ಕರ್ಪೂರಿ ಠಾಕೂರ್ ಅವರಿಗೆ ಮರಣೋತ್ತರ ಭಾರತ ರತ್ನ ಪುರಸ್ಕಾರ
ಜನವರಿ 24 ಸಮಾಜವಾದಿ ಕರ್ಪೂರಿ ಠಾಕೂರ್ ಬದುಕಿದ್ದರೆ ನೂರು ವರುಷ. ಅದರ ಮೊದಲ ದಿನ ಜನವರಿ 23ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕರ್ಪೂರಿ ಠಾಕೂರ್ ಅವರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ಘೋಷಿಸಿದರು.
1954ರ ಜನವರಿ 2ರಲ್ಲಿ ಆರಂಭವಾದುದು ಭಾರತ ರತ್ನ ಪ್ರಶಸ್ತಿ. ಇದು ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ಆಗಿದೆ. 1966ರಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರಿಗೆ ಮರಣೋತ್ತರ ಪ್ರಶಸ್ತಿ ನೀಡುವುದು ಆರಂಭವಾಗಿ ಕರ್ಪೂರಿ ಠಾಕೂರ್ ಸೇರಿ 15 ಮಂದಿಗೆ ಮರಣೋತ್ತರವಾಗಿ ಭಾರತ ರತ್ನ ಸಂದಿದೆ. ಒಟ್ಟು 49 ಜನರು ಇಲ್ಲಿಯವರೆಗೆ ಭಾರತ ರತ್ನ ಪ್ರಶಸ್ತಿ ಭಾಜನರಾಗಿದ್ದಾರೆ.
ಗಾಂಧಿ ದಾರಿಯ ಗಡಿನಾಡ ಗಾಂಧಿ ಖಾನ್ ಅಬ್ದುಲ್ ಗಫಾರ್ ಖಾನ್, ದಕ್ಷಿಣ ಆಫ್ರಿಕಾದ ನೆಲ್ಸನ್ ಮಂಡೇಲಾ ಭಾರತ ರತ್ನ ಪುರಸ್ಕೃತ ವಿದೇಶೀಯರು. ಮದರ್ ತೆರೇಸಾ ಅಲ್ಬೇನಿಯಾದವರಾದರೂ ಅವರ ಕಾರ್ಯ ಕ್ಷೇತ್ರ ಭಾರತ.
ಕರ್ಪೂರಿ ಠಾಕೂರ್‍ರಿಗೆ ಭಾರತ ರತ್ನ ಬಿಜೆಪಿಯ ರಾಜಕೀಯ ದಾಳ, ಆದರೂ ಅರ್ಹರಿಗೆ ಸಂದಿದೆ ಎಂಬುದು ಸಮಾಧಾನ.