 15 ಅಧ್ಯಕ್ಷರುಗಳ ಪದಗ್ರಹಣ ಕಾರ್ಯಕ್ರಮ ಜಿಲ್ಲಾ ಕಾಂಗ್ರೆಸ್ ಸಭಾಂಗಣದಲ್ಲಿ ಜಿಲ್ಲಾ ಕಾರ್ಮಿಕ ಘಟಕಗಳ ಅಧ್ಯಕ್ಷರಾದ ಲಾರೆನ್ಸ್ ಡಿಸೋಜ ರವರ ನೇತೃತ್ವದಲ್ಲಿ ಜರುಗಿತು ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ರಮಾನಾಥ್ ರೈ ಮಾತನಾಡಿ, ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಸಂಘಟನೆಗಳು ಪಕ್ಷದ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಈ