ಅವೈಜ್ಞಾನಿಕ ರಸ್ತೆ ಕಾಮಗಾರಿ : ಧ್ವನಿ ಎತ್ತಿದ ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ

ಬೆಂಗಳೂರು -ಮಂಗಳೂರು ಹೆದ್ದಾರಿಯಿಂದ ಮಂಗಳೂರು – ಶಿವಮೊಗ್ಗ ಹೆದ್ದಾರಿಯನ್ನು ಜೋಡಿಸುವ ರಸ್ತೆಯನ್ನು ಜೋಡಿಸುವ ಕುಲಶೇಖರ ಕಣ್ಣಗುಡ್ಡೆ ರಸ್ತೆಯ ಕಾಮಗಾರಿ ಅವೈಜ್ಞಾನಿಕವಾಗಿ ನಡೆಯುತ್ತಿದೆಯಲ್ಲದೆ, ಈ ಸಂಬಂಧ ಧ್ವನಿ ಎತ್ತಿದ ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಮನಪಾ ವಿಪಕ್ಷ ನಾಯಕ ವಿನಯ ರಾಜ್ ಆರೋಪಿಸಿದ್ದಾರೆ.
 

ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಿರಿದಾದ ಆ ರಸ್ತೆಯನ್ನು ಅಗಲೀಕರಿಸುವ ಕುರಿತಂತೆ ಹಿಂದಿನ ಶಾಸಕ ಜೆ.ಆರ್. ಲೋಬೋ ಅವಧಿಯಲ್ಲಿ ಮನವಿ ಸಲ್ಲಿಕೆಯಾ ಗಿತ್ತು. ಆ ಸಂದರ್ಭ ಜೆ.ಆರ್. ಲೋಬೋ ಅವರು ರಾಷ್ಟ್ರೀಯ ಹೆದ್ದಾರಿಯ ಉನ್ನತ ಅಧಿಕಾರಿಗಳ ಸಭೆ ನಡೆಸಿ ರಸ್ತೆ ಅಗಲೀಕರಣಕ್ಕೆ ತಲಾ 5 ಕೋಟಿ ರೂ.ಗಳಂತೆ 2016ರ ನವೆಂಬರ್ 2 ಮತ್ತು 2017ರ ಮಾರ್ಚ್ 3ರಂದು ಅನುದಾನ ಮಂಜೂರು ಮಾಡಿಸಿದ್ದರು. ಟೆಂಡರ್ ಕರೆದು ಕಾಮಾಗರಿ ಆರಂಭ ಆಗುವ ಸಂದರ್ಭದಲ್ಲಿ ವೇದವ್ಯಾಸ ಕಾಮತ್ ಶಾಸಕರಾಗಿ ಆಯ್ಕೆಯಾಗಿದ್ದರು. ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ರಸ್ತೆಯಂತೆ 12 ಮೀಟರ್ ಅಗಲದ ರಸ್ತೆಯಾಗಿದ್ದು, ಈ ಬಗ್ಗೆ ಖಾಸಗಿ ಜಮೀನು ಪಡೆಯಬೇಕಾದಲ್ಲಿ ಶಾಸಕರು, ಮೇಯರ್, ಮನಪಾ ಅಧಿಕಾರಿಗಳ ಜತೆ ಸಭೆ ನಡೆಸಿ ನೋಟೀಸು ನೀಡಬೇಕಾಗಿತ್ತು. ಪರಿಹಾರವಾಗಿ ಟಿಡಿಆರ್ ಸರ್ಟಿಫಿಕೇಟ್ ನೀಡಲು ಕ್ರಮ ಕೈಗೊಳ್ಳಬೇಕಾಗಿತ್ತು ಎಂದು ಹೇಳಿದರು.

ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಪ್ರವೀಣ್ ಚಂದ್ರ ಆಳ್ವ, ಅನಿಲ್ ಕುಮಾರ್ ಪೂಜಾರಿ, ಕೇಶವ ಮರೋಳಿ, ಅಶ್ರಫ್ ಬಜಾಲ್, ವಿಶ್ವಾಸ್ ಕುಮಾರ್ ದಾಸ್, ಪ್ರಕಾಶ್ ಸಾಲ್ಯಾನ್, ಸಂಶುದ್ದೀನ್, ಶೋಭಾ ಕೇಶವ್, ಡೆನ್ನಿಸ್ ಡಿಸಿಲ್ವಾ, ಆರಿಫ್ ಮೊದಲಾದವರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.