Home Posts tagged #summer

ಬೇಸಿಗೆಯಲ್ಲಿ ಬೆವರಿಳಿಸಿ ಬೆಂಡಾಗಿಸುವ ನಿರ್ಜಲೀಕರಣ

ನಮ್ಮ ದೇಹದ ತೂಕದ ಸುಮಾರು 60 ಶೇಕಡಾದಷ್ಟು ನೀರಿನಾಂಶ ಇದ್ದು, ದೇಹದ ಹೆಚ್ಚಿ ಎಲ್ಲಾ ಜೈವಿಕ ಕ್ರಿಯೆಗಳಿಗೆ ನೀರು ಅತೀ ಅಗತ್ಯ. ಸುಮಾರು 70 ಕೆ.ಜಿ ತೂಕದ ವ್ಯಕ್ತಿಯಲ್ಲಿ ಸರಿಸುಮಾರು 40 ಲೀಟರ್‍ಗಳಷ್ಟು ಅಂದರೆ ದೇಹದ ತೂಕದ 60 ಶೇಕಡಾದಷ್ಟು ನೀರು ಇರುತ್ತದೆ. ನಮ್ಮ ದೇಹದಲ್ಲಿನ ನೀರು ಬೇರೆ ಬೇರೆ ಕಾರಣಗಳಿಂದ ಬೇರೆ ಬೇರೆ ರೂಪದಲ್ಲಿ (ಬೆವರು, ಮೂತ್ರ ಇತ್ಯಾದಿಯಾಗಿ)