Home Page 13

ಕೃಷಿ ಮಸೂದೆ ವಾಪಸ್ಸಾತಿ, ಬೆಲೆ ಏರಿಕೆ ವಿರುದ್ಧ ಸೆ.27ರಂದು ಪ್ರತಿಭಟನಾ ಸಭೆ

ಬಂಟ್ವಾಳ: ಕೇಂದ್ರ ಸರಕಾರ ಜಾರಿಗೆ ತಂದಿರುವ ಕೃಷಿ ಮಸೂದೆಗಳ ವಾಪಸ್ಸಾತಿಗೆ ಹಾಗೂ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನಾತ್ಮಕಗೊಳಿಸಲು ಆಗ್ರಹಿಸಿ ದೆಹಲಿಯ ಹೊರವಲಯದಲ್ಲಿ ನಡೆಯುತ್ತಿರುವ ಐತಿಹಾಸಿಕ ಚಳುವಳಿಗೆ ಸೆ. 26ನೇ ತಾರೀಖಿಗೆ ಹತ್ತು ತಿಂಗಳು ತುಂಬಲಿರುವ ಹಿನ್ನಲೆಯಲ್ಲಿ ಸಂಯುಕ್ತ ಹೋರಾಟ ಕಿಸಾನ್ ಮೋರ್ಚಾ ಸೆ.27ರಂದು ಭಾರತ್ ಬಂದ್‍ಗೆ ಕರೆ

ತಲ್ಲೂರು ಗ್ರಾ.ಪಂ.ನ ಪ್ರಥಮ ಸುತ್ತಿನ ಗ್ರಾಮಸಭೆ

ಕುಂದಾಪುರ: ಪ್ರತೀ ವಷರ್ಷವೂ ಬಿರುಬೇಸಿಗೆಯಲ್ಲಿ ತಲ್ಲೂರು ಗ್ರಾ.ಪಂ ವ್ಯಾಪ್ತಿಯ ಪಿಂಗಾಣಿಗುಡ್ಡೆ ಹಾಗೂ ಉಪ್ಪಿನಕುದ್ರು ನಿವಾಸಿಗಳು ಕುಡಿಯುವ ನೀರಿಗಾಗಿ ಪರದಾಟ ನಡೆಸುತ್ತಾರೆ. ಸೌಕೂರು ಏತ ನೀರಾವರಿ ಯೋಜನೆಯ ಮೂಲ ಯೋಜನೆಯಂತೆ ತಲ್ಲೂರು ಗ್ರಾ.ಪಂ ವ್ಯಾಪ್ತಿಗೆ ನೀರು ಕಲ್ಪಿಸಲು ಮೂಲನಕ್ಷೆ ತಯಾರಿಸಲಾಗಿತ್ತು. ಆದರೆ ರಾಜಕೀಯ ಸ್ವಹಿತಾಸಕ್ತಿಗಳಿಗಾಗಿ ಮೂಲ ಯೋಜನೆಯನ್ನು

ಪೌರ ಕಾರ್ಮಿಕರ ದಿನಾಚರಣೆ ಪ್ರಯುಕ್ತ ಕಾರ್ಮಿಕರಿಗೆ ಸನ್ಮಾನ ಹಾಗೂ ಕಾರ್ಯಾಗಾರ

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸ್ವಚ್ಚ ಭಾರತ್ ಮಿಷನ್ ಗ್ರಾಮಾಂತರ ಮಂಗಳೂರು ತಾಲೂಕು, ಸಾಹಸ್ ಸಂಸ್ಥೆ ಸಹಯೋಗದಲ್ಲಿ ಪೌರ ಕಾರ್ಮಿಕ ದಿನಾಚರಣೆ ಪ್ರಯುಕ್ತ ಸ್ವಚ್ಛತಾ ಕಾರ್ಮಿಕರಿಗೆ ಸನ್ಮಾನ ಹಾಗೂ ಮಾಹಿತಿ ಕಾರ್ಯಾಗಾರವನ್ನ ಹಮ್ಮಿಕೊಳ್ಳಲಾಗಿತ್ತು. ಇನ್ನು ತಾಲೂಕು ಪಂಚಾಯತ್‍ನಲ್ಲಿ ನಡೆದ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಸಹಾಯಕ ಯೋಜನಾಧಿಕಾರಿ ಸರೋಜನಿ ಅವರು

