ಮಂಗಳೂರು: ಮಿಸ್ಟರ್, ಮಿಸ್, ಮಿಸ್ಟರ್ ತುಳುನಾಡು-2025 ಸೀಸನ್ 4

ಅಲ್ಲೊಂದು ಸುಂದರ ಫ್ಯಾಷನ್ ಜಗತ್ತು ಅನಾವರಣಗೊಂಡಿತು. ಇನ್ನು ಕಲರ್ ಕಲರ್ ಬಟ್ಟೆಗಳಿಂದ ಯುವಕ-ಯುವತಿಯರಿಂದ ರ್‍ಯಾಂಪ್ ವಾಕ್ ಕೂಡ ಎಲ್ಲರ್ ಗಮನ ಸೆಳೆಯಿತು. ಎನ್‌ಬಿ ಗ್ರೂಫ್ ಅರ್ಪಿಸುವ ಅಸ್ತ್ರ ಮಿಸ್ಟರ್, ಮಿಸ್, ಮಿಸ್ ಟೀನ್, ಮಿಸೆಸ್ ತುಳುನಾಡು ಸೀಸನ್ – 4ರ ಗ್ರ್ಯಾಂಡ್ ಫಿನಾಲೆ ಮಂಗಳೂರಿನ ಉಚ್ಚಿಲದ ಕಿಯಾಂಜಾ ಗಾರ್ಡನ್ ನ ವೇದಿಕೆಯಲ್ಲಿ ಸಂಭ್ರಮದಿಂದ ನಡೆಯಿತು.

ದೇಶಿ ಮತ್ತು ವೆಸ್ಟರ್ನ್ ಕಲ್ಚರ್ ಬಟ್ಟೆಗಳನ್ನು ಧರಿಸಿ, ಯುವಕ – ಯುವತಿಯರ ರ್‍ಯಾಂಪ್ ವಾಕ್ ನೋಡುಗರ ಗಮನ ಸೆಳೆಯಿತು. ಇನ್ನು ಎನ್ ಬಿ ಗ್ರೂಫ್ ಅರ್ಪಿಸುವ ಅಸ್ತ್ರ ಗ್ರೂಪ್ ಮಿಸ್ಟರ್, ಮಿಸ್, ಮಿಸ್ ಟೀನ್, ಮಿಸೆಸ್ ತುಳುನಾಡು ಸೀಸನ್ – 4ರ ಗ್ರ್ಯಾಂಡ್ ಫಿನಾಲೆ ಅದ್ದೂರಿಯಾಗಿ ನಡೆಯಿತು. ಸಾಂಪ್ರದಾಯಿಕ ಉಡುಗೆ – ತೊಡುಗೆ, ಪಾಶ್ಚಾತ್ಯ ಉಡುಗೆ ತೊಡುಗೆ ಹಾಗೂ ಪ್ರಶ್ನೋತ್ತರ ಸುತ್ತು ವಿಭಾಗದಲ್ಲಿ ಸ್ಪರ್ಧೆ ನಡೆಯಿತು.

ಇದರಲ್ಲಿ ಎನ್‌ಬಿ ಗ್ರೂಪ್‌ನ ಅಸ್ತ್ರಾ ಮಿಸ್ಟರ್ ತುಳುನಾಡ್-2025 ಸೀಸನ್ 4ರ ವಿಜೇತರಾಗಿ ಗಗನ್ ದೇವಾಡಿಗ, ಫಸ್ಟ್ ರನ್ನರ್ ಅಪ್ ಅಗಿ ಕಾರ್ತಿಕ್ ಶೆಟ್ಟಿ, ಸೆಕೆಂಡ್ ರನ್ನರ್ ಅಪ್ ಆಗಿ ಸುಶಾಂತ್ ಮಾದ್ರೆ ಹೊಸಹಳ್ಳಿ ಹೊರಹೊಮ್ಮಿದ್ರು,
ಎನ್‌ಬಿ ಗ್ರೂಪ್‌ನ ಅಸ್ತ್ರಾ ಮಿಸ್ ತುಳುನಾಡ್-2025 ಸೀಸನ್ 4ರ ವಿಜೇತರಾಗಿ ರಿತಿಕಾ ಕಿರೀಟವನ್ನು ತನ್ನದಾಗಿಸಿಕೊಂಡರೆ, ಮೊದಲ ರನ್ನರ್ ಅಪ್ ಹರ್ಷಿತಾ, ಎರಡನೇ ರನ್ನರ್ ಅಪ್ ಆಗಿ ಟಿಫಾನಿ ರೆಬೆಲ್ಲೊ ಅವರು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.

