HomeFresh Newsಕಡಬ: ಶೈಕ್ಷಣಿಕ ಮಾಹಿತಿ ಕಾರ್ಯಗಾರ ಆಯೋಜನೆ

ಕಡಬ: ಶೈಕ್ಷಣಿಕ ಮಾಹಿತಿ ಕಾರ್ಯಗಾರ ಆಯೋಜನೆ

ಕಡಬ, ಏ.: ಒಕ್ಕಲಿಗ ಗೌಡ ಸೇವಾ ಸಂಘ (ರಿ.), ಕಡಬ ತಾಲೂಕು ಇದರ ವತಿಯಿಂದ ಪ್ರೌಢ ಮತ್ತು ಪಿ.ಯು.ಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗಾಗಿ ಶೈಕ್ಷಣಿಕ ಮಾಹಿತಿ ಕಾರ್ಯಗಾರವನ್ನು ಆಯೋಜಿಸಲಾಯಿತು.ಕಾರ್ಯಕ್ರಮವನ್ನು ತಾಲೂಕು ಸಲಹಾ ಸಮಿತಿಯ ಸದಸ್ಯರಾದ ಜನಾರ್ಧನ ಗೌಡ ಪಣೆಮಜಲು ಉದ್ಘಾಟಿಸಿದರು. ಮಾತೃ ಸಮಿತಿಯ ಉಪಾಧ್ಯಕ್ಷರಾದ ತಮ್ಮಯ್ಯ ಗೌಡ ಸುಳ್ಯ ಸಭಾಧ್ಯಕ್ಷತೆ ವಹಿಸಿದರು.


ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಕೀರ್ತಿ ಗೌಡ ಬಿ.ಎಸ್ (ಮುಖ್ಯಸ್ಥರು, ಸಿವಿಲ್ ಇಂಜಿನಿಯರಿಂಗ್ ವಿಭಾಗ, ಸ್ನಾತ್ತಕೋತ್ತರ ಅಧ್ಯಯನ ಮತ್ತು ಸಂಶೋಧನ ಕೇಂದ್ರ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಮೈಸೂರು ಪ್ರಾದೇಶಿಕ ಕೇಂದ್ರ), ಗೋಪಾಲಕೃಷ್ಣ ಗೌಡ ಪುಯಿಲ (ವಿಶ್ರಾಂತ ಜಂಟಿ ಆಯುಕ್ತರು, ಅಬಕಾರಿ ಇಲಾಖೆ) ಹಾಗೂ ಡಾ. ಶಿವಕುಮಾರ್ ಹೊಸೊಳಿಕೆ (ವಿಶ್ರಾಂತ ಪ್ರಾದೇಶಿಕ ನಿರ್ದೇಶಕರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾಂ) ಅವರು ಮೂರು ಹಂತಗಳಲ್ಲಿ ಮಾಹಿತಿ ನೀಡಿದರು.


ಈ ಸಂದರ್ಭದಲ್ಲಿ ತಾಲೂಕು ಸಲಹಾ ಸಮಿತಿಯ ಸದಸ್ಯರು, ಮಾತೃ ಸಮಿತಿಯ ಅಧೀನದಲ್ಲಿರುವ ವಿವಿಧ ಸಮಿತಿಗಳ ಪದಾಧಿಕಾರಿಗಳು, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಸಂಘದ ಅಧ್ಯಕ್ಷರಾದ ಸುರೇಶ್ ಗೌಡ ಬೈಲು ಕೃತಜ್ಞತೆ ಸಲ್ಲಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments