ಕಾಪು ಲಾಲ್ ಬಹದ್ದೂರ್ ಶಾಸ್ತ್ರಿ ಸ್ಪೋರ್ಟ್ಸ್, ಕಲ್ಚರಲ್ ಕ್ಲಬ್ ಕಾಪು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಪು ಪಡು ಮತ್ತು ದಿ. ಆರ್.ಡಿ. ಮೆಂಡನ್ ಕಾಪು ಸ್ಮರಣಾರ್ಥ ಜನ್ಮ ಶತಮಾನೋತ್ಸವ ಆಚರಣಾ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಡಿಸೆಂಬರ್ 16, 17 ಮತ್ತು 18 ರಂದು ಕಾಪು ಬೀಚ್ ನಲ್ಲಿ ಕಡಲ ಐಸಿರ ಬೀಚ್ ಫೆಸ್ಟ್ -2022 ನಡೆಯಲಿದೆ ಎಂದು ಸಮಿತಿಯ ಗೌರವಾಧ್ಯಕ್ಷ, ಶಾಸಕ
ಯಕ್ಷರಂಗದ ಅಪ್ರತಿಮ ಕಲಾವಿದ ಕುಂಬ್ಳೆ ಸುಂದರ್ ರಾವ್ ಅಸ್ತಂಗತರಾಗಿದ್ದಾರೆ.ಯಕ್ಷಗಾನ ಕಲಾವಿದರೂ ಮಾಜಿ ಶಾಸಕರೂ ಆಗಿದ್ದ ಕುಂಬ್ಳೆ ಸುಂದರ್ ರಾವ್ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. ಯಕ್ಷಗಾನ ಮತ್ತು ತಾಳ-ಮದ್ದಳೆ (ಸಾಂಪ್ರದಾಯಿಕ ನೃತ್ಯ) ಕಲಾವಿದರೂ ಆಗಿದ್ದ ಸುಂದರ್ ರಾವ್, ಮಂಗಳೂರಿನ ಆಗಿನ ಸುರತ್ಕಲ್ ಕ್ಷೇತ್ರದ ಶಾಸಕರಾಗಿಯೂ ಸೇವೆ ಸಲ್ಲಿಸಿದ್ದರು. 1994 ರಿಂದ 1999ರವರೆಗೆ ಬಿಜೆಪಿಯಿಂದ ಸುರತ್ಕಲ್ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದ ಅವರು, ಸುರತ್ಕಲ್,
ಕರಾವಳಿಯ ಮುಂಚೂಣಿ ಸಹಕಾರಿ ಲಿಮಿಟೆಡ್ ಬ್ಯಾಂಕ್ಗಳಲ್ಲಿ ಒಂದಾದ ಎಂಸಿಸಿ ಬ್ಯಾಂಕ್ ಮಂಗಳೂರು ಇದ್ರ ಶತಮಾನೋತ್ತರ ದಶಮಾನೋತ್ಸವ ಕಾರ್ಯಕ್ರಮವು ನಗರದ ಮಿಲಾಗ್ರಿಸ್ ಕಾಲೇಜಿನ ಮೈದಾನದಲ್ಲಿ ಸಂಭ್ರಮದಿಂದ ನಡೆಯಿತು. ಕಾರ್ಯಕ್ರಮವನ್ನು ಮಂಗಳೂರು ಬಿಷಪ್ ರೆವರೆಂಡ್ ಡಾ. ಪೀಟರ್ ಪಾವ್ಲ್ ಸಲ್ಡಾನಾ ಮತ್ತು ಉಡುಪಿ ಬಿಷಪ್ ಡಾ. ಜೆರಾಲ್ಡ್ ಐಸಾಕ್ ಲೋಬೋ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಇದೇ ವೇಳೆ ಮಾತನಾಡಿದ ಡಾ. ಪೀಟರ್ ಪಾವ್ಲ್ ಸಲ್ಡಾನಾ ಅವರು, ಸಮಾಜಕ್ಕೆ
