ತೋಕೂರು: ಫೇಮಸ್ ಯೂತ್ ಕ್ಲಬ್ (ರಿ) 10ನೇ ತೋಕೂರು ಹಳೆಯಂಗಡಿ ಇದರ ವಾರ್ಷಿಕ ಮಹಾಸಭೆಯನ್ನು ಸಂಸ್ಥೆಯ ಕಾರ್ಯಾಲಯದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಸಂಪತ್ ಜೆ. ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನೆರವೇರಿಸಲಾಯಿತು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶ್ರೀ ಮೋಹನ್ ದಾಸ್ ದೇವಾಡಿಗರವರು ವಾರ್ಷಿಕ ಆಯವ್ಯಯದ ಮಂಡನೆಯನ್ನು ಮಂಡಿಸಿ ಅನುಮೋದನೆಯನ್ನು ಪಡೆದುಕೊಂಡರು,ಸಂಸ್ಥೆಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.ಗೌರವಾಧ್ಯಕ್ಷರಾಗಿ ಶ್ರೀ ಗುರುರಾಜ್ ಎಸ್ ಪೂಜಾರಿ ಅವರನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಶ್ರೀ ಸುರೇಶ್ ಬಿ ದೇವಾಡಿಗ, ಉಪಾಧ್ಯಕ್ಷರಾಗಿ ಶ್ರೀ ಮಹಮ್ಮದ್ ಶರೀಫ್, ಕಾರ್ಯದರ್ಶಿ ಶ್ರೀ ವಿಶ್ವಜಿತ್ ಆಚಾರ್ಯ, ಜೊತೆ ಕಾರ್ಯದರ್ಶಿಯಾಗಿ ಶ್ರೀ ಮೋಹನ್ ದಾಸ್ ದೇವಾಡಿಗ, ಕೋಶಾಧಿಕಾರಿ ಶ್ರೀ ನವೀನ್ ಚಂದ್ರ ಅಮೀನ್, ಕ್ರೀಡಾ ಕಾರ್ಯದರ್ಶಿಯಾಗಿ ಶ್ರೀ ಬಶೀರ್ ಕಲ್ಲಾಪು, ಕ್ರೀಡಾ ಜೊತೆ ಕಾರ್ಯದರ್ಶಿಗಳಾಗಿ ಶ್ರೀ ಸಂದೇಶ್ ಆಚಾರ್ಯ ಮತ್ತು ಶ್ರೀ ಆಕಾಶ್
ಸಂಘಟನಾ ಕಾರ್ಯದರ್ಶಿಗಳಾಗಿ ಶ್ರೀ ಭೋಜ ಕೋಟ್ಯಾನ್, ಪ್ರಮೋದ್ ದೇವಾಡಿಗ ಮತ್ತು ಶಂಕರ್ ಆಚಾರ್ಯ ರವರನ್ನು ಆಯ್ಕೆ ಮಾಡಲಾಯಿತು.
ವಾರ್ಷಿಕ ಮಹಾಸಭೆಯಲ್ಲಿ ಸಂಸ್ಥೆಯ ಗೌರವಾಧ್ಯಕ್ಷರಾದ ಶ್ರೀ ಗುರುರಾಜ್ ಎಸ್ ಪೂಜಾರಿ ಅಧ್ಯಕ್ಷರಾದ ಶ್ರೀ ಸಂಪತ್ ಜೆ ಶೆಟ್ಟಿ ಕಾರ್ಯದರ್ಶಿ ಶ್ರೀ ಮೋಹನ್ ದಾಸ್ ದೇವಾಡಿಗ ಕೋಶಾಧಿಕಾರಿ ಶ್ರೀ ನವೀನ್ ಚಂದ್ರ ಅಮೀನ್ ಮತ್ತು ಫೇಮಸ್ ಯೂತ್ ಕ್ಲಬ್ ಮಹಿಳಾ ಮಂಡಲದ ಅಧ್ಯಕ್ಷರಾದ ಶ್ರೀಮತಿ ಪ್ರೇಮಲತಾ ಯೋಗಿಶ್ ರವರು ಉಪಸ್ಥಿತರಿದ್ದರು.