ಬೆಳಪು ಹಾಲು ಉತ್ಪಾದಕರ ವಾರ್ಷಿಕ ಸಭೆ

ಬೆಳಪು ಹಾಲು ಉತ್ಪಾದಕರ ಸಹಕಾರ ಸಂಘ ಪಣಿಯೂರು ಇದರ ವಾರ್ಷಿಕ ಮಹಾಸಭೆ ಪಣಿಯೂರು ಸಂಘದ ಆವರಣದಲ್ಲಿ ನಡೆಯಿತು. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಉಪ ವ್ಯವಸ್ಥಾಪಕ ಡಾ| ಅನಿಲ್ ಕುಮಾರ್ ಶೆಟ್ಟಿ ಅವರು ಮಾತನಾಡಿ, ಆರೋಗ್ಯಕರವಾಗಿ ಪಶು ಸಾಕಾಣಿಕೆ ಮಾಡಿ ಗುಣಮಟ್ಟದ ಹಾಲಿನ ಉತ್ಪಾದನೆ ಮೂಲಕ ಹೈನುಗಾರರು ಆರ್ಥಿಕ ಸ್ಥಿರತೆ ಹೆಚ್ಚಿಸಿಕೊಳ್ಳಲು ಸಾಧ್ಯ ಎಂದರು.

ಕುಬಣೂರಿನ ಸೇತುವೆಯ ಒಂದು ಭಾಗ ಕುಸಿದು ಸಂಚಾರಕ್ಕೆ ತಡೆ

ಮಂಜೇಶ್ವರ: ಮಂಗಲ್ಪಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಕುಬಣೂರಿನಲ್ಲಿ 30 ವರ್ಷಗಳ ಹಿಂದೆ ನಿರ್ಮಿಸಲಾಗಿದ್ದ ಸೇತುವೆಯ ಒಂದು ಭಾಗ ಕುಸಿದು ಸಂಚಾರಕ್ಕೆ ತಡೆಯಾಗಿದ್ದು ನಿತ್ಯ ಸಂಚಾರಿಗಳು ಸಂಕಷ್ಟಕ್ಕೂಳಗಾಗಿದ್ದಾರೆ. ಇದು ಸುವರ್ಣಗಿರಿ ತೋಡಿಗೆ ಕೃಷಿಗಾಗಿ ನಿರ್ಮಿಸಲಾದ ಸೇತುವೆಯಾಗಿದ್ದು ಅಗಲ ಕಿರಿದಾಗಿ ಸುಗಮ ಸಂಚಾರಕ್ಕೂ ಅಡ್ಡಿಯಾಗಿತ್ತು. ಇದರ ಮೇಲೆ ಕೆಂಪು ಕಲ್ಲು

ಪುತ್ತೂರಿನಲ್ಲಿ ಪೌರ ಕಾರ್ಮಿಕ ದಿನಾಚರಣೆ

ಪುತ್ತೂರು: ಪೌರ ಕಾರ್ಮಿಕರ ಜೊತೆಗೆ ನಾಗರಿಕರು ಸಹಕರಿಸಿದಾಗ ಮಾತ್ರ ಸ್ವಚ್ಚ ನಗರ ನಿರ್ಮಾಣ ಸಾಧ್ಯವಿದ್ದು, ನಮ್ಮ ಕಸವನ್ನು ನಾವೇ ನಿರ್ವಹಿಸುವಂತಹ ಮನೋಭಾವ ಪ್ರತಿಯೊಬ್ಬರಲ್ಲಿಯೂ ಬೆಳೆಯಬೇಕು ಎಂದು ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳ ತಿಳಿಸಿದರು. ಅವರು ಪುತ್ತೂರಿನ ಪುರಭವನದಲ್ಲಿ ಗುರುವಾರ ನಡೆದ ಪೌರಕಾರ್ಮಿಕರ ದಿನಾಚರಣೆಯಲ್ಲಿ

