Home Posts tagged #v4newa karnataka

ಕಡಬದ್ವಯ ಸಂಸ್ಮರಣಾ ಯಕ್ಷಗಾನ ಪ್ರಶಸ್ತಿ- 2021 : ಹಿರಿಯ ಹಿಮ್ಮೇಳನ ವಾದಕರಾದ ಮೋಹನ್ ಶೆಟ್ಟಿಗಾರ್ ಅವರಿಗೆ ಪ್ರಶಸ್ತಿ

ಕರಾವಳಿಯ ಹೆಮ್ಮೆಯ ಕಲೆಯಾಗಿರುವ ಯಕ್ಷಗಾನ ಕ್ಷೇತ್ರದ ತೆಂಕುತಿಟ್ಟಿನ ಹೆಸರಾಂತ ಹಿಮ್ಮೇಳ ವಾದಕರಾದ ಕಡಬ ನಾರಾಯಣ ಆಚಾರ್ಯರ ಸ್ಮರಣಾರ್ಥ ಕಡಬದ್ವಯ ಸಂಸ್ಮರಣಾ ಯಕ್ಷಗಾನ ಪ್ರಶಸ್ತಿ- 2021ನ್ನು ಮಂಗಳೂರಿನ ಹಿರಿಯ ಹಿಮ್ಮೇಳನ ವಾದಕರಾದ ಮೋಹನ್ ಶೆಟ್ಟಿಗಾರ್ ಮಿಜಾರು ಇವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು ಎಂದು ಕಡಬ ಸ್ಮಾರಕ ಸಮಿತಿಯ ಬೆಳುವಾಯಿ ಸುಂದರ

ಒಂದೇ ಮಳೆಗೆ ಕೂಳೂರು ಹಳೆ ಸೇತುವೆಯಲ್ಲಿ ಟ್ರಾಫಿಕ್ ಜಾಮ್

ಮಂಗಳೂರಿನ ಕೂಳೂರು ಹಳೆ ಸೇತುವೆಯಲ್ಲಿ ಭಾರೀ ಗಾತ್ರದ ಹೊಂಡಗಳಲ್ಲಿ ಮಳೆ ನೀರು ನಿಂತು ವಾಹನ ಚಾಲಕರು ಪರದಾಡುವ ಜತೆಗೆ ಟ್ರಾಫಿಕ್ ಜಾಮ್ ಪರಿಸ್ಥಿತಿ ಉಂಟಾಗಿದೆ. ಮೈಕ್ರೋ ಟೆಕ್ನಾಲಜಿ ಮೂಲಕ ದುರಸ್ತಿ ಮಾಡಲಾದ ಕೂಳೂರು ಹಳೇ ಸೇತುವೆಯ ಇಕ್ಕೆಲಗಳಲ್ಲಿ ಇದೀಗ ಹೊಂಡ ಬೀಳಲಾರಂಭಿಸಿದೆ. ಡಾಮರು ತೇಪೆ ಹಾಕಿ ಒಂದೆರಡು ತಿಂಗಳು ಕಳೆಯುವುದರೊಳಗೆ ಒಂದೇ ಮಳೆಗೆ ಅಲ್ಲಲ್ಲಿ ಹೊಂಡ ಬಿದ್ದಿದ್ದು, ಸೋಮವಾರ ಮಳೆಯ ನಡುವೆ ಹೆದ್ದಾರಿ ಇಲಾಖೆ ತೇಪೆ ಹಾಕಲು ಮುಂದಾಗಿದ್ದು ಲಾಕ್ ಡೌನ್