ಬೆಳ್ತಂಗಡಿ ತಾಲೂಕಿನ ತೋಟತ್ತಾಡಿ ಗ್ರಾಮದ ಬೆಂದ್ರಾಳ ಅರಣ್ಯ ಪ್ರದೇಶದಿಂದ ಸ್ಯಾಟ್ ಲೈಟ್ ಕರೆ ಹೋಗಿದೆ ಎಂಬ ವಿಚಾರವಾಗಿ ಧರ್ಮಸ್ಥಳ ಪೊಲೀಸರು ಪರಿಶೀಲನೆ ನಡೆಸಿದ್ದು, ಈ ಬಗ್ಗೆ ಯಾವುದೇ ನಿರ್ದಿಷ್ಟ ಮಾಹಿತಿ ದೃಢೀಕರಿಸಲ್ಪಟ್ಟಿಲ್ಲ ಎಂದು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷಿಕೇಶ್ ಭಗವಾನ್ ಸೋನಾವಣೆ ತಿಳಿಸಿದ್ದಾರೆ. ಬೆಂದ್ರಾಳ ಅರಣ್ಯ ಪ್ರದೇಶದಿಂದ ಸ್ಯಾಟ್ ಲೈಟ್ ಕರೆ ಹೋಗಿದೆ, ಭಾರೀ ಸ್ಫೋಟದ ಸದ್ದು ಕೇಳಿಸಿದೆ ಎನ್ನುವ ವದಂತಿ ಹರಡಿದ ಹಿನ್ನೆಲೆಯಲ್ಲಿ
ಸುಬ್ರಮಣ್ಯ: ಭಾರತೀಯ ಕ್ರಿಕೆಟ್ ತಂಡದ ಆಟಗಾರ ಮೂಲತಃ ಮಂಗಳೂರಿನ ಕ್ರಿಕೆಟಿಗ ಕೆ.ಎಲ್.ರಾಹುಲ್ ಕುಕ್ಕೆ ಸುಬ್ರಹ್ಮಣ್ಯ ಭೇಟಿ ನೀಡಿ ದೇವರ ದರ್ಶನ ಪಡೆದರು.ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಿದ ಕೆ.ಎಲ್.ರಾಹುಲ್, ಮಹಾಪೂಜೆಯಲ್ಲಿ ಭಾಗಿಯಾಗಲಿದ್ದಾರೆ.
ನಿಯತ್ತಿಗೆ ಮತ್ತೊಂದು ಹೆಸರು ನಾಯಿ.. ಇಷ್ಟೊಂದು ನಿಷ್ಠಾವಂತ ಪ್ರಾಣಿಯನ್ನು ಪ್ರೀತಿಸುವವರು ವಿರಳ.. ಈ ಶ್ವಾನಗಳಿಗೆ ಮನುಷ್ಯನಿಗಿರುವಂಥಹ ಸ್ವಾರ್ಥ, ಮತ್ಸರ, ಆಸೆ, ಆಕಾಂಕ್ಷೆಗಳಿಲ್ಲ, ಅದಕ್ಕೆ ಹೊಟ್ಟೆಗೆ ತಿನ್ನಲು ಹಿಟ್ಟು ಬಿಟ್ಟರೆ ಯಾವುದೇ ಆಸ್ತಿ, ಅಂತಸ್ತು ಬೇಡ… ಒಂದೊಮ್ಮೆ ತಪ್ಪಿಯಾದರೂ ಅದಕ್ಕೆ ಆಹಾರ ನೀಡಿದ್ದೀರಿ ಎಂದಾದರೆ ನಿಮ್ಮನ್ನು ಅದು ಅದರ ಜೀವನ ಪರಿಯಂತ ಮರೆಯೋಲ್ಲ.. ಇಂಥಹ ವಿಶ್ವಾಸ ಭರಿತ ಪ್ರಾಣಿಯನ್ನು ಸಾಕಿ ಸಲಹುತ್ತಿರುವ ಅಪರೂಪದ
ಸುಬ್ರಹ್ಮಣ್ಯ, ನ.20: ಒಂಬತ್ತು ಸಾವಿರ ಕೋಟಿ ರೂಪಾಯಿಗಳನ್ನು ನಮ್ಮ ಸರಕಾರ ಅಭಿವೃದ್ಧಿಗೆ ಇರಿಸಿದೆ. ಸರಕಾರದ ಸಂಕಲ್ಪ ದಾಹಮುಕ್ತ ಕರ್ನಾಟಕ ಮಾಡಬೇಕೆಂಬುದು. ಮುಂದಿನ ಎರಡು ಮೂರು ತಿಂಗಳಲ್ಲಿ ಅದನ್ನು ಕಾರ್ಯಗತ ಗೊಳಿಸಲು ಪ್ರಯತ್ನಿಸಲಾಗುವುದು ಎಂದು ರಾಜ್ಯ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ತಿಳಿಸಿದರು. ಅವರು ರವಿವಾರ ರಾತ್ರಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದರು. ನಗರಾಭಿವೃದ್ಧಿ ಇಲಾಖೆ ವತಿಯಿಂದ