ಘನತ್ಯಾಜ್ಯ ನಿರ್ವವಣೆ ಮಾಡದೆ ಜನರ ಮೇಲೆ ಬರೆ : ಪಾಲಿಕೆ ವಿಪಕ್ಷ ನಾಯಕ ಎ.ಸಿ. ವಿನಯ್ ರಾಜ್ ಆರೋಪ

ರಾಜ್ಯ ಮತ್ತು ನಗರದ ಆಡಳಿತದಲ್ಲಿ ಪರ್ಸಂಟೆಜ್ ಸರಕಾರವಿದೆ.ಸರಿಯಾಗಿ ಘನ ತ್ಯಾಜ್ಯ ನಿರ್ವಹಣೆ ಮಾಡದೆ ಜನರ ಮೇಲೆ ಬರೆ ಎಳೆದಿದೆ ಎಂದು ಮಂಗಳೂರು ಮಹಾನಗರ ಪಾಲಿಕೆಯ ಪ್ರತಿ ಪಕ್ಷದ ನಾಯಕ ಎ.ಸಿ.ವಿನಯ್ ರಾಜ್ ಹೇಳಿದರು. ಅವರು ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಮಂಗಳೂರು ಪಾಲಿಕೆ ಘನ ತ್ಯಾಜ್ಯ ನಿರ್ವಹಣೆಗೆ ಸಾಕಷ್ಟು ಹಣ ಖರ್ಚು

ಮಂಗಳೂರು ಸ್ವಚ್ಛ ನಗರ ಎಂಬ ಹೆಸರಿಗೆ ಚ್ಯುತಿ ಬಂದಿದೆ : ಜೆ.ಆರ್. ಲೋಬೋ

ಮಂಗಳೂರು ನಗರ ಸ್ವಚ್ಛ ನಗರ ಎಂಬುದಕ್ಕೆ ಹಲವು ಬಾರಿ ಪ್ರಶಸ್ತಿ ಪಡೆದಿದೆ. ಆದರೆ ಇತ್ತಿಚೀನ ದಿನಗಳಲ್ಲಿ ಆ ಹೆಸರಿಗೆ ಚ್ಯುತಿ ಬಂದಿದೆ. ಕಸ ವಿಲೇವಾರಿಯ ನಿರ್ವಹಣೆ ನಗರದಲ್ಲಿ ಸಮರ್ಪಕವಾಗಿಲ್ಲ ಎಂದು ಮಾಜಿ ಶಾಸಕ ಜೆ.ಆರ್. ಲೋಬೋ ಆರೋಪಿಸಿದರು. ಅವರು ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಸುಮಾರು 52 ಕೋಟಿ ರೂ ವೆಚ್ಚದಲ್ಲಿ

ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜು: ನಗರದ ಟಾಗೂರ್ ಪಾರ್ಕ್‌ನಲ್ಲಿ ಸ್ವಚ್ಛತಾ ಅಭಿಯಾನ

ಮಂಗಳೂರಿನ ಸಂತ ಅಲೋಶಿಯಸ್ ಸ್ವಾಯುತ್ತ ಕಾಲೇಜಿನ ಅಟೊನಾಮಸ್ ವಿಭಾಗದ ಎನ್‌ಸಿಸಿ ಏರ್‌ವಿಂಗ್ ಕೆಡೆಟ್‌ಗಳಿಂದ ನಗರದ ಟಾಗೂರ್ ಪಾರ್ಕ್‌ನಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಒಟ್ಟು 59 ಕೆಡೆಟ್‌ಗಳಿಂದ ಸ್ವಚ್ಛಾತಾ ಕಾರ್ಯ ನೆರವೇರಿತು. ಎನ್‌ಸಿಸಿ ಏರ್‌ವಿಂಗ್‌ನ ಅಫೀಸರ್ ಅಲ್ವಿನ್ ಸ್ಟೀಪನ್ ಮಿಸ್ಕಿತ್ ಅವರು ನೇತೃತ್ವವನ್ನು ವಹಿಸಿದ್ದರು. ಟಾಗೂರ್

ಯುವ ಕಾಂಗ್ರೆಸ್ ವಕ್ತಾರರ ಆಯ್ಕೆಗಾಗಿ ರಾಷ್ಟ್ರೀಯ ಮಟ್ಟದ ಭಾಷಣ ಸ್ಪರ್ಧೆ

ಯುವ ಕಾಂಗ್ರೆಸ್ ವಕ್ತಾರರ ಆಯ್ಕೆಗಾಗಿ “” ರಾಷ್ಟ್ರೀಯ ಮಟ್ಟದ ಭಾಷಣ ಸ್ಪರ್ಧೆಯನ್ನು ಭಾರತೀಯ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ಅವರ ನೇತೃತ್ವದಲ್ಲಿ ನಡೆಯಲಿದೆ ಎಂದು ಯುವ ಕಾಂಗ್ರೆಸ್ ಮುಖಂಡ ಮನ್ನಾನ್ ಮನ್ನಾರ್ ಹೇಳಿದರು. ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ ಅವರು ದೇಶದಲ್ಲಿ ಬಿಜೆಪಿ