ಅಲ್ಲೊಂದು ಸುಂದರ ಫ್ಯಾಷನ್ ಜಗತ್ತು ಅನಾವರಣಗೊಂಡಿತು. ಇನ್ನು ಕಲರ್ ಕಲರ್ ಬಟ್ಟೆಗಳಿಂದ ಯುವಕ-ಯುವತಿಯರಿಂದ ರ್‍ಯಾಂಪ್ ವಾಕ್ ಕೂಡ ಎಲ್ಲರ್ ಗಮನ ಸೆಳೆಯಿತು. ಎನ್‌ಬಿ ಗ್ರೂಫ್ ಅರ್ಪಿಸುವ ಅಸ್ತ್ರ ಮಿಸ್ಟರ್, ಮಿಸ್, ಮಿಸ್ ಟೀನ್, ಮಿಸೆಸ್ ತುಳುನಾಡು ಸೀಸನ್ – 4ರ ಗ್ರ್ಯಾಂಡ್ ಫಿನಾಲೆ ಮಂಗಳೂರಿನ ಉಚ್ಚಿಲದ ಕಿಯಾಂಜಾ ಗಾರ್ಡನ್ ನ ವೇದಿಕೆಯಲ್ಲಿ ಸಂಭ್ರಮದಿಂದ
ಮಂಗಳೂರು: ನಾಗರಾಧನೆ, ದೈವಾರಾಧನೆ, ದೇವತಾರಾಧನೆಯ ಮುಖೇನ ಪ್ರಕೃತಿಯನ್ನು ಆರಾಧಿಸುವ ಪುಣ್ಯ ನೆಲ ತುಳುನಾಡು. ಈ ನೆಲದಲ್ಲಿ 12 ತಿಂಗಳಿಗೂ ಮಹತ್ವವಿದೆ, ವಿಶೇಷ ಆಚರಣೆ ಇದೆ. ಆಟಿ ತಿಂಗಳು ಅದರಲ್ಲೂ ಆಟಿ ಅಮಾವಾಸ್ಯೆಯ ದಿವಸ ಸಮಸ್ತ ತುಳುನಾಡಿನ ಜನರು ಜಾತಿ ಮತ ಭೇದವಿಲ್ಲದೆ, ಈ ಔಷಧೀಯ ಗುಣವುಳ್ಳ ಹಾಳೆ ಮರದ ಕೆತ್ತೆ ಕಷಾಯವನ್ನು ವರ್ಷ ಪೂರ್ತಿ ತನ್ನ ರೋಗ ನಿರೋಧಕ ಶಕ್ತಿಯ ವೃದ್ಧಿಗಾಗಿ ಸೇವಿಸುತ್ತಾರೆ. ಆದ್ದರಿಂದ ತುಳುನಾಡು ವಿಶೇಷ ಪರಂಪರೆಗಳ ನಾಡು ಈ ಹಾಳೆ ಮರದ
ಕರ್ನಾಟಕ ವಿಧಾನಸಭೆಯಲ್ಲಿ ತುಳು ಭಾಷೆಯನ್ನು ಮಾತನಾಡಲು ಅವಕಾಶ ಮಾಡಿಕೊಟ್ಟಿರುವ ಹಿನ್ನೆಲೆಯಲ್ಲಿ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ತಾರಾನಾಥ್ ಗಟ್ಟಿ ಕಾಪಿಕಾಡ್ ಅವರು ಮಂಗಳೂರಲ್ಲಿ ಸನ್ಮಾನಿಸಿದರು. ಖಾದರ್ ಅವರಿಗೆ ಸಾಲು ಹಾಗೂ ಪುಸ್ತಕ ಮತ್ತು ಸ್ಮರಣಿಕೆ ನೀಡಿ, ಅಭಿನಂದಿಸಿದರು. ಈ ವೇಳೆ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾದ ರೋಹಿತ್ ಉಳ್ಳಾಲ್ ಉಪಸ್ಥಿತರಿದ್ದರು.