ಬೈಂದೂರು: ಪ್ರಮೋದ್ ಶಿಪ್ಲಾ ಪೂಜಾರಿ ಅವರು ಗಜ್ಞಾರ ಮನೆತನದ ಹೆಸರಿನಲ್ಲಿ ಗಜ್ಞಾರ ಎನ್ ಕ್ಲೇವ್ ಎಂಬ ನೂತನ ಖಾಸಗಿ ಕಟ್ಟಡದ ಉದ್ಘಾಟನಾ ಕಾರ್ಯಕ್ರಮವು ಬೈಂದೂರಿನಲ್ಲಿ ನಡೆಯಿತು. ಕಟ್ಟಡದ ಉದ್ಘಾಟನೆ ಬೈಂದೂರು ಕ್ಷೇತ್ರದ ಶಾಸಕ ಬಿ ಎಂ ಸುಕುಮಾರ್ ಶೆಟ್ಟಿ ನೆರವೇರಿಸಿದರು. ಬಳಿಕ ಮಾತನಾಡಿ ಕಂಬದಕೋಣೆ ಹಾಗೂ ಕೆರ್ಗಾಲು ಗ್ರಾಮವನ್ನು ದೇಶ ವಿದೇಶಗಳಿಗೆ ಪರಿಚಯಿಸಿದ ದಿವಂಗತ ಆರ್.ಕೆ ಸಂಜುರಾಯರನ್ನು ನೆನಪಿಸಿ ಈ ಕಟ್ಟಡದಿಂದ ಬರುವಂತ ಆದಾಯವನ್ನು ಸ್ವಲ್ಪ ಮಟ್ಟಿಗೆ ನಮ್ಮ
ಮಂಗಳೂರು, ನ.19: ಬಂಡವಾಳ ಹೂಡಿಕೆದಾರರ ಸಮಾವೇಶದಿಂದ ನವೀಕರಿಸಬಹುದಾದ ಇಂಧನ, ಹೈಡ್ರೋಜನ್ ಇಂಧನ ಮತ್ತು ಕಡಲನೀರಿನಿಂದ ಅಮೋನಿಯಾ ಉತ್ಪಾದನೆಗೆ ಒಂದೂವರೆಯಿಂದ ಎರಡು ಲಕ್ಷ ಕೋಟಿ ಬಂಡವಾಳದ ನಿರೀಕ್ಷೆ ಇದೆ. ದೊಡ್ಡ ಪ್ರಮಾಣದ ಹೂಡಿಕೆ ಕರಾವಳಿಯಲ್ಲಿ ಆಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಬಜ್ಪೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಹಸಿರು ಯೋಜನೆಉತ್ಪಾದನೆಗೆ
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉಡುಪಿ ಜಿಲ್ಲೆಗೆ ಪ್ರವಾಸವನ್ನು ಕೈಗೊಂಡು ಇಂದು ಶುಕ್ರವಾರದಂದು ಉಡುಪಿಗೆ ಆಗಮಿಸಿದ್ದು, ಮಣಿಪಾಲದ ಮಾಹೆ ವಿಶ್ವವಿದ್ಯಾಲಯದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಣಿಪಾಲದ ಮಾಹೆ ಸಂಸ್ಥೆ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಸೇವೆಯನ್ನು ಶ್ಲಾಘಿಸುತ್ತಾ, ತಮ್ಮ ವಿದ್ಯಾರ್ಥಿ ದಿನಗಳನ್ನು ನೆನಪಿಸಿಕೊಂಡರು. ಮಾಹೆ ಸಂಸ್ಥೆ ಶೈಕ್ಷಣಿಕ ಹಾಗೂ ಸಂಶೋಧನೆ ಕ್ಷೇತ್ರದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