ಯುವವಾಹಿನಿ-ಬಿರುವೆರ್ ಕಾಪು ವತಿಯಿಂದ ಆಟಿಕೂಟ
ಕಾಪು ಯುವವಾಹಿನಿ ಹಾಗೂ ಬಿರುವೆರ್ ಕಾಪು ಸಂಸ್ಥೆಗಳು ಜಂಟಿಯಾಗಿ ಆಯೋಜಿಸಿದ ಆಟಿಕೂಟ ಬಹಳ ವಿಭಿನ್ನವಾಗಿ ಕಾಪುವಿನ ಖಾಸಗಿ ರೆಸಾರ್ಟ್‍ವೊಂದರಲ್ಲಿ ನಡೆಯಿತು.ಮುಖ್ಯ ಅಥಿತಿಯಾಗಿ ಭಾಗವಹಿಸಿ ಮಾತನಾಡಿದ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ಸಂತೋಷ್ ಉದ್ಯಾವರ, ಇದೀಗ ನಾವು ಆಟಿ ತಿಂಗಳ ದಿನಗಳಲ್ಲಿ ಹಬ್ಬವಾಗಿ ಆಚರಿಸಿ ಸೇವಿಸುವ ಸೊಪ್ಪು ತರಕಾರಿಗಳು ಅಂದು ಬಡತನದ ಅನಿವಾರ್ಯ ಆಹಾರಗಳಾಗಿತ್ತು, ಈ ಆಟಿ ಕೂಟಗಳಲ್ಲಿ ಯುವ ಪೀಳಿಗೆಗೆ ಅಂದಿನ ಕಷ್ಟದ ದಿನಗಳನ್ನು ವಿವರಿಸಿ ಹೇಳುವ ಅಗತ್ಯವಿದೆ, ಕಾಪು ಯುವವಾಹಿನಿ ಸಂಸ್ಥೆ ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ವಿಚಾರಗಳಿಗೂ ಉತ್ತಮ ರೀತಿಯಲ್ಲಿ ಸ್ಪಂಧಿಸುವ ಮೂಲಕ ಜನ ಮೆಚ್ಚುಗೆ ಪಡೆದಿದೆ ಎಂದರು, ಕೇಂದ್ರ ಸಂಸ್ಥೆಯ ಸಂಘಟನಾ ಕಾರ್ಯದರ್ಶಿ ದೀಪಕ್ ಎರ್ಮಾಳು ಮಾತನಾಡಿ, ಈ ಕಾರ್ಯಕ್ರಮ ಮೂಲ ಉದ್ದೇಶ, ಕೂಡು ಕುಟುಂಬಗಳು ಇದ್ದ ಹಿಂದಿನ ಕಾಲದಲ್ಲಿ ಒಂದೇ ಸೊರಿನಡಿಯಲ್ಲಿ ಹತ್ತಾರು ಮಂದಿ ಒಟ್ಟಿಗೆ ಅನ್ನ ಆಹಾರ ಸೇವಿಸುವ ಸಂದರ್ಭಗಳಿತ್ತು, ಆ ಸನ್ನಿವೇಶಗಳು ಕಳೆದು ಹೋಗುವ ಈ ಕಾಲಘಟ್ಟದಲ್ಲಿ ಅದನ್ನು ಮತ್ತೆ ನೆನಪಿಸುವ ಉದ್ದೇಶವೂ ಈ ಕಾರ್ಯಕ್ರಮದಲ್ಲಿ ಅಡಗಿದೆ ಎಂದರು.
ಇದೇ ಸಂದರ್ಭದಲ್ಲಿ ಸೇರಿದ ಮಂದಿಗೆ ಸುರಿಯುತ್ತಿದ್ದ ಬಾರೀ ಮಳೆಯ ಮಧ್ಯೆಯೂ ರಾತ್ರಿ ಹೊತ್ತು ಒಳಾಂಗಣದಲ್ಲಿ ವಿವಿಧ ಆಟೋಟಗಳನ್ನು ಆಡಿಸುವ ಮೂಲಕ ಕಾರ್ಯಕ್ರಮದ ಮೆರುಗು ಹೆಚ್ಚಿಸಲಾಯಿತು. ಬಳಿಕ ಸದಸ್ಯೇ ಮನೆಯಿಂದ ತಯಾರಿಸಿ ತಂದ ಹತ್ತಾರು ಬಗೆಯ ಹಳ್ಳಿ ತಿನಸುಗಳನ್ನು ಒಟ್ಟಾಗಿ ಸೇವಿಸಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಮುಗಿಸಲಾಯಿತು. ನಡೆದ ಸರಳ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಸಚಿನ್ ಉಚ್ಚಿಲ ವಹಿಸಿದ್ದರು, ಮುಖ್ಯ ಅಥಿತಿಗಳಾಗಿ ಕಾಪು ಬಿಲ್ಲವ ಸಂಘದ ಗೌರವಾಧ್ಯಕ್ಷ ಪ್ರಭಾಕರ್ ಪೂಜಾರಿ, ನಿಕಟಪೂರ್ವ ಅಧ್ಯಕ್ಷೆ ಸೌಮ್ಯಾ ರಾಖೇಶ್, ಕಾರ್ಯದರ್ಶಿ ಸುಮಿತ್ರ, ಬಿರ್ ವೆರ್ ಕಾಪು ಸಂಸ್ಥೆಯ ಸದಸ್ಯ ವಿಕ್ಕಿ ಕಾಪು ಉಪಸ್ಥಿತರಿದ್ದರು. ರಾಖೇಶ್ ಕುಂಜೂರು ಕಾರ್ಯಕ್ರಮ ನಿರ್ವಾಹಿಸಿದರು.