ಹಳೆಯಂಗಡಿ:ಭಾರತ ಸರಕಾರ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ ‘ಮೇರಾ ಯುವ ಭಾರತ್, ಮೈ ಭಾರತ್, ದ.ಕ. ಜಿಲ್ಲೆ
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ದ.ಕ, ಗ್ರಾಮ ಪಂಚಾಯತ್ ಪಡುಪಣಂಬೂರು ಇವರ ಮಾರ್ಗದರ್ಶನದಲ್ಲಿ ರೋಟರಿ ಕ್ಲಬ್ ಬೈಕಂಪಾಡಿ, JCI ಸುರತ್ಕಲ್,
ಪ್ರಿಯದರ್ಶಿನಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಹಳೆಯಂಗಡಿ ಪೂಜಾ ಫ್ರೆಂಡ್ಸ್ ಹಳೆಯಂಗಡಿ, ಶ್ರೀ ಓಂಕಾರೇಶ್ವರಿ ಮಂದಿರ (ರಿ) ತೋಕೂರು, ಒಂಬತ್ತು ಮಾಗಣೆ ಮುಂಡಾಲ ಸಮಾಜ ಸೇವಾ ಟ್ರಸ್ಟ್ (ರಿ) ತೋಕೂರು ಇವರ ಸಹಕಾರದಲ್ಲಿ ಫೇಮಸ್ ಯೂತ್ ಕ್ಲಬ್ (ರಿ) ಮತ್ತು ಮಹಿಳಾ ಮಂಡಲಿ 10ನೇ ತೋಕೂರು ಹಳೆಯಂಗಡಿ ಇವರ ಪ್ರಾಯೋಜಕತ್ವದಲ್ಲಿವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮವು ದಿನಾಂಕ 21.06.2026 ಭಾನುವಾರದಂದು ಪೂರ್ವಾಹ್ನ 9:00ಕ್ಕೆತೋಕೂರಿನ ಶ್ರೀ ಓಂಕಾರೇಶ್ವರಿ ಮಂದಿರದ ವಠಾರದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಗುರುರಾಜ್ ಎಸ್ ಪೂಜಾರಿ ವಹಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಯಾಗಿ ಯೋಗ ಗುರುಗಳು, ಯೋಗೋಪಾಸನ, ಉಚಿತ ತರಬೇತಿ ಕೇಂದ್ರ, ಕೆಂಚನಕೆರೆ, ಮುಲ್ಕಿ ಶ್ರೀ ಯಾದವ ದೇವಾಡಿಗ, ಉಪಸ್ಥಿತರಿರಲಿದ್ದಾರೆ. ಮುಖ್ಯ ಅತಿಥಿಗಳಾಗಿ ಆಡಳಿತಾಧಿಕಾರಿ ಗ್ರಾಮ ಪಂಚಾಯತ್ ಪಡುಪಣಂಬೂರು
ಶ್ರೀ ರಾಮಕೃಷ್ಣ ಐತಾಳ್, ರೋಟರಿ ಕ್ಲಬ್ ಬೈಕಂಪಾಡಿ ಅಧ್ಯಕ್ಷರಾದ Rtn. ಕಶ್ಯಪ್ ಪ್ರಭು, ಜೆಸಿಐ ಸುರತ್ಕಲ್ ಅಧ್ಯಕ್ಷರಾದ Jc. ಅಶೋಕ್ ಎನ್, ಶ್ರೀ ಓಂಕಾರೇಶ್ವರಿ ಮಂದಿರ (ರಿ.), ತೋಕೂರು -ಮತ್ತು ಒಂಬತ್ತು ಮಾಗಣೆ ಮುಂಡಾಲ ಸಮಾಜ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ -ಶ್ರೀ ಸದಾಶಿವ ಕುಂದರ್, ಪೂಜಾ ಎರೇಂಜರ್ಸ್, ಹಳೆಯಂಗಡಿ ಮಾಲಕರಾದ -ಶ್ರೀ ಜೈ ಕೃಷ್ಣ ಕೋಟ್ಯಾನ್, ಪ್ರಿಯದರ್ಶಿನಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಹಳೆಯಂಗಡಿ -ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀ ಸುದರ್ಶನ್
ಭಾಗವಹಿಸಲಿದ್ದಾರೆ.
ಫೇಮಸ್ ಯೂತ್ ಕ್ಲಬ್ ನ ಅಧ್ಯಕ್ಷರು ಶ್ರೀ ಸುರೇಶ್ ಬಿ ದೇವಾಡಿಗ, ಪ್ರಧಾನ ಕಾರ್ಯದರ್ಶಿ ಶ್ರೀ ವಿಶ್ವಜಿತ್ ಆಚಾರ್ಯ, ಕೋಶಾಧಿಕಾರಿ
ಶ್ರೀ ನವೀನ್ ಚಂದ್ರ ಅಮೀನ್, ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಪ್ರೇಮಲತಾ ಯೋಗೀಶ್, ಕಾರ್ಯದರ್ಶಿ ಶ್ರೀಮತಿ ಕುಸುಮ ಎಚ್ ಕೋಟ್ಯಾನ್,
ಕೋಶಾಧಿಕಾರಿ ಶ್ರೀಮತಿ ಇಂದಿರಾ ಸಂಜೀವ ಕರ್ಕೇರ ಮತ್ತು ಸರ್ವ ಸದಸ್ಯರು ಫೇಮಸ್ ಯೂತ್ ಕ್ಲಬ್ (ರಿ) ಮತ್ತು ಮಹಿಳಾ ಮಂಡಲದವರು ಆತ್ಮೀಯವಾಗಿ ಸ್ವಾಗತಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