ನವೆಂಬರ್ ತಿಂಗಳನ್ನು ರಾಜ್ಯೋತ್ಸವ ಆಚರಣೆಯ ತಿಂಗಳು ಎಂದೇ ತಿಳಿಯಲಾಗಿದೆ. ಹುಟ್ಟಿದ ದಿನ ನವೆಂಬರ್ ಒಂದು ಆದರೂ ಇಡೀ ತಿಂಗಳು ಏನು ಆಚರಣೆ ಎಂಬುದನ್ನೆಲ್ಲ ಕೇಳಬಹುದು. ಉತ್ತರಿಸುವವರು ಯಾರೂ ಇರುವುದಿಲ್ಲ. ನಿಂದನೆ ಬೇಕಾದರೆ ಸಿಗಬಹುದು. ಆದರೆ ಇಲ್ಲಿ ಕನ್ನಡ ಹೇಗಿದೆ? ನವೆಂಬರ್ ಒಂದು ಕನ್ನಡ ನಾಡು ಹುಟ್ಟಿದ ದಿನ ಸಂತೋಷ. ಆದರೆ ಅಂದು ತುಳುನಾಡು, ಕೊಡವನಾಡು ಸತ್ತ ದಿನ ಎನ್ನುವುದೂ ಅಷ್ಟೇ ಸತ್ಯ. ಕೊಡಗು ಪ್ರತ್ಯೇಕ ರಾಜ್ಯವಾಗಿತ್ತು. ಚೆಪ್ಪುಡಿರ ಮುತ್ತಣ ಪೂಣಚ್ಚ
ಬ್ರಹ್ಮಾವರ : ಕಮಾಂಡರ್ ಸ್ಪೋರ್ಡ್ಸ್ ಮತ್ತು ಆರ್ಟ್ ಕ್ಲಬ್ ಉಗ್ಗೇಲ್ ಬೆಟ್ಟು ಮತ್ತು ಸಹೋದರ ಸಂಘಟನೆಗಳ ವತಿಯಿಂದ ಕೆಸರ್ಡ್ ಕುಸಲ್ ಎಂಬ ಕಾರ್ಯಕ್ರಮವವು ಉಗ್ಗೆಲ್ ಬೆಟ್ಟು ಗರಡಿಬಳಿಯ ಗದ್ದೆಯಲ್ಲಿ ಜರುಗಿತು. ಉಡುಪಿ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯೆ ಗೀತಾಂಜಲಿ ಸುವರ್ಣ ಸಾಂಪ್ರದಾಯಕವಾಗಿ ಕಳಸೆಗೆÀ ಭತ್ತವನ್ನು ಸುರಿದು ಹಣತೆ ದೀಪ ಹಚ್ಚಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮುಂದಿನ ಜನಾಂಗದ ಮಕ್ಕಳಿಗೆ ಮಣ್ಣು, ಕೃಷಿ ಇದನ್ನು ಪರಿಚಯಿಸಲು ಇಂತಹ
ಬಂಟ್ವಾಳ: ನರಹರಿ ಸದಾಶಿವ ದೇವಾಲಯದಲ್ಲಿ ಇಂದು ಆಟಿ ಅಮವಾಸ್ಯೆ, ತೀರ್ಥ ಸ್ನಾನ ನಡೆಯಿತು. ಪ್ರತಿ ವರ್ಷವೂ ಆಟಿ ತಿಂಗಳಲ್ಲಿ ಬರುವ ಅಮವಾಸ್ಯೆ ದಿನದಂದು ಇಲ್ಲಿನ ತೀರ್ಥ ಸ್ನಾನ ನಡೆಯುತ್ತದೆ. ತೀರ್ಥ ಬಾವಿಯಲ್ಲಿ ತೀರ್ಥ ಸ್ನಾನ ಮಾಡಿದರೆ ಸಕಲ ಇಷ್ಟಾರ್ಥಗಳು ನೆರವೇರುವುದು ಎಂಬ ಪ್ರತೀತಿ ಇದೆ. ಇಂದು ಮುಂಜಾನೆಯಿಂದಲೇ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.
ತುಳುನಾಡಿನ ಐತಿಹಾಸಿಕ ಹಿನ್ನೆಲೆಯಿರುವ 26 ನೇ ವರ್ಷದ ಸುಪ್ರಸಿದ್ಧ ಶಿರ್ವ ನಡಿಬೆಟ್ಟು ಸೂರ್ಯ – ಚಂದ್ರ ಜೋಡುಕರೆ ಕಂಬಳವು ಭಾನುವಾರ ಶಿರ್ವ ನಡಿಬೆಟ್ಟು ಕಂಬಳ ಗದ್ದೆಯಲ್ಲಿ ನೆರವೇರಿತು.ಶಿರ್ವ ನಡಿಬೆಟ್ಟು ಸೂರ್ಯ – ಚಂದ್ರ ಜೋಡುಕರೆ ಸಾಂಪ್ರದಾಯಿಕ ಕಂಬಳೊತ್ಸವವನ್ನು ಎಲ್ಲೂರು ಶ್ರೀ ವಿಶ್ವೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಎಲ್ಲೂರು ಗುತ್ತು ಪ್ರಫುಲ್ಲ ಶೆಟ್ಟಿಯವರು ಉದ್ಘಾಟಿಸಿದರು. ಬೆಳಿಗ್ಗೆ ಸಾಂಪ್ರದಾಯಿಕವಾಗಿ ನಡೆದ ಬಂಟ ಕೋಲದ ಬಳಿಕ