ಉತ್ತಮ ಸಂಸ್ಕಾರವೇ ಬದುಕಿನ ಶ್ರೀಮಂತಿಕೆ: ಗಣೇಶ್ ಅಮೀನ್ ಸಂಕಮಾರ್

ಉತ್ತಮ ಸಂಸ್ಕಾರವೇ ಬದುಕಿನ ಶ್ರೀಮಂತಿಕೆ ಗುರುಪೂರ್ಣಿಮೆಯ ಮೂಲತತ್ವ ಬೌದ್ಧಿಕ ವಿಕಾಸ ಎಂದು ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಕೇಂದ್ರ ಮಂಗಳೂರು ಯೂನಿವರ್ಸಿಟಿಯ ನಿರ್ದೇಶಕ ತುಳು ವಿದ್ವಾಂಸ ಡಾ.ಗಣೇಶ್ ಅಮೀನ್ ಸಂಕಮಾರ್ ನುಡಿದರು.ಮಂಗಳೂರಿನ ಕೊಟ್ಟಾರದ ಭರತಾಂಜಲಿ ರಿಜಿಸ್ಟರ್ ಇದ್ರ ಶ್ರೀ ಮಹಾಗಣಪತಿ ದೇವಸ್ಥಾನ ಗಣೇಶಪುರ ಕಾಟಿಪಳ್ಳ ಇವರ ಆಶ್ರಯದಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಹಮ್ಮಿಕೊಂಡಿರುವ ಗುರು ಪೂರ್ಣಿಮಾ ಉತ್ಸವ ಗುರುನಮನ ಮಾತಾಪಿತರ ಚರಣ ಪೂಜನ ಕಾರ್ಯಕ್ರಮದಲ್ಲಿ ಅವರು, ಉಪನ್ಯಾಸ ನೀಡಿದರು. ಮಕ್ಕಳ ಮನಸ್ಸನ್ನು ಕಟ್ಟುವ ಅಮೂಲ್ಯ ಸಂಪತ್ತು ಸನಾತನ ಸಂಸ್ಕೃತಿಯ ಈ ಶ್ರೇಷ್ಠ ಕಲೆಯೇ ಭರತನಾಟ್ಯ. ಈ ಕಲೆಯನ್ನು ಅಭ್ಯಸಿಸುವ ಮಕ್ಕಳು ಯಾವತ್ತೂ ದಾರಿ ತಪ್ಪಲಾರರು.ಬದುಕನ್ನು ಸುಂದರವಾಗಿ ಕಟ್ಟಬಲ್ಲರು,ಕುಟುಂಬದ ಆದರ್ಶ ಮಕ್ಕಳಾಗಿ,ಸಮಾಜದ ದೊಡ್ಡ ಅಸ್ತಿಗಳಾಗಳು ಸಾಧ್ಯ ವಿದ್ವಾಂಸ ಗಣೇಶ್ ಅಮೀನ್ ಸಂಕಮಾರ್ ಎಂದು ಅವರು ಹೇಳಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಕಟೀಲಿನ ವೇದಮೂರ್ತಿ ಲಕ್ಷ್ಮೀನಾರಾಯಣ ಆಸ್ರಣ್ಣರು ಭಾರತೀಯ ಸಂಸ್ಕೃತಿಯಲ್ಲಿ ಗುರು-ಶಿಷ್ಯ ಪರಂಪರೆಯನ್ನು ಸಂರಕ್ಷಿಸಲಾಗಿದೆ. ಈ ಪರಂಪರೆಯು ಭಾರತೀಯ ಸಂಸ್ಕೃತಿಯ ಭೂಷಣವಾಗಿದೆ ಎಂದರೆ ಅತಿಶಯೋಕ್ತಿಯಾಗಲಾರದು ಎಂದು ಅವರು ಹೇಳಿದರು. ವಿದುಷಿ ಸುಲೋಚನಾ ಭಟ್ ಅವರು ಗುರುನಮನ ಸ್ವೀಕರಿಸಿದರು. ಭರತಾಂಜಲಿಯ ನಿರ್ದೇಶಕ ಶ್ರೀಧರ ಹೊಳ್ಳ ಸ್ವಾಗತಿಸಿದರು. ನೃತ್ಯ ಗುರು ವಿದುಷಿ ಪ್ರತಿಮಾ ಶ್ರೀಧರ್ ವಂದಿಸಿದರು. ಈ ವೇಳೆ ಕ್ಷೇತ್ರದ ಮಾಜಿ ಅಧ್ಯಕ್ಷ ಧರ್ಮೇಂದ್ರ ಗಣೇಶಪುರ ಅಧ್ಯಕ್ಷತೆ ವಹಿಸಿದ್ದು,ಪಾಲಿಕೆ ಸದಸ್ಯ ಲೋಕೇಶ್ ಬೋಲ್ಲಾಜೆ ಅತಿಥಿಗಳಾಗಿ ಭಾಗವಹಿಸಿದ್ದರು.
