ಹನ್ನೊಂದು ದಿನಗಳ ಹಿಂದೆ ಆರು ವರುಷದ ಹಸನೈನ್ ಬಿಸಿಗಾಳಿಯಿಂದ ಉರುಳಿ ಸತ್ತ. ಅದನ್ನು ನೋಡಲಾಗದೆ ತಾಯಿ ಉರುಳಿ ಮರಣಿಸಿದ್ದಳು. ಈಗ ಆಕೆಯ ಗಂಡ ಹೆಂಡತಿ ಮUನ ಗೋರಿಯನ್ನು ಆತು ಮರಣಿಸಿದ್ದಾರೆ. ಉತ್ತರ ಪ್ರದೇಶ ರಾಜ್ಯದ ಮಹೋಬಾ ಜಿಲ್ಲೆಯ ಚರ್ಕಾರಿ ಎಂಬ ಸಣ್ಣ ಪಟ್ಟಣದಲ್ಲಿ ಈ ಘೋರ ಸಾವು ಸರಣಿ ನಡೆದಿದೆ. ಮೂವರ ಸಾವಿನೊಂದಿಗೆ ಮೂವರು ಅನಾಥರಾಗಿದ್ದಾರೆ. ಹನ್ನೊಂದು ದಿನಗಳ ಹೀಟ್ ವೇವ್‌ಗೆ ಸುಬಾನ್ ಅಹ್ಮದ್‌ರ ಆರು ವರುಷದ ಹುಡುಗ ಕುಸಿದು ಸತ್ತಿದ್ದ. ಅದನ್ನು ನೋಡಿ ತಡೆಯಲಾಗದೆ ತಾಯಿ ರಜಿಯಾ ಖಾತೂನ್ ಹಾಗೆಯೇ ಮತಿ ತಪ್ಪಿ ಬಿದ್ದವರು ಮೇಲೇಳಲೇ ಇಲ್ಲ.

ಹೆಂಡತಿ ಮಗನ ಶವಗಳನ್ನು ಅಕ್ಕಪಕ್ಕದಲ್ಲಿ ಸಮಾಧಿ ಮಾಡಿದ ಬಳಿಕ ಸುಬಾನ್ ಅಹ್ಮದ್ ಚೇತರಿಸಿಕೊಳ್ಳಲಿಲ್ಲ. ಈಗ ನೋಡಿದರೆ ಹನ್ನೊಂದನೇ ದಿನ ಒಂದು ಕೈ ಹೆಂಡತಿಯ ಗೋರಿ, ಇನ್ನೊಂದು ಕೈ ಮಗನ ಗೋರಿಗೆ ಊರಿ ಅಪ್ಪಿದಂತೆ ಸುಬಾನ್ ಕೊನೆಯುಸಿರೆಳೆದಿದ್ದಾರೆ.ನಲ್ವತ್ತರ ಸುಬಾನ್ ಸಾವಿನೊಂದಿಗೆ ಹದಿನೇಳರ ಸೈಫ್, ಹದಿನಾಲ್ಕರ ರೋಶ್ನಿ, ಹನ್ನೊಂದರ ಆಲಿಯಾ ಈ ಮೂವರು ಅನಾಥರಾಗಿದ್ದಾರೆ. ಸುಬಾನ್ ಅಹ್ಮದ್ ಮಧ್ಯ ಪ್ರದೇಶದ ಹರ್‍ಪಾಲ್ ಊರಿನವರು. ಹೆಂಡತಿಯ ಮನೆಯಲ್ಲೇ ವಾಸವಿದ್ದರು. ಮೇ ೨೫ರ ತೀವ್ರ ಬಿಸಿ ಗಾಳಿ ಹುಡುಗನನ್ನು ಸಾಯಿಸುವುದರೊಂದಿಗೆ ಈ ಮನೆಯ ದುರಂತ ಆರಂಭವಾಯಿತು. ಹುಡುಗ ಬಿಸಿಲಾಘಾತಕ್ಕೆ ಬಿದ್ದಾಗ ಅಸ್ಪತ್ರೆಗೆ ಒಯ್ದರೂ ಫಲ ಸಿಗಲಿಲ್ಲ; ತಾಯಿಯೂ ಅಲ್ಲೇ ಕುಸಿದರು. ಶುಕ್ರವಾರ ಮುಂಜಾವ ನಾಲ್ಕು ಗಂಟೆಗೆ ಅಹ್ಮದ್ ಮಸಣಕ್ಕೆ ಹೋದವರು ವಾಪಾಸು ಬರಲಿಲ್ಲ. ಹೆಂಡತಿ ಮಗನ ಗೋರಿ ಅಪ್ಪ ಬಿದ್ದಿದ್ದನ್ನು ಆಮೇಲೆ ಕಂಡವರು ಆಸ್ಪತ್ರೆಗೆ ಸಾಗಿಸಿದರೂ ಸಾವು ಆಗಲೇ ಆತನನ್ನು ಕರೆದುಕೊಂಡಿತ್ತು.

