HomeFresh Newsಅಮೆಜಾನ್ ನದಿ ಬಯಲಿನ ಗುವರಾನಾ | ಹಣ್ಣು ತಿಂದರೂ ಬೀಜಕ್ಕೆ ಹೆಚ್ಚು ಬೆಲೆ | ಅಮೆಜಾನ್...

ಅಮೆಜಾನ್ ನದಿ ಬಯಲಿನ ಗುವರಾನಾ | ಹಣ್ಣು ತಿಂದರೂ ಬೀಜಕ್ಕೆ ಹೆಚ್ಚು ಬೆಲೆ | ಅಮೆಜಾನ್ ಬೀಜ ತಂಪು ಪಾನೀಯಗಳಲ್ಲಿ ಪ್ರಸಿದ್ಧ

ಗುವರಾನಾ ಎಂಬುದು ಪೋರ್ಚುಗೀಸ್ ಹೆಸರು. ಸ್ಥಳೀಯವಾಗಿ ಕೆಲವು ಹೆಸರು ಇದ್ದರೂ ಇದೇ ಹೆಚ್ಚು ಬಳಕೆಯಲ್ಲಿ ಇದೆ.

ಇದು ಸಾಫ್ಟ್ ಡ್ರಿಂಕ್‌ಗಳಲ್ಲಿ ಬಹು ಬಳಕೆಯದು. ಸ್ಥಳೀಯ ಬುಡಕಟ್ಟು ಜನರು ಇದರ ಕಾಫಿ ಕಷಾಯ ಕುಡಿಯುತ್ತಾರೆ.

ಕಾಫಿಯಲ್ಲಿ 1.5 ಶೇಕಡಾ ಕೆಫೀನ್ ಇದ್ದರೆ, ಗುವರಾನಾ ಬೀಜದಲ್ಲಿ 6 ಶೇಕಡಾ ಕೆಫೀನ್ ಇದೆ.

ಪ್ರಚೋದಕ ಆಗಿರುವುದರಿಂದ ಎನರ್ಜಿ ಡ್ರಿಂಕ್, ಸಾಫ್ಟ್ ಡ್ರಿಂಕ್‌ಗಳಲ್ಲಿ ಬಳಕೆಯಾಗುತ್ತದೆ. ಮುಖ್ಯವಾಗಿ ಬ್ರೆಜಿಲ್ ದೇಶದ ಬಳ್ಳಿ ಮರವಿದು.

ಹಣ್ಣು ಕಂದುಗೆಂಪು ಇರುತ್ತದೆ. ಒಡೆದಾಗ ಬೀಜ ಕಾಣಿಸಿ ಕಣ್ಣುಗುಡ್ಡೆಯಂತೆ ಅನಿಸುತ್ತದೆ. ಹಣ್ಣು ಸಿಹಿ ಕಹಿ.

ಆದರೆ ಸಕ್ಕರೆ ಬೆರೆಸಿ ಪಾನೀಯ ಮಾಡುತ್ತಾರೆ. ಬೀಜವನ್ನು ಕುಟ್ಟಿ ಪುಡಿ ಮಾಡುವರು.

ಮುಖ್ಯವಾಗಿ ತುಪಿ, ಗವುರಾನಿ ಬುಡಕಟ್ಟು ಜನರು ಬಹು ಹಿಂದಿನಿಂದಲೂ ಇದರ ಹರ್ಬಲ್ ಟೀ ಮಾಡಿ ಕುಡಿಯುತ್ತಿದ್ದರು. ಈಗ ಮಾರುಕಟ್ಟೆ ಬಲಿಯುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments