ಕ್ರೀಡೆ ಮನುಷ್ಯನ ಸರ್ವತೋಮುಖ ಅಭಿವೃದ್ಧಿಯಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ. ಸ್ಪರ್ಧಾತ್ಮಕ ಮನೋಭಾವ, ನಾಯಕತ್ವದ ಗುಣ, ಹೊಂದಾಣಿಕೆ, ಒಂದು ತಂಡವಾಗಿ ದುಡಿಯುವುದು ಇವೇ ಮೊದಲಾದ ಗುಣಗಳನ್ನು ಬಾಲ್ಯದಲ್ಲೇ ಕ್ರೀಡಾ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಬೆಳೆಸಬಲ್ಲದು. ಅಲ್ಲದೆ ಆರೋಗ್ಯದ ಸ್ಥಿರತೆ ಹಾಗೂ ಏಕಾಗ್ರತೆ ವೃದ್ಧಿಗೂ ಕ್ರೀಡೆ ಪರಿಣಾಮಕಾರಿಯಾಗಬಲ್ಲದು
ನಿಟ್ಟೆ ವಿದ್ಯಾಸಂಸ್ಥೆಯ ಅಂಗಸಂಸ್ಥೆಯಾಗಿರುವ ಮಂಗಳೂರಿನ ಡಾ| ಎನ್‍ಎಸ್‍ಎಎಂ ಪದವಿಪೂರ್ವ ಕಾಲೇಜಿನಲ್ಲಿ ಈ ಶೈಕ್ಷಣಿಕ ವರ್ಷದಿಂದ ಇಂಟಿಗ್ರೇಟೆಡ್ ಪಿಯು ತರಗತಿಗಳನ್ನು ಪ್ರಾರಂಭಿಸಲಾಗುತ್ತದೆ. ನಿಟ್ಟೆ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಎನ್. ವಿನಯ ಹೆಗ್ಡೆಯವರ ಅಭಿಪ್ರಾಯದಂತೆ, ಸ್ಪರ್ಧಾತ್ಮಕ ಪರೀಕ್ಷೆಗಳಾದ ನೀಟ್ / ಜೆಇಇ ಮತ್ತು ಸಿಇಟಿ ಯಲ್ಲಿ ವಿದ್ಯಾರ್ಥಿಗಳ ಉತ್ತಮ ಸಾಧನೆ ಅವರ ಭವಿಷ್ಯವನ್ನು ರೂಪಿಸಲು ಸಹಾಯ ಮಾಡುವುದರಿಂದ ಕೋಚಿಂಗ್ ತಜ್ಞರ ಮತ್ತು ಪ್ರತಿಷ್ಠಿತ,