ಮಿಸ್ ಟೀನ್ ವಿಭಾಗದಲ್ಲಿ ಧೃತಿ ಕರ್ಕೇರಾ ಅವರು ಕಿರೀಟ ಮುಡಿಗೇರಿಸಿದರು. ಇದರಲ್ಲಿ
ಮೊದಲ ರನ್ನರ್ ಅಪ್ ರೆಬೆಕ್ಕಾ ಮಾರಿಯಾ, ಎರಡನೇ ರನ್ನರ್ ಅಪ್ ಆದಿತಿ ಭಟ್ ಪ್ರಶಸ್ತಿಯನ್ನು ಪಡೆದುಕೊಂಡರು.
ಮಿಸಸ್ ವಿಭಾಗದಲ್ಲಿ ರಾಧಿಕಾ ರಜನಿಕಾಂತ್ ಶೆಟ್ಟಿ ಅವರು ವಿಜೇತರಾದರೆ, ಸುಮನ ಪೈ ಅವರು ಮೊದಲ ರನ್ನರ್ ಅಪ್, ಅಕ್ಷತಾ ಕೋಟ್ಯಾನ್ ಅವರು ಎರಡನೇ ರನ್ನರ್ ಅಪ್ ಆಗಿ ಹೊರಹೊಮ್ಮಿದ್ರು.
ತೀರ್ಪುಗಾರರಾಗಿ ಕ್ರಿಸ್ಟಿನಾ ರೋಸ್ಲಿನ್ ಜಾರ್ಜ್, ಸೂರಜ್ ಸನಿಲ್, ಡಾ ಪ್ರಿಯದರ್ಶಿನಿ ಅವರು ಪಾಲ್ಗೊಂಡಿದ್ದರು.

ಮಿಸ್ಟರ್, ಮಿಸ್ ಟೀನ್, ಮಿಸ್, ಮಿಸಸ್ಸ್ ತುಳುನಾಡ್ ಸೀಸನ್ – 4 ರ ಗ್ರ್ಯಾಂಡ್ ಫಿನಾಲೆ ರೂವಾರಿ ಆಗಿರುವ ನವೀನ್ ಬಿಲ್ಲವ ಸಾರಥ್ಯದಲ್ಲಿ ಸುಂದರವಾಗಿ ಕಾರ್ಯಕ್ರಮ ಮೂಡಿ ಬಂತು. ಕಾರ್ಯಕ್ರಮಕ್ಕೆ ಹಲವಾರು ಮಂದಿ ಗಣ್ಯರು ಭಾಗವಹಿಸಿದ್ದರು.
ಅಸ್ತ್ರಾ ಗ್ರೂಫ್‌ನ ಆಡಳಿತ ನಿರ್ದೇಶಕ ಲಂಚು ಲಾಲ್ ಕೆ.ಎಸ್, ಐಲ್ಯಾಂಡ್ ಬೇ ವ್ಯೂ ಇನ್ ನ ಪ್ರಶಾಂತ್ ಇಮ್ಯಾನುಯೆಲ್, ವಿಕ್ಕಿ ಮೊಬೈಲ್ಸ್ ನ ಆಡಳಿತ ನಿರ್ದೇಶಕರಾದ ವಿಕ್ಕಿ, ಲೇಡಿಹಿಲ್ ನ ಎಸ್ ಎಲ್ ಶೇಟ್ ಡೈಮಂಡ್ಸ್ ಹೌಸ್ ನ ಶರತ್ ಶೇಟ್, ರೈ ಸ್ಪೈಸಸ್‌ನ ನಿರ್ದೇಶಕಿ ದಿವ್ಯಾ ರೈ, ಪ್ರಣಕಿ ಫ್ಯಾಷನ್ ಹೌಸ್ ನ ನವ್ಯಾ ಪ್ರಕಾಶ್, ಎಸ್‌ಕೆ ಸ್ಪೇಸ್ ಶ್ರೀನಿವಾಸ್, ನೃತ್ಯ ಸಂಯೋಜನೆ ಮತ್ತು ಮಾರ್ಗದರ್ಶಕರಾಗಿ ಅನುಷಾ ರಾಜ್, ದಿಶಾ ರಾಣಿ, ಶೆರ್ಲಿನ್ ಸೇರಿದಂತೆ ಮೊದಲಾದವರು ಪಾಲ್ಗೊಂಡಿದ್ದರು. ವಿಜೆ ಡಿಕ್ಷನ್ ಕಾರ್ಯಕ್ರಮ ನಿರೂಪಿಸಿದರು.
ಇನ್ನು ಈ ಕಾರ್ಯಕ್ರಮಕ್ಕೆ ಪ್ರಾಯೋಜಕರಾಗಿ ಅಸ್ತ್ರ ಗ್ರೂಪ್, ಐಲ್ಯಾಂಡ್ ಬೇ ವೀವ್ ಇನ್, ಕಿಯಾಂಜಾ ಗಾರ್ಡನ್, ಹೊಟೇಲ್ ವೈಟ್ ಲೋಟಸ್ ಉಡುಪಿ, ಐಸಿರಿ ಹರ್ಬಲ್ಸ್, ಇಂದ್ರಮಸ್ ಕಿಚನ್, ಪ್ರಾಣಕಿ ಫ್ಯಾಷನ್ ಹೌಸ್, ರೈ ಸ್ಪೈಸಸ್, ಎಸ್.ಕೆ. ಸ್ಪೇಸ್ ಸಹಕರಿಸಿದರು